School Summer Holidays: ಶಾಲಾ ಮಕ್ಕಳಿಗೆ ಈ ವರ್ಷದ ಬೇಸಿಗೆ ರಜೆ ಎಷ್ಟು ದಿನ? ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ ಇನ್ನೇನು ಬೇಸಿಗೆ ಶುರುವಾಗುತ್ತಿದೆ. ಶಾಲಾ ಮಕ್ಕಳೆಲ್ಲ ಬೇಸಿಗೆ ಬಂತೆಂದರೆ ಪರೀಕ್ಷೆಗಳನ್ನು ಮುಗಿಸಿ ರಜೆ ಆನಂದಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಬೇಸಿಗೆಗಾಗಿ ಕಾದು ರಜೆಯಲ್ಲಿ ಎಲ್ಲಾದರೂ ಪ್ರವಾಸಕ್ಕೆ ಕರೆದೊಯ್ಯುವಂತೆ ಪೋಷಕರಿಗೆ ದುಂಬಾಲು ಬೀಳುತ್ತಾರೆ. ಪೋಷಕರು ಸಹ ಮಕ್ಕಳಿಗೆ ಬೇಸಿಗೆ ರಜೆ ಬರಲಿ, ಎಲ್ಲಾದ್ರೂ ಟ್ರಿಪ್‌ ಹೋಗೋಣ ಎಂದು ಕಾದು ಕುಳಿತಿರುತ್ತಾರೆ. ಅದರಂತೆ ಈ ಬಾರಿಯ ಬೇಸಿಗೆ ರಜೆ ಯಾವಾಗಿನಿಂದ ಶುರುವಾಗಿದೆ ಎಂಬ ಮಾಹಿತಿ ಇಲ್ಲಿ ತಿಳಿಯಿರಿ..

ಸಾಮಾನ್ಯವಾಗಿ 1ನೇ ತರಗತಿ ಇಂದ 9ನೇ ತರಗತಿ ಮಕ್ಕಳು ಈ ಬೇಸಿಗೆ ರಜೆಯನ್ನು ಆನಂದಿಸುತ್ತಾರೆ. ವರ್ಷದಲ್ಲಿ ಎರಡು ಬಾರಿ ಸರ್ಕಾರಿ ಶಾಲಾ ಮಕ್ಕಳಿಗೆ ದೀರ್ಘ ರಜೆ ಭಾಗ್ಯ ಸಿಗುತ್ತದೆ. ಒಂದು ಪರೀಕ್ಷೆ ಮುಗಿದ ನಂತರ ಸಿಗುವ ಬೇಸಿಗೆ ರಜೆಯಾದರೆ, ಮತ್ತೊಂದು ದಸರಾ ರಜೆ. ದಸರಾಗೆ ಸಾಮಾನ್ಯವಾಗಿ ಒಂದು ವಾರಕ್ಕೂ ಮೀರಿ ರಜೆ ಸಿಗುತ್ತದೆ. ಆದರೆ ಬೇಸಿಗೆ ರಜೆಯು ತಿಂಗಳುಗಟ್ಟಲೆ ಇರುತ್ತೆ. ಹೀಗಾಗಿ ರಜೆ ಸಿಕ್ಕ ಕೂಡಲೇ ಮಕ್ಕಳೆಲ್ಲ ಫುಲ್‌ ಜಾಲಿ..ಜಾಲಿ ಮಾಡುತ್ತಾರೆ. ಕೆಲವರು ಅಜ್ಜಿ-ತಾತನ ಮನೆಗೆ ಗಂಟುಮೂಟೆ ಕಟ್ಟುತ್ತಾರೆ. ಈ ಬಾರಿಯೂ ಬೇಸಿಗೆ ರಜೆಗೆ ಇನ್ನೇನು ತಿಂಗಳಷ್ಟೇ ಬಾಕಿ ಇದೆ.

