20 ಸೀಟ್ ಇಟ್ಕೊಂಡು ಕಂಡೀಷನ್ ಹಾಕಲು ಸಾಧ್ಯನಾ? ಕಾದು ನೋಡೋಣ: ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು, ಮೇ 13: 20 ಸೀಟ್ ಇಟ್ಕೊಂಡು ಕಂಡೀಷನ್ ಹಾಕಲು ಸಾಧ್ಯನಾ? ಫಲಿತಾಂಶದವರೆಗೂ ಕಾದು ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸಿಂಗಾಪುರ್ ನಿಂದ ಬೆಂಗಳೂರಿಗೆ ಆಗಮಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್ ಗಳ ಬಗ್ಗೆ ಕುಮಾರಸ್ವಾಮಿ ಗರಂ ಆಗಿದ್ದು, ನನ್ನದೊಂದು ಸಣ್ಣ ಪಕ್ಷ ನೀವೇ 12-13 ಕೊಟ್ಟಿದ್ದೀರಾ. ಹೇಗೆ ಅತಂತ್ರ, ಎಲ್ಲಿಂದ ಬರುತ್ತೆ- ನೀವು ಹೇಳಿದ್ದು ನಾನು ನೋಡ್ತಾ ಇದ್ದೇನೆ. ಕಾಂಗ್ರೆಸ್, ಬಿಜೆಪಿಯವರು ಶೂಟ್ ಹೋಲಿಸಿಕೊಂಡು ಓಡಾಡ್ತಾ ಇದ್ದಾರೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

ನನ್ನದು ಸಣ್ಣ ಪಕ್ಷ, 12-20 ರಷ್ಟು ಸೀಟು ಬರುತ್ತೆ ಅಂತ ಒಂದು ಸಮೀಕ್ಷೆ ಹೇಳಿದ್ದನ್ನ ನೋಡಿದ್ದೇನೆ. ಈಗ ನನ್ನ ಕೇಳಿದ್ರೆ ಏನ್ ಹೇಳೋದು. ಈವರೆಗೆ ನನ್ನನ್ನ ಯಾವ ನಾಯಕರು ಸಂಪರ್ಕ ಮಾಡಿಲ್ಲ. 20 ಸೀಟ್ ಇಟ್ಕೊಂಡು ಕಂಡೀಷನ್ ಹಾಕಲು ಸಾಧ್ಯನಾ? ಜನಗಳಿಗೆ ಒಂದು ಅವಕಾಶ ಕೇಳಿದ್ದೆ, ಕೊಡೋದು ಬಿಡೋದು ಅವರಿಗೆ ಬಿಟ್ಟದ್ದು. ಜನರ ಏನ್ ತೀರ್ಮಾನ ತಗೊಂಡಿದ್ದಾರೆ ನೋಡೊಣ ಬನ್ನಿ ಎಂದು ಹೇಳಿದರು.
ಯಡಿಯೂರಪ್ಪ ಕ್ಲಿಯರ್ ಮೆಜಾರಿಟಿ ಅಂದಿದ್ದಾರೆ, ಅವರಿಗ್ಯಾಕೆ ನನ್ನ ಅವಶ್ಯಕತೆ ಎಂದು ಗರಂ ಆದ ಹೆಚ್ ಡಿ ಕುಮಾರಸ್ವಾಮಿ ಅವರು, ಜನರ ತೀರ್ಮಾನ ಏನೇ ಬರಲಿ ಮಾನಸಿಕವಾಗಿ ಸಿದ್ದನಾಗಿದ್ದೇನೆ. ನಮ್ಮದು ಸಣ್ಣ ಪಕ್ಷ ಅಂತಾ ಸರ್ವೆ ಗಳು ತೀರ್ಮಾನ ಮಾಡಿವೆ, ಎರಡು ಮೂರು ಗಂಟೆ ಕಾದು ನೋಡೋಣ ಏನಾಗುತ್ತೆ ಅಂತಾ. ಜನರ ತೀರ್ಮಾನಕ್ಕೆ ಸ್ವಾಗತ ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ಪ್ರಮಾಣ ವಚನ ಸ್ವೀಕಾರ ಮಾಡಲು ಸಿದ್ದರಾಗಿದ್ದಾರೆ. ಅತಂತ್ರ ಸ್ಥಿತಿ ನಿರ್ಮಾಣ ಆಗಲ್ಲ ಅಂತಾ ಸರ್ವೆಗಳು ಹೇಳಿವೆ, ಕಾಂಗ್ರೆಸ್ ನಾಯಕರು ಈಗಾಗಲೇ ಸೂಟ್ ಬೂಟ್ ಹೊಲಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕಿರ ವಿರುದ್ದ ಕಿಡಿಕಾರಿದರು.












Click it and Unblock the Notifications