Karnataka Railways: ರೈಲು ಪ್ರಯಾಣಿಕರೇ ಗಮನಿಸಿ..: ಕರ್ನಾಟಕದ ಈ ರೈಲುಗಳು ಈ ದಿನಾಂಕದಂದು ರದ್ದು

ಬೆಂಗಳೂರು ನವೆಂಬರ್ 29: ಕಾಮಗಾರಿ ಕಾರಣ ನೈಋತ್ಯ ರೈಲ್ವೆ ಹಲವೆಡೆ ರೈಲು ಸಂಚಾರವನ್ನು ರದ್ದುಗೊಳಿಸಿದೆ. ಇದರಿಂದಾಗಿ ಪ್ರಯಾಣಿಕರು ರದ್ದಾದ ರೈಲುಗಳ ಬಗ್ಗೆ ಗಮನಿಸಲು ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಕೆಲ ರೈಲುಗಳ ಸಂಚಾರ ಭಾಗಶ: ರದ್ದುಗೊಳಿಸಲಾಗಿದೆ ಇನ್ನೂ ಕೆಲ ರೈಲುಗಳ ಸಂಖ್ಯೆಯನ್ನು ಬದಲಾಯಿಸಲಾಗಿದೆ. ಹಾಗಾದರೆ ಯಾವೆಲ್ಲಾ ರೈಲುಗಳನ್ನು ಯಾವ ದಿನಾಂಕದಂದು ಭಾಗಶ: ರದ್ದುಗೊಳಿಸಲಾಗಿದೆ ಹಾಗೂ ಯಾವ ರೈಲುಗಳನ್ನು ಮಾರ್ಗ ಬದಲಾಯಿಸಲಾಗಿದೆ ಎಂದು ಈಗ ತಿಳಿಯೋಣ.

ರಾಯದುರ್ಗ ಮತ್ತು ಕದಿರಿದೇವರಪಲ್ಲಿ ನಿಲ್ದಾಣ ಮತ್ತು ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ಕಾಮಗಾರಿ ನಡೆಯುತ್ತಿದೆ. ಯಾರ್ಡ್‌ ಮಾರ್ಪಾಡು ಮತ್ತು ಅಗತ್ಯ ಸುರಕ್ಷತಾ ಸಂಬಂಧಿತ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ಎಂಜಿನಿಯರಿಂದ ಕಾಮಗಾರಿ ನಡೆದಿದೆ. ಹೀಗಾಗಿ ಈ ಕೆಳಗಿನ ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.

Karnataka Railways These trains in Karnataka cancelled on this date

*ಮೀರಜ್-ಕ್ಯಾಸಲ್ ರಾಕ್ ಎಕ್ಸ್‌ಪ್ರೆಸ್ ರೈಲು ಸಂಚಾರ ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ ನಡುವಿನ ರೈಲು ಸಂಖ್ಯೆ 17333 ಅನ್ನು ಡಿಸೆಂಬರ್‌ 1 ರಿಂದ 31ರವರೆಗೆ ಭಾಗಶ: ರದ್ದುಗೊಳಿಸಲಾಗಿದೆ. ಈ ರೈಲು ಲೋಂಡಾವರೆಗೂ ಮಾತ್ರ ಸಾಗುತ್ತದೆ.

* ಕ್ಯಾಸಲ್ ರಾಕ್- ಮೂರಜ್ ಡೈಲಿ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 17334 ಸಂಚಾರ ಕ್ಯಾಸಲ್ ರಾಕ್ ಮತ್ತು ಲೋಂಡಾ ನಿಲ್ದಾಣಗಳ ನಡುವೆ ಡಿಸೆಂಬರ್‌ 1 ರಿಂದ 31ರವರೆಗೆ ಭಾಗಶ: ರದ್ದುಗೊಳಿಸಲಾಗಿದೆ. ಈ ರೈಲು ಲೋಂಡಾ ನಿಲ್ದಾಣದಿಂದ ಹೊರಡಲಿದೆ.

* ತಿರುಪತಿ-ಕದಿರಿದೇವರಪಲ್ಲಿ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಸಂಖ್ಯೆ 07589 ಸಂಚಾರ ಡಿಸೆಂಬರ್ 1 ರಿಂದ 31ರವರೆಗೆ ಗುಂತಕಲ್ ಮತ್ತು ಕದಿರಿದೇವರಪಲ್ಲಿ ನಿಲ್ದಾಣಗಳ ನಡುವೆ ಭಾಗಶ: ರದ್ದಾಗಲಿದೆ.

* ಕದಿರಿದೇವರದಲ್ಲಿ ತಿರುಪತಿ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಸಂಖ್ಯೆ 07590 ಸಂಚಾರ ಡಿಸೆಂಬರ್ 2 ರಿಂದ 1ರವರೆಗೆ ಕದಿರಿದೇವರಪಲ್ಲಿ ಮತ್ತು ಗುಂತಕಲ್ ನಿಲ್ದಾಣಗಳ ನಡುವೆ ಭಾಗಶ: ರದ್ದಾಗಲಿದೆ. ಇದು ಗುಂತಕಲ್ ನಿಲ್ದಾಣದಿಂದ ಸಂಚಾರ ಮಾಡಲಿದೆ.

* ರೈಲು ಸಂಖ್ಯೆ 22883 ಪುರಿ-ಯಶವಂತಪುರ ಗರೀಬ ರಥ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ನವೆಂಬರ್ 29ರಂದು ಹೊರಟು ನಂದ್ಯಾಲ್, ಯರಗುಂಟ, ಗೂತ್ತಿ ಫೋರ್ಟ್ ಅನಂತಪುರ ನಿಲ್ದಾಣಗಳ ಮೂಲಕ ಚಲಿಸಲಿದೆ. ಡೋನ್‌ನಲ್ಲಿ ನಿಲುಗಡೆ ಇರುವುದಿಲ್ಲ.

* ರೈಲು ಸಂಖ್ಯೆ 22832 ಯಶವಂತಪುರ-ಹೌರಾ ಸಾಪ್ತಾಹಿಕ ಸೂಪರ್‌ ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು ನವೆಂಬರ್ 29ರಂದು ಹೊರಟು ಅನಂತಪುರ, ಗೂತ್ತಿ ಫೋರ್ಟ್‌ ಯಾಗುಂಟೆ, ನಂದ್ಮಾಲೆ ನಿಲ್ದಾಣಗಳ ಮೂಲಕ ಚಲಿಸಲಿದೆ. ಹೀಗಾಗಿ ಗೂತ್ತಿ ಮತ್ತು ಡೋನ್‌ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+