ಹೆಲ್ತ್ ಬುಲೆಟಿನ್; ಕರ್ನಾಟಕದಲ್ಲಿ ಒಬ್ಬ ಕೋವಿಡ್ ಸೋಂಕಿತ ಸಾವು
ಬೆಂಗಳೂರು, ನವೆಂಬರ್ 15; ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಕಳೆದ 24 ಗಂಟೆಯಲ್ಲಿ 171 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, ಒಬ್ಬ ಸೋಂಕಿತ ಮೃತಪಟ್ಟಿದ್ದಾನೆ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಹೇಳಿದೆ.
ಸೋಮವಾರ ಸಂಜೆ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 24 ಗಂಟೆಯಲ್ಲಿ ರಾಜ್ಯದಲ್ಲಿ 255 ಜನರು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 7,912 ಆಗಿದೆ.
ರಾಜ್ಯದ ಪ್ರತಿದಿನದ ಪಾಸಿಟಿವಿಟಿ ದರ ಶೇ 0.25 ಆಗಿದೆ. ಮರಣ ಪ್ರಮಾಣ ಶೇ 0.58 ಆಗಿದೆ ಎಂದು ಹೆಲ್ತ್ ಬುಲೆಟಿನ್‌ನಲ್ಲಿ ಮಾಹಿತಿ ನೀಡಲಾಗಿದೆ. ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ ಪ್ರಕರಣ 29,92,021.

ಇದುವರೆಗೂ ರಾಜ್ಯದಲ್ಲಿ 29,45,934 ಜನರು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 38146 ಒಟ್ಟು ಮೃತಪಟ್ಟಿದ್ದಾರೆ. ಹಲವು ಜಿಲ್ಲೆಗಳಲ್ಲಿ ಶೂನ್ಯ ಹೊಸ ಪ್ರಕರಣಗಳು ದಾಖಲಾಗಿದ್ದು, ಸಾವಿನ ಸಂಖ್ಯೆಯೂ ಇಳಿಕೆಯಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?; ಬೆಂಗಳೂರು ನಗರದಲ್ಲಿ 118 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6574 ಆಗಿದೆ.
ಬಳ್ಳಾರಿ 1, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 2, ಚಾಮರಾಜನಗರ 4, ಚಿಕ್ಕಮಗಳೂರು 1, ದಕ್ಷಿಣ ಕನ್ನಡ 8, ಹಾಸನ 3, ಕಲಬುರಗಿ 2, ಕೊಡಗು 3, ಕೋಲಾರ 1, ಮಂಡ್ಯ 1, ಮೈಸೂರು 14, ರಾಯಚೂರು 1, ಶಿವಮೊಗ್ಗ 1, ತುಮಕೂರು 2, ಉಡುಪಿ 4, ಉತ್ತರ ಕನ್ನಡ 2 ಹೊಸ ಪ್ರಕರಣ ದಾಖಲಾಗಿದೆ.
ಶೂನ್ಯ ಪ್ರಕರಣ ದಾಖಲಾದ ಜಿಲ್ಲೆಗಳು; ಬಾಗಲಕೋಟೆ, ಬೀದರ್, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ಕೊಪ್ಫಳ, ರಾಮನಗರ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಶೂನ್ಯವಾಗಿದೆ.
ಕೋವಿಡ್ ಲಸಿಕೆ ವಿವರ; ನವೆಂಬರ್ 14ರ ಮಾಹಿತಿಯಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1,34,53,187 ಡೋಸ್ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಇವುಗಳಲ್ಲಿ 80,27,654 ಮೊದಲ ಡೋಸ್ ಮತ್ತು 54,25,533 2ನೇ ಡೋಸ್ ಆಗಿದೆ.
ಆದ್ಯತಾ ಗುಂಪುಗಳಲ್ಲಿ 3,76,448 ಆರೋಗ್ಯ ಕಾರ್ಯಕರ್ತರು, 6,90,485 ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ರಾಜ್ಯದಲ್ಲಿ ನವೆಂಬರ್ 14ರಂದು ರಾತ್ರಿ 9 ಗಂಟೆಯ ತನಕ 33,754 ಡೋಸ್ ಲಸಿಕೆ ನೀಡಲಾಗಿದೆ. ಇದುವರೆಗೂ ರಾಜ್ಯದಲ್ಲಿ 6,81,30,086 ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಭಾನುವಾರ ಕರ್ನಾಟಕದಲ್ಲಿ 236 ಹೊಸ ಕೋವಿಡ್ ಪ್ರಕರಣ ದಾಖಲಾಗಿತ್ತು. ಇಬ್ಬರು ಸೋಂಕಿತರು ಮೃತಪಟ್ಟಿದ್ದರು. ದೇಶದ ವಿವಿಧ ರಾಜ್ಯಗಳಲ್ಲಿಯೂ ಹೊಸ ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಇಳಿಕೆಯಾಗಿದೆ. ಸೋಮವಾರ ಮಂಜಾನೆ ಮಾಹಿತಿಯಂತೆ ದೇಶದಲ್ಲಿ 10,229 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ.
ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3,44,47,536ಕ್ಕೆ ಏರಿಯಾಗಿದೆ. ದೇಶದ ಒಟ್ಟು ಸಕ್ರಿಯ ಪ್ರಕರಣಗಳು 1,34,1096 ಆಗಿದೆ. ಇದು 523 ದಿನದಲ್ಲಿ ದಾಖಲಾದ ಅತ್ಯಂತ ಕನಿಷ್ಠ ಹೊಸ ಪ್ರಕರಣವಾಗಿದೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 125 ಜನರು ಮೃತಪಟ್ಟಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 4,63,655ಕ್ಕೆ ಏರಿಕೆಯಾಗಿದೆ. ಹೊಸ ಸಾವಿನ ಸಂಖ್ಯೆಯಲ್ಲಿ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳು ಮೊದಲೆರಡು ಸ್ಥಾನದಲ್ಲಿವೆ.












Click it and Unblock the Notifications