Karnataka School Summer Holiday Dates Announced Check Details

ಕಳೆದ ವರ್ಷ ಕೂಡ ಕರ್ನಾಟಕ ರಾಜ್ಯದ ಶಾಲಾ ಮಕ್ಕಳಿಗೆ ಏಪ್ರಿಲ್ 11ರಿಂದ ಮೇ ತಿಂಗಳ ಕೊನೆಯ ವಾರದವರೆಗೆ ಬೇಸಿಗೆ ರಜೆ ಘೋಷಿಸಲಾಗಿತ್ತು. ಈ ವೇಳೆಗೆ ರಾಜ್ಯದಲ್ಲಿ 1ನೇ ತರಗತಿಯಿಂದ 9ನೇ ತರಗತಿ ಮಕ್ಕಳ ಎಲ್ಲ ಪರೀಕ್ಷೆಗಳು ಮುಗಿಯುವ ಕಾರಣ ಮಕ್ಕಳಿಗೆ ವಿಶ್ರಾಂತಿ ನೀಡಲು ಬೇಸಿಗೆ ರಜೆ ಭಾಗ್ಯ ನೀಡಲಾಗುತ್ತೆ. ಅದರಂತೆ ಈ ಬಾರಿಯೂ ಏಪ್ರಿಲ್‌ 11ರಿಂದಲೇ ಬೇಸಿಗೆ ರಜೆ ಶುರುವಾಗುವ ಸಾಧ್ಯತೆ ಇದೆ. ಮತ್ತೆ ಜೂನ್‌ ವೇಳೆಗೆ ಶಾಲೆಗಳ ಬಾಗಿಲು ತೆರೆಯಲಿವೆ.

ಸರ್ಕಾರಿ ಆದೇಶದಲ್ಲಿ ತಿಳಿಸಿದಂತೆ ಕಳೆದ ವರ್ಷದ ಅಕ್ಟೋಬರ್‌ 3ರಿಂದ ಅಕ್ಟೋಬರ್‌ 20ರವರೆಗೆ ದಸರಾ ರಜೆ ಘೋಷಣೆ ಮಾಡಲಾಗಿತ್ತು. ಒಟ್ಟು 17 ದಿನ ವಿದ್ಯಾರ್ಥಿಗಳಿಗೆ ದಸರಾ ರಜೆ ಸಿಕ್ಕಿತ್ತು. ಇದಲ್ಲದೆ ಕರ್ನಾಟಕ ಸರ್ಕಾರವು 2025-26ನೇ ಸಾಲಿನ ರಾಜ್ಯ ಶಾಲಾ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದೆ. ಅವುಗಳು ಈ ಮುಂದಿನಂತಿವೆ..

Karnataka School Summer Holiday Dates Announced Check Details

* ಫೆಬ್ರವರಿ 26-ಮಹಾ ಶಿವರಾತ್ರಿ
* ಮಾರ್ಚ್‌ 30-ಯುಗಾದಿ ಹಬ್ಬ
* ಮಾರ್ಚ್ 31-ಖುತುಬ್‌ ಎ ರಂಜಾನ್
* ಏಪ್ರಿಲ್‌ 10ರಿಂದ ಮೇ 30: ಶೈಕ್ಷಣಿಕ ರಜೆ (ಬೇಸಿಗೆ ರಜೆ)
* ಏಪ್ರಿಲ್ 18-ಗುಡ್ ಫ್ರೈಡೇ
* ಏಪ್ರಿಲ್ 30-ಬಸವ ಜಯಂತಿ
* ಮೇ 1-ಕಾರ್ಮಿಕರ ದಿನಾಚರಣೆ
* ಜೂನ್‌ 7-ಬಕ್ರೀದ್
* ಜೂನ್‌ 27-ಮೊಹರಂ ಕೊನೇ ದಿನ
* ಆಗಸ್ಟ್ 15-ಸ್ವಾತಂತ್ರ್ಯ ದಿನಾಚರಣೆ
* ಆಗಸ್ಟ್ 27-ವರಸಿದ್ಧಿ ವಿನಾಯಕ ವ್ರತ
* ಸೆಪ್ಟೆಂಬರ್ 5-ಈದ್ ಮಿಲಾದ್
* ಸೆಪ್ಟೆಂಬರ್-ದಸರಾ ರಜೆ
* ಅಕ್ಟೋಬರ್ 1-ಮಹಾನವಮಿ, ಆಯುಧ ಪೂಜೆ, ವಿಜಯದಶಮಿ
* ಅಕ್ಟೋಬರ್ 2-ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ
* ಅಕ್ಟೋಬರ್ 7-ವಾಲ್ಮೀಕಿ ಜಯಂತಿ
* ಅಕ್ಟೋಬರ್ 22-ಬಲಿಪಾಡ್ಯಮಿ, ದೀಪಾವಳಿ
* ನವೆಂಬರ್ 1-ಕನ್ನಡ ರಾಜ್ಯೋತ್ಸವ
* ನವೆಂಬರ್‌ 8-ಕನಕದಾಸ ಜಯಂತಿ
* ಡಿಸೆಂಬರ್‌ 5-ಹುತ್ತರಿ ಹಬ್ಬ
* ಡಿಸೆಂಬರ್ 25-ಕ್ರಿಸ್‌ಮಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+