Text Book Price Hike: ಕರ್ನಾಟಕ ಖಾಸಗಿ ಶಾಲೆಗಳ ಪಠ್ಯ ಪುಸ್ತಕ ದರ ಶೇ.25ರಷ್ಟು ಹೆಚ್ಚಳ, ಕಾರಣ ತಿಳಿಯಿರಿ
ಬದುಕಿನಿದ್ದಕ್ಕೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಲೇ ಇರುತ್ತವೆ. ಆ ಸಾಲಿಗೆ ಇದೀಗ ಶಾಲಾ ಕಾಲೇಜುಗಳು ಪಠ್ಯ ಪುಸ್ತಕವು ಸೇರಿರುವುದು ಲಕ್ಷಾಂತರ ಮಂದಿ ಪೋಷಕರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಲಿದೆ. ಹೇಗೆ? ಇಲ್ಲಿದೆ ಮಾಹಿತಿ.
ಬೆಂಗಳೂರು, ಮಾರ್ಚ್ 17: ಬದುಕಿನಿದ್ದಕ್ಕೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಲೇ ಇರುತ್ತವೆ. ಆ ಸಾಲಿಗೆ ಇದೀಗ ಶಾಲಾ ಕಾಲೇಜುಗಳು ಪಠ್ಯ ಪುಸ್ತಕವು ಸೇರಿರುವುದು ಲಕ್ಷಾಂತರ ಮಂದಿ ಪೋಷಕರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಲಿದೆ.
ಕೊರೊನಾ ನಂತರ ಕ್ರಮೇಣವಾಗಿ ದೇಶದಲ್ಲಿ ಅಡುಗೆ ಅನಿಲ ಮತ್ತು ವಾಣಿಜ್ಯ ಅನಿಲ (ಸಿಲಿಂಡರ್), ಪೆಟ್ರೋಲ್ ಮತ್ತು ಡೀಸೆಲ್, ಊಟ, ತಿಂಡಿ ಸೇರಿದಂತೆ ಅತ್ಯಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಇದೀಗ ಖಾಸಗಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳ ಪಠ್ಯ ಪುಸ್ತಕದಿಂದಲೂ ಹೆಚ್ಚಿನ ಹೊರೆ ಬೀಳಲಿದೆ. ಈ ಬೆಲೆ ಏರಿಕೆಯ ಬಿಸಿ ಪೋಷಕರಿಗೆ ತಟ್ಟಿದೆ.

