Karnataka Rain: ಕರ್ನಾಟಕದಲ್ಲಿ ಭರ್ಜರಿ ಮಳೆ : ಜುಲೈ 19ರವರೆಗೂ ವರುಣನ ಅರ್ಭಟ- ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ
ಬೆಂಗಳೂರು, ಜುಲೈ 15: ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಆರಂಭಕ್ಕೆ ಮುನ್ನವೇ ಶುರುವಾಗ ಮಳೆ ಇಂದಿನವರೆಗೂ ಉತ್ತಮ ಮಳೆಯಾಗುತ್ತಿದ್ದು, ನದಿ ಜಲಾಶಯಗಳಿಗೆ ಜೀವ ಕಳೆ ಬಂದಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳು ಹಾಗೂ ಮಳೆನಾಡಿನಲ್ಲಿ ಅಬ್ಬರದ ಮಳೆ ಸುರಿಯುತ್ತಲೇ ಇದೆ. ಜುಲೈ 19ರವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೌದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮಳೆಯಾಗುತ್ತಿದ್ದು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಜುಲೈ 19 ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ರೆಡ್ ಅಲರ್ಟ್ ಘೋಷಿಸಿದೆ.

ಮಹಾರಾಷ್ಟ್ರ ಹಾಗೂ ಉತ್ತರ ಕೇರಳದ ಕರಾವಳಿಯ ಉದ್ದಕ್ಕೂ ಸರಾಸರಿ ಸಮುದ್ರ ಮಟ್ಟದಲ್ಲಿ ಉಂಟಾಗಿರುವ ಮೇಲುಬ್ಬರದ ಪರಿಣಾಮ ಮತ್ತು ಆಂಧ್ರಪ್ರದೇಶದ ಕರಾವಳಿಯ ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಚಂಡಮಾರುತದ ಪರಿಚಲನೆಯಿಂದಾಗಿ, ತುಂತುರು ಮಳೆ ಮುಂದುವರೆಯುವ ಸಾದ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ತಿಳಿಸಿದೆ.
ರಾಜ್ಯದ ಕರಾವಳಿ & ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಇಂದು ಅತ್ಯಧಿಕ ಮಳೆಯಾಗಲಿದ್ದು, ಜುಲೈ 16 ರಿಂದ 19 ರವರೆಗೆ ಜೋರಾದ ಗಾಳಿಯೊಂದಿಗೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳಿಗೆ, ಇಂದು ಅತಿ ಭಾರಿ ಮಳೆಯಾಗಲಿದ್ದು, ಆರೆಂಜ್ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಜುಲೈ 16 & 17 ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಇನ್ನೂ ರಾಜ್ಯದಲ್ಲಿ ಕಳೆದ 15 ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಹಾಸನ, ಕೊಡಗು, ಮೈಸೂರಿನಲ್ಲಿ ಕೂಡ ಮಳೆಯಾಗಲಿದೆ. ಇನ್ನೂ ಆಗುಂಬೆ, ಕುಮಟಾ, ಗೇರುಸೊಪ್ಪ, ಕದ್ರಾ, ಹೊನ್ನಾವರದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಕಾರವಾರ, ಶಿರಾಲಿ, ಗೋಕರ್ಣ, ಮಂಕಿ, ಸಿದ್ದಾಪುರ, ಕಮ್ಮರಡಿ, ನಾಪೊಕ್ಲು, ಜೋಯಿಡಾ, ಕುಂದಾಪುರ, ಸೋಮವಾರಪೇಟೆ, ಕೊಪ್ಪದಲ್ಲಿ ಮಳೆಯಾಗಿದೆ.
ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಮುಂಜಾನೆ ನಗರದ ಕೆಲ ಭಾಗಗಳಲ್ಲಿ ಮಳೆಯಾಗಿದೆ. ಧರ್ಮಸ್ಥಳ, ಯಲ್ಲಾಪುರ, ಭಾಗಮಂಡಲ, ಹುಂಚದಕಟ್ಟೆ, ಕಳಸ, ಸುಳ್ಯ, ಬನವಾಸಿ, ಕಿರವತ್ತಿ, ಹಳಿಯಾಳ, ಬೆಳ್ತಂಗಡಿ, ಮುಂಡಗೋಡು, ಕುಷ್ಟಗಿ, ಹಾರಂಗಿ, ಎನ್ಆರ್ಪುರ, ತ್ಯಾಗರ್ತಿ, ಬಾಳೆಹೊನ್ನೂರು, ಕಾರ್ಕಳ, ಉಪ್ಪಿನಂಗಡಿ, ಬೆಳಗಾವಿ, ಕೊಟ್ಟಿಗೆಹಾರ, ಮುಲ್ಕಿ, ಪುತ್ತೂರು, ಬಾದಾಮಿ, ಸಂಕೇಶ್ವರ, ಮುದಗಲ್, ರಾಣೆಬೆನ್ನೂರು, ಯಡವಾಡ, ಧಾರವಾಡ, ತರೀಕೆರೆ, ಕುಶಾಲನಗರ, ಸರಗೂರು, ಬಂಡೀಪುರ, ದೊಡ್ಡಬಳ್ಳಾಪುರದಲ್ಲಿ ಮಳೆಯಾಗಿದೆ.












Click it and Unblock the Notifications