ರಾಜ್ಯದಲ್ಲಿ ಇಂದು 1203 ಹೊಸ ಕೊರೊನಾ ವೈರಸ್ ಪ್ರಕರಣ
ಬೆಂಗಳೂರು, ಡಿಸೆಂಬರ್ 12: ರಾಜ್ಯದಲ್ಲಿ ಇಂದು 1203 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 9 ಲಕ್ಷದ ಗಡಿ ತಲುಪಿದೆ. ಇಂದು 1531 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 8,70,002 ಮಂದಿ ಇದುವರೆಗೂ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ರಾಜ್ಯದಲ್ಲಿ ಶನಿವಾರ 11 ಸಾವು ಸಂಭವಿಸಿದ್ದು, 11,939 ಮಂದಿ ಇದುವರೆಗೂ ಮರಣ ಹೊಂದಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 18,254ಕ್ಕೆ ಇಳಿಕೆಯಾಗಿದೆ. ಐಸಿಯುದಲ್ಲಿ 244 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 1,02,229 ಮಂದಿ ಪರೀಕ್ಷೆಗೆ ಒಳಗಾಗಿದ್ದಾರೆ.
ಬೆಂಗಳೂರು ನಗರದಲ್ಲಿ 606 ಪ್ರಕರಣಗಳು ದಾಖಲಾಗಿವೆ. ಇದರಿಂದ ಒಟ್ಟು ಸಂಖ್ಯೆ 3,77,857ಕ್ಕೆ ಏರಿಕೆಯಾಗಿದ್ದು, 36,0724 ಮಂದಿ ಬಿಡುಗಡೆಯಾಗಿದ್ದಾರೆ. 923 ಮಂದಿಯ ಬಿಡುಗಡೆಯೊಂದಿಗೆ ಸಕ್ರಿಯ ಪ್ರಕರಣಗಳು 4230ಕ್ಕೆ ಇಳಿಕೆಯಾಗಿದೆ.

ಉಳಿದ ಜಿಲ್ಲೆಗಳಲ್ಲಿ ಸೋಂಕಿತರು:
ಮೈಸೂರು 59, ಚಿತ್ರದುರ್ಗ 51, ದಕ್ಷಿಣ ಕನ್ನಡ 53, ತುಮಕೂರು 30, ಮಂಡ್ಯ 25, ಹಾಸನ 26, ಚಿಕ್ಕಬಳ್ಳಾಪುರ 39, ಬೆಂಗಳೂರು ಗ್ರಾಮಾಂತರ 23, ಕಲಬುರಗಿ 13, ಬಳ್ಳಾರಿ 23, ದಾವಣಗೆರೆ 13, ಉಡುಪಿ 21, ಕೋಲಾರ 10, ಬೆಳಗಾವಿ 26, ಕೊಡಗು 19, ಉತ್ತರ ಕನ್ನಡ 20, ವಿಜಯಪುರ 18, ಧಾರವಾಡ 10, ಚಿಕ್ಕಮಗಳೂರು 12, ಶಿವಮೊಗ್ಗ 18, ಕೊಪ್ಪಳ 12, ಯಾದಗಿರಿ 12, ಚಾಮರಾಜನಗರ 20 ಪ್ರಕರಣಗಳು ದಾಖಲಾಗಿವೆ. ಬಾಗಲಕೋಟೆ 8, ಬೀದರ್ 16, ಗದಗ 6, ಹಾವೇರಿ 7, ರಾಯಚೂರು 5, ರಾಮನಗರ 2 - ಎರಡಂಕಿಗಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ.
Recommended Video
ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತ ಸಂಖ್ಯೆ 98 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆಯಾಗಿದ್ದು, ಕೋವಿಡ್ ವಿರುದ್ಧದ ಹೋರಾಟದಲ್ಲಿ ವಿಶ್ವಾಸ ಮೂಡಿಸಿದೆ.
ಶನಿವಾರ ಬೆಳಗಿನ ವೇಳೆಗೆ ದೇಶದಲ್ಲಿ 30,005 ಹೊಸ ಪ್ರಕರಣಗಳು ವರದಿಯಾಗಿವೆ. ಒಂದು ವಾರದಲ್ಲಿ ಮೊದಲ ಬಾರಿಗೆ 500ಕ್ಕಿಂತ ಕಡಿಮೆ ಸಾವುಗಳು ದಾಖಲಾಗಿದ್ದು, 442 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.












Click it and Unblock the Notifications