ಖಾಸಗಿ ಶಾಲಾ, ಕಾಲೇಜುಗಳ ಮಕ್ಕಳ ಪಠ್ಯ ಪುಸ್ತಕದ ದರ ಶೇಕಡ 25ರಷ್ಟು ದುಬಾರಿ ಆಗಿದೆ. ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪಠ್ಯಪುಸ್ತಕ ಸೊಸೈಟಿ (ಕೆಟಿಬಿಎಸ್) ಪಠ್ಯ ಪುಸ್ತಕ ಒದಗಿಸುತ್ತದೆ. ಸದ್ಯದ ದುಬಾರಿ ಪೋಷಕರಿಗೆ ಸಂಕಷ್ಟ ತಂಡೊಡ್ಡಲಿದೆ.
ಕರ್ನಾಟಕದ 19,000 ಶಾಲೆ-ಕಾಲೇಜುಗಳ ಒಟ್ಟು 50 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಪೋಷಕರಿಗೆ ಹೊರೆಯಾಗಲಿದೆ. ರಾಜ್ಯ ಪಠ್ಯಕ್ರಮ ಬೋಧನೆ ಮಾಡುವ ಖಾಸಗಿ ಶಾಲೆ ಮತ್ತು ಪಿಯು ಕಾಲೇಜುಗಳ ಮಕ್ಕಳಿಗೆ ಸರ್ಕಾರದಿಂದ ಪಠ್ಯಪುಸ್ತಕ ಪೂರೈಕೆ ಮಾಡಲಿದೆ. ಸದರಿ ಈ ಪುಸ್ತಕಗಳ ಬೆಲೆ ಶೇಕಡ 25ರಷ್ಟು ಏರಿಕೆ ಆಗಿದೆ. ಅದು ಮುಂದಿನ ಶೈಕ್ಷಣಿಕ ವರ್ಷದಿಂದ ಅನ್ವಯವಾಗಲಿದೆ. ಶಿಕ್ಷಣ ಇಲಾಖೆ ವತಿಯಿಂದ ರಾಜ್ಯ ಪಠ್ಯಕ್ರಮದ ಪುಸ್ತಕಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮುದ್ರಣ ಮಾಡಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆ. ಪಿಯು ಕಾಲೇಜುಗಳಿಗೆ ಪೂರೈಕೆ ಮಾಡಲಾಗುತ್ತದೆ.
ಅಗತ್ಯಕ್ಕೆ ಅನುಗುಣವಾಗಿ ಮುದ್ರಿಸಿ ಪಠ್ಯ ಪೂರೈಕೆ
ಇನ್ನೂ ಸರ್ಕಾರಿ ವ್ಯಾಪ್ತಿಯ ಸರ್ಕಾರಿ ಹಾಗೂ ಮತ್ತು ಅನುದಾನಿತ ಶಾಲೆ ಕಾಲೇಜುಗಳಿಗೆ ಉಚಿತವಾಗಿ ಪಠ್ಯಪುಸ್ತಕ ಒದಗಿಸಲಾಗುತ್ತದೆ. ಮುಂದಿನ ಶೈಕ್ಷಣಿಕ ಸಾಲು ಆರಂಭಕ್ಕೂ ಮೊದಲು ಖಾಸಗಿ ಶಾಲೆ, ಕಾಲೇಜುಗಳು ಒಂದರಿಂದ 12ನೇ ತರಗತಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೇ. 10ರಷ್ಟು ಮುಂಗಡ ಹಣ ಸರ್ಕಾರಕ್ಕೆ ಪಾವತಿಸುವ ಮೂಲಕ ಬೇಡಿಕೆ ಇಡಬೇಕು. ಅದನ್ನು ಸ್ವೀಕರಿಸಿ ಅಗತ್ಯ ಅಂಕಿ ಸಂಖ್ಯೆಗೆ ತಕ್ಕಂತೆ ಪಠ್ಯಪುಸ್ತಕ ಮುದ್ರಿಸಿ ಒದಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಪ್ರಸಕ್ತ 2023-24ನೇ ಶೈಕ್ಷಣಿಕ ಸಾಲಿನ ಪಠ್ಯ ಪುಸ್ತಕಗಳಿಗೆ ಈ ಹಿಂದಿನ ವರ್ಷಕ್ಕಿಂತ ಶೇಕಡ 20 ರಿಂದ 25ರಷ್ಟು ಬೆಲೆ ಏರಿಕೆ ಮಾಡಲಾಗಿದೆ. 2022-23ನೇ ಸಾಲಿನಲ್ಲಿ 46 ರೂಪಾಯಿ ಇದ್ದ ಗಣಿತ ಭಾಗ-2 ಪಠ್ಯ ಪುಸ್ತಕ ದರ ಈ ವರ್ಷ 60 ರೂಪಾಯಿಗೆ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಬೆಲೆ ಏರಿಕೆ ಮತ್ತು ಸರಕು ಸೇವಾ ತೆರಿಗೆ (GST) ಕಾರಣದಿಂದ ಪಠ್ಯಪುಸ್ತಕ ದರ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
ರಷ್ಯಾ - ಉಕ್ರೇನ್ ಯುದ್ಧದಿಂದಾ ಕಾಗದ ದುಬಾರಿ
ರಷ್ಯಾ - ಉಕ್ರೇನ್ ರಾಷ್ಟ್ರಗಳ ಮಧ್ಯದ ಯುದ್ಧದ ಪರಿಣಾಮವು ಜಾಗತಿಕ ಕಾಗದದ ಮೇಲೆ ಬಿದ್ದಿದೆ. ಈ ಮೊದಲು ತೈಲ, ಅಡುಗೆ ಎಣ್ಣೆ ಮೇಲೆ ಮಾತ್ರ ಬಿದ್ದಿತ್ತು, ಇದೀಗ, ಪಠ್ಯ ಪುಸ್ತಕದ ಮೇಲೂ ಅವರ ಛಾಯೆ ಆವರಿಸಿದೆ. ಹೀಗಾಗಿ ಕಾಗದದ ಬೆಲೆ ಶೇಕಡಾ 65 ಪ್ರತಿಶತದಷ್ಟು ಏರಿಕೆ ಆಗಿದೆ. ಅದೇ ರೀತಿ, ಜಿಎಸ್ಟಿಯಲ್ಲಿ ಕೂಡ ಶೇಕಡಾ 12 ರಿಂದ ಶೇಕಡಾ 18 ರಷ್ಟು ಹೆಚ್ಚಾಗಿದೆ. ಮೂರು ವರ್ಷಗಳ ಹಿಂದೆ ಅದು ಕೇವಲ ಶೇಕಡಾ 5ರಷ್ಟು ಏರಿಕೆ ಆಗಿದೆ ಎಂದು ರಾಜ್ಯ ಪಠ್ಯಪುಸ್ತಕ ಮುದ್ರಕರ ಸಂಘವು ಮಾಹಿತಿ ನೀಡಿದೆ.

ರಾಜ್ಯದಲ್ಲಿ 10ನೇ ತರಗತಿಯ ಪಠ್ಯಪುಸ್ತಕಗಳಿಗೆ ಕೆಟಿಬಿಎಸ್‌ಗೆ ಇಂಡೆಂಟ್ ಹಾಕಿದಾಗ, ಗಣಿತ ಭಾಗ-2ರ ಬೆಲೆ 46 ರೂ. ಇತ್ತು. ಈಗ ಅದರ ದರ ಬೆಲೆ 60 ರೂಪಾಯಿಗೆ ಹೆಚ್ಚಾಗಿದೆ. ಗಣಿತ ಭಾಗ-1 ಪುಸ್ತಕ 45 ರೂಪಾಯಿ ಇದ್ದ ಬೆಲೆ ಈಗ 58 ರೂಪಾಯಿಗೆ ಹೆಚ್ಚಳವಾಗಿದೆ. ವಿಜ್ಞಾನ ಭಾಗ-2 ದರವು 34 ರೂಪಾಯಿಯಿಂದ 44 ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ಈ ಬಗ್ಗೆ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಡಿ,ಶಶಿಕುಮಾರ್ ತಿಳಿಸಿದರು.












Click it and Unblock the Notifications