Karnataka rain: ರಾಜ್ಯಕ್ಕೆ ಆಗಸ್ಟ್ 28ರ ತನಕ ಮಳೆ, ಆ.24ರ ನಂತರ ಒಳನಾಡಿನಲ್ಲಿ ಮಳೆ ಏರಿಕೆ, ವಿವರ

ಬೆಂಗಳೂರು, ಆಗಸ್ಟ್ 20: ಕರ್ನಾಟಕದಾದ್ಯಂತ ಮತ್ತೆ ಮುಂಗಾರು ಚುರುಕಾಗುವ ಲಕ್ಷಣಗಳು ಕಂಡು ಬರುತ್ತಿವೆ. ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಿದ್ದು, ಈ ಮಳೆ ಮುಂದಿನ ನಾಲ್ಕು ದಿನ ಮುಂದುವರಿಯಲಿದೆ. ನಂತರ ಉತ್ತರ ಒಳನಾಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ.

ಕರ್ನಾಟಕದಲ್ಲಿ ಒಟ್ಟಾರೆ ಆಗಸ್ಟ್ಇ 28ರವರೆಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಶನಿವಾರ ಕರಾವಳಿ ಮೂರು ಜಿಲ್ಲೆಗಳು ಯೆಲ್ಲೋ ಅಲರ್ಟ್ ಪಡೆದಿದ್ದು, ಇಂದು ಅಲ್ಲಿ ಕಡಿಮೆ ಮಳೆಯಾಗಿದೆ. ಆಗಸ್ಟ್ 24ರವರೆಗೆ ಕರಾವಳಿ ಭಾಗದಲ್ಲಿ ಸಾಧಾರಣದಿಂದ ವ್ಯಾಪಕ ಮಳೆ ಮುಂದುವರಿಯಲಿದೆ. ಈ ವೇಳೆ ಒಳನಾಡು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ, ಕೆಲವೆಡೆ ಜೋರು ಮಳೆ ನಿರೀಕ್ಷೆ ಇದೆ.

Karnataka Rain: Moderate To Normal Rain Expect In Coastal And Interior Districs Till August 28th

ಶನಿವಾರ ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ದಾವಣಗೆರೆಯಲ್ಲಿ ಸಾಧಾರಣವಾಗಿ ಮಳೆ ಆಗಿದ್ದು, ಚಿತ್ರದುರ್ಗ ಭಾಗದಲ್ಲಿ ತಂತುರು ಮಳೆ ದಾಖಲಾಯಿತು. ಎಲ್ಲೆಡೆ ಬಿಸಿಲಿನ ವಾತಾವರಣೆ ಮರೆಯಾಗಿ ಚಳಿ ಹಾಗೂ ತಂಪು ವಾತಾವಣರ ಕಂಡು ಬಂದಿದೆ.

ಉತ್ತರ ಕರ್ನಾಟಕಕ್ಕೆ ಆ.24ರಿಂದ ಮಳೆ ಏರಿಕೆ
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬೀದರ್, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಈಗಲೂ ಕೆಲವೆಡೆ ಬಿಸಿಲಿನ ಕಾವಿದ್ದು, ಶನಿವಾರ ಅಲ್ಲಲ್ಲಿ ಮಳೆ ಬಿದ್ದಿದೆ. ಆಗಸ್ಟ್ 24ರ ನಂತರ ಇದೇ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಚುರುಕುಗೊಳ್ಳಲಿದೆ. ಉತ್ತರ ಕರ್ನಾಟಕ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ತಿಂಗಳಾಂತ್ಯಕ್ಕೆ ಮಳೆ ಆರ್ಭಟಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳ ವಿವಿಧೆಡೆ ಸಾಧಾರಣ ಮಳೆ ಕಂಡು ಬರಲಿದೆ. ಎರಡು ದಿನದ ನಂತರ ಇಲ್ಲಿ ಮಳೆ ತುಸು ಇಳಿಕೆ ಆಗುವ ಲಕ್ಷಣಗಳು ಇವೆ.

Karnataka Rain: Moderate To Normal Rain Expect In Coastal And Interior Districs Till August 28th

ಸಾಧಾರಣ ಮಳೆ ನಿರೀಕ್ಷೆ
ಇನ್ನು ಮುಂದಿನ 24 ಗಂಟೆಯಲ್ಲಿ ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಹಲವು ಕಡೆಗಳಲ್ಲಿ ಮತ್ತು ಒಳನಾಡಿನ ಕೆಲವು ಕಡೆಗಳಲ್ಲಿ ಮಳೆ/ಗುಡುಗು ಸಹಿತ ಸುರಿಯುವ ನಿರೀಕ್ಷೆಗಳು ಇವೆ. ಇದಲ್ಲದೇ ಭಾರಿ ಮಳೆ ಮುನ್ನೆಚ್ಚರಿಕೆ ಸದ್ಯಕ್ಕೆ ಇಲ್ಲದಾಗಿದ್ದು, ಕರಾವಳಿಯ ಮೀನುಗಾರರಿಗೆ ಯಾವುದೇ ಮುನ್ನೆಚ್ಚರಿಕೆ ನೀಡಲಾಗಿಲ್ಲ.

ಇನ್ನೂ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಕೆಲವು ಕಡೆಗಳಲ್ಲಿ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಷಿಯಸ್ ಕಂಡು ಬರಲಿದೆ ಎಂದು KSNDMC ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+