ಬೆಂಗಳೂರಿನಲ್ಲಿ ಒಂದೇ ದಿನ 2233 ಕೇಸ್, ರಾಜ್ಯದಲ್ಲಿ ಎಷ್ಟು?
ಬೆಂಗಳೂರು, ಜುಲೈ 30: ಕರ್ನಾಟಕದಲ್ಲಿ ಒಂದೇ ದಿನ 6128 ಮಂದಿಗೆ ಕೊರೊನಾ ವೈರಸ್ ದೃಢವಾಗಿದೆ. ಇಂದಿನ ವರದಿ ಬಳಿಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 118632ಕ್ಕೆ ಏರಿಕೆಯಾಗಿದೆ.
Recommended Video
ಇಂದು ಒಂದೇ ದಿನ ರಾಜ್ಯದಲ್ಲಿ 83 ಜನರು ಕೊವಿಡ್‌ಗೆ ಬಲಿಯಾಗಿದ್ದು, ಇದುವರೆಗೂ ರಾಜ್ಯದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 2230ಕ್ಕೆ ಜಿಗಿದಿದೆ. ಇಂದು 3793 ಜನರು ಕೊವಿಡ್‌ನಿಂದ ಗುಣಮುಖರಾಗಿದ್ದು, ಇದುವರೆಗೂ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 46694.
ಇನ್ನು ಬೆಂಗಳೂರಿನಲ್ಲಿ ಇಂದು 2233 ಜನರಿಗೆ ಕೊವಿಡ್ ಸೋಂಕು ತಗುಲಿದೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 53324ಕ್ಕೆ ಏರಿದೆ. 22 ಜನರು ಇಂದು ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದಾರೆ.

ಮೈಸೂರಿನಲ್ಲಿ ಇಂದು 430 ಕೇಸ್, ಬಳ್ಳಾರಿಯಲ್ಲಿ 343 ಪ್ರಕರಣ, ಉಡುಪಿಯಲ್ಲಿ 248 ಕೇಸ್, ಬೆಂಗಳೂರು ಗ್ರಾಮಾಂತರದಲ್ಲಿ 224 ಸೋಂಕು, ಕಲಬುರಗಿಯಲ್ಲಿ 220 ಕೇಸ್, ಬೆಳಗಾವಿಯಲ್ಲಿ 202 ಜನರಿಗೆ ಕೊರೊನಾ ತಗುಲಿದೆ.
ದಕ್ಷಿಣ ಕನ್ನಡ 198 ಕೇಸ್, ಧಾರವಾಡ 180 ಕೇಸ್, ರಾಯಚೂರು 166 ಕೇಸ್, ಶಿವಮೊಗ್ಗ 143 ಕೇಸ್, ಬಾಗಲಕೋಟೆ 126 ಕೇಸ್, ಚಿಕ್ಕಮಗಳೂರು 126 ಕೇಸ್, ವಿಜಯಪುರ 124 ಕೇಸ್, ಉತ್ತರ ಕನ್ನಡ 120 ಕೇಸ್, ರಾಮನಗರ 106 ಕೇಸ್, ತುಮಕೂರಿನಲ್ಲಿ 104 ಮಂದಿಗೆ ಸೋಂಕು ಅಂಟಿಕೊಂಡಿದೆ.












Click it and Unblock the Notifications