ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Karnataka PGCET 2022 ಪ್ರವೇಶ ಪತ್ರ ಬಿಡುಗಡೆ, ಡೌನ್‌ಲೋಡ್‌ ಮಾಡಿಕೊಳ್ಳುವ ವಿಧಾನ ತಿಳಿಯಿರಿ

|
Google Oneindia Kannada News

ಬೆಂಗಳೂರು, ನವೆಂಬರ್ 13: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (PGCET)ಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ kea.kar.nic.in ನಲ್ಲಿ ಪರಿಶೀಲಿಸಬೇಕು.

ಕರ್ನಾಟಕ PGCET 2022 ನೋಂದಾಯಿತ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪ್ರವೇಶ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳುವುದು, ಪರಿಶೀಲನೆ ವಿಧಾನ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು.

PGCET 2022: ಪರೀಕ್ಷೆಯ ಪ್ರವೇಶ ಪತ್ರ ಡೌನ್‌ಲೋಡ್‌ ಹೇಗೆ, ತಿಳಿಯಿರಿPGCET 2022: ಪರೀಕ್ಷೆಯ ಪ್ರವೇಶ ಪತ್ರ ಡೌನ್‌ಲೋಡ್‌ ಹೇಗೆ, ತಿಳಿಯಿರಿ

ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರಿಕ್ಷೆ 2022 (PGCET)ಯ ಪ್ರವೇಶ ಪತ್ರ ಕೆಇಎ ಶನಿವಾರ ಬಿಡುಗಡೆ ಮಾಡಿದೆ. ಎಂಟೆಕ್, ಎಂಬಿಎ ಅಥವಾ ಎಂಸಿಎ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿನೋಂದಾಯಿತ ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಪ್ರಾಧಿಕಾರಿ ಅವಕಾಶ ಕಲ್ಪಿಸಿದೆ.

Karnataka PGCET 2022 exam hall ticket released How to check in KEA website

ಅಭ್ಯರ್ಥಿಗಳು ತಮ್ಮ ಹಾಲ್ ಟಿಕೆಟ್‌ಗಳನ್ನು ಲಾಗಿನ್ ಮಾಡಲು ಮತ್ತು ಡೌನ್‌ಲೋಡ್ ಮಾಡಲು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ಸಮೂದು ಮಾಡುವುದು ಅತ್ಯವಾಗಿರುತ್ತದೆ.

PGCET 2022 ಪ್ರವೇಶ ಕಾರ್ಡ್ ಡೌನ್‌ಲೋಡ್ ಹೇಗೆ?

ಅಭ್ಯರ್ಥಿಗಳು ಮೊದಲು ಕೆಇಎ ವೆಬ್‌ಸೈಟ್‌ kea.kar.nic.in.ಗೆ ಭೇಟಿ ಕೊಡಿ. ನಂತರ ಪ್ರವೇಶ ಕಾರ್ಡ್‌ಗಳಿಗಾಗಿ ಅಲ್ಲಿನ ಲಿಂಕ್ ಅನ್ನು ಕ್ಲಿಕ್ ಮಾಡಿ. ಆಗ ಲಾಗಿನ್‌ಗಾಗಿ ಕೇಳುತ್ತದೆ. ಬಳಿಕ ಅಪ್ಲಿಕೇಶನ್ ಸಂಖ್ಯೆ ಮತ್ತು ನಿಮ್ಮ ಜನ್ಮ ದಿನಾಂಕದ ದಾಖಲೆ ನಮೂದಿಸಿ. ಸಬ್ಮಿಟ್ ಬಟನ್ ಒತ್ತಿರಿ.

ಇದು ಯಶಸ್ವಿಯಾಗಿ ಲಾಗಿನ್ ಆದರೆ ನಿಮ್ಮ ಪ್ರವೇಶ ಕಾರ್ಡ್ ಪರದೆಯ ಮೇಲೆ ಲಭ್ಯವಾಗುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಜೊತೆಗೆ ಸೇವ್ ಮಾಡಿಟ್ಟುಕೊಳ್ಳಬಹುದು.

ಪ್ರವೇಶ ