Karnataka Pre Poll Survey: ಸಂವಾದ ಸಮೀಕ್ಷೆ ಬಹಿರಂಗ; ಬಹುಮತ ಯಾರಿಗೆ? ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಬೆಂಗಳೂರು,ಮೇ4: ರಾಜ್ಯ ವಿಧಾನಸಭಾ ಚುನಾವಣಾ ರಣಕಣ ರಂಗೇರಿದೆ. 2023 ರ ವಿಧಾನಸಭಾ ಚುನಾವಣೆಯನ್ನ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಮತದಾರ ಓಲೈಕೆಗೆ ಹಲವು ಭರವಸೆಯನ್ನ ನೀಡಿರುವರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿವೆ.
ಇತ್ತ ಗೆಲ್ಲುವ ತವಕದಲ್ಲಿರುವ ರಾಜಕೀಯ ಪಕ್ಷಗಳು ತಮ್ಮದೇ ಆದ ಸರ್ವೆಯನ್ನ ನಡೆಸಿದ್ದು, ಹಲವು ಸರ್ವೆಯಿಂದ ಅತಂತ್ರ ಫಲಿತಾಂಶ ಪ್ರಕಟಗೊಂಡಿದ್ದು, ಮತ್ತಷ್ಟು ಚುನಾವಣಾ ತಂತ್ರಗಾರಿಕೆಯನ್ನ ನಡೆಸಿದ್ದು, ಚುನಾವಣಾ ತಯಾರಿಯನ್ನು ಚುರುಕುಗೊಳಿಸಿವೆ.

ಇನ್ನೂ ಆಡಳಿತರೂಢ ಬಿಜೆಪಿ ಮಿಷನ್ 150 ಟರ್ಗೆಟ್ ಇಟ್ಟುಕೊಂಡಿದರೆ, ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಹಲವು ಭರವಸೆಗಳನ್ನ ರಾಜ್ಯದ ಜನರಿಗೆ ನೀಡುವ ಮೂಲಕ ಗೆಲ್ಲುವ ವಿಶ್ವಾಸವನ್ನ ಇಟ್ಟುಕೊಂಡಿದ್ದು, ಇದೀಗ ಸಂವಾದ ಸಮೀಕ್ಷೆ ಪ್ರಕಟಗೊಂಡಿದೆ
2023ರ ವಿಧಾನಸಭೆ ಚುನಾವಣೆಯಲ್ಲಿ ಹಲವು ಸಮೀಕ್ಷೆಯಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎನ್ನಲಾಗಿತ್ತು. ಆದರೆ, ಸಂವಾದ ಸಮೀಕ್ಷೆಯಲ್ಲಿ ಆಡಳಿತರೂಢ ಬಿಜೆಪಿಗೆ 118 ರಿಂದ130 ಸ್ಥಾನಗಳು ಪಡೆದುಕೊಂಡಿದ್ದು, ಕಾಂಗ್ರೆಸ್ 69 ರಿಂದ 78 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಲಾಗಿದ್ದು, ಇನ್ನೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ 23 ರಿಂದ 26 ಸ್ಥಾನಗಳು ಸಿಗಬಹುದು ಎಂದು ಸರ್ವೆಯಿಂದ ತಿಳಿದು ಬಂದಿದೆ. 2 ಸ್ಥಾನವನ್ನ ಸ್ವತಂತ್ರ ಅಭ್ಯರ್ಥಿಗಳು ಗೆಲ್ಲಬಹುದು ಎನ್ನಲಾಗಿದೆ.
ಇನ್ನೂ ಕಿತ್ತೂರು ಕರ್ನಾಟಕದಲ್ಲಿ 50 ಕ್ಷೇತ್ರಗಳ ಪೈಕಿ ಬಿಜೆಪಿ 32 ರಿಂದ 34 ಸ್ಥಾನಗಳನ್ನ ಗೆಲ್ಲಬಹುದು ಎನ್ನಲಾಗಿದ್ದು, ಕಾಂಗ್ರೆಸ್ 15 ರಿಂದ 17 ಕ್ಷೇತ್ರಗಳು ಹಾಗೂ ಜೆಡಿಎಸ್ 1 ಕ್ಷೇತ್ರಗಳನ್ನ ಗೆಲ್ಲಬಹುದು ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಅಲ್ಲದೇ 41 ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 19 ರಿಂದ 21 ಕ್ಷೇತ್ರಗಳನ್ನ ಪಡೆದರೇ ಆಡಳಿತರೂಢ ಬಿಜೆಪಿ 16 ರಿಂದ 19 ಸ್ಥಾನಗಳನ್ನ ಜೆಡಿಎಸ್ 3 ರಿಂದ 4 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಮೂಲಕ ಅಂದಾಜಿಸಲಾಗಿದೆ.

ಮಧ್ಯ ಕರ್ನಾಟಕದ 25 ಕ್ಷೇತ್ರಗಳ ಪೈಕಿ ಆಡಳಿತರೂಢ ಬಿಜೆಪಿ 17 ರಿಂದ 20 ಸ್ಥಾನಗಳನ್ನ ಪಡೆಲಿದೆ ಎಂದು ಸಂವಾದ ಸಮೀಕ್ಷೆ ತಿಳಿಸಿದ್ದು, ಕಾಂಗ್ರೆಸ್ 4 ರಿಂದ 7 ಸ್ಥಾನವನ್ನ ಪಡೆದಿದ್ದು, ಜೆಡಿಎಸ್ ಯಾವುದೇ ಸ್ಥಾನವನ್ನ ಪಡೆದಿಲ್ಲ. ಇತ್ತ ಕರಾವಳಿ ಕರ್ನಾಟಕದ 19 ಸ್ಥಾನಗಳ ಪೈಕಿ ಬಿಜೆಪಿ 17 ರಿಂದ 18 ಸ್ಥಾನಗಳನ್ನ ಪಡೆದರೇ, ಕಾಂಗ್ರೆಸ್ 1 ರಿಂದ 2 ಸ್ಥಾನಗಳನ್ನ ಪಡೆಯಬಹುದು ಎಂದು ಹೇಳಲಾಗಿದೆ.
ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿರುವ ಮೂರು ರಾಜಕೀಯ ಪಕ್ಷಗಳು ಹಳೇ ಮೈಸೂರು ಭಾಗದ ಮೇಲೆ ಕಣ್ಣೀಟಿದ್ದು, 57 ಕ್ಷೇತ್ರಗಳ ಪೈಕಿ ಬಿಜೆಪಿಗೆ 17 ರಿಂದ 21 ಸ್ಥಾನಗಳ ಪಡೆದರೇ ಕಾಂಗ್ರೆಸ್ 17 ರಿಂದ 19 ಸ್ಥಾನಗಳನ್ನ ಪಡೆಯಲಿದೆ ಎಂದು ಸಮೀಕ್ಷೆಯಲ್ಲಿ ಹೇಳಿದ್ದು, ಜೆಡಿಎಸ್ 18 ರಿಂದ 20 ಸ್ಥಾನಗಳನ್ನ ಗೆಲ್ಲಲ್ಲಿದೆ ಎಂದು ತಿಳಿದು ಬಂದಿದೆ.
ಇನ್ನೂ ವಿಧಾನಸಭಾ ಚುನಾವಣೆಯ ಬಳಿಕ ಬಿಬಿಎಂಪಿ ಚುನಾವಣೆಯ ಮೇಲೆ ಕಣ್ಣೀಟ್ಟಿದ್ದು, ಬೆಂಗಳೂರು ಭಾಗದ 32 ಕ್ಷೇತ್ರಗಳ ಪೈಕಿ ಆಡಳಿತರೂಢ ಬಿಜೆಪಿ 16 ರಿಂದ 18 ಸ್ಥಾನಗಳನ್ನ ಪಡೆದರೇ, ಕಾಂಗ್ರೆಸ್ 11-13 ಹಾಗೂ ಜೆಡಿಎಸ್ 1 ಸ್ಥಾನವನ್ನ ಗೆಲ್ಲಲಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.












Click it and Unblock the Notifications