ಕರ್ನಾಟಕ; 1,157 ಹೊಸ ಕೋವಿಡ್ ಪ್ರಕರಣ ದಾಖಲು

ಬೆಂಗಳೂರು, ನವೆಂಬರ್ 16 : ಕರ್ನಾಟಕದಲ್ಲಿ ಸೋಮವಾರ 1,157 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 2,188 ಜನರು ಗುಣಮುಖ ಹೊಂದಿದ್ದಾರೆ.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 8,25,141ಕ್ಕೆ ಏರಿಕೆಯಾಗಿದೆ.

Karnataka Reports 1157 New COVID Cases

ಕರ್ನಾಟಕಲ್ಲಿನ ಕೋವಿಡ್ ಚೇತರಿಕೆ ದರ 95.63% ರಷ್ಟಿದೆ. ರಾಜ್ಯದ 24 ಜಿಲ್ಲೆಗಳಲ್ಲಿ ಸೋಮವಾರ ಯಾವುದೇ ಕೋವಿಡ್ ರೋಗಿ ಮೃತಪಟ್ಟಿಲ್ಲ. ಮರಣ ಪ್ರಮಾಣ 1.33% ರಷ್ಟಿದೆ.

ಆರೋಗ್ಯ ಸಚಿವರ ಟ್ವೀಟ್

ಕರ್ನಾಟಕದಲ್ಲಿ ಸೋಮವಾರ 12 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 26,103. ಇದುವರೆಗೂ ಮೃತಪಟ್ಟವರ ಸಂಖ್ಯೆ 11,541.

2188 ಜನರು ಇಂದು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಗುಣಮುಖರಾದವರ ಸಂಖ್ಯೆ 8,25,141.

ರಾಜ್ಯದಲ್ಲಿ ಇಂದು 9688 ಆಂಟಿಜೆನ್, 66,857 ಆರ್‌ಟಿಪಿಸಿಆರ್ ಸೇರಿದಂತೆ 76,545 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ.

ಬೆಂಗಳೂರು ನಗರದಲ್ಲಿ ಇಂದು 597 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 3,57,877ಕ್ಕೆ ಏರಿಕೆಯಾಗಿದೆ.

ಸೋಮವಾರ ಉಡುಪಿಯಲ್ಲಿ 10, ಮೈಸೂರಿನಲ್ಲಿ 64, ಮಂಡ್ಯದಲ್ಲಿ 56, ಕಲಬುರಗಿಯಲ್ಲಿ 21, ದಕ್ಷಿಣ ಕನ್ನಡ 50, ಚಿಕ್ಕಬಳ್ಳಾಪುರದಲ್ಲಿ 26 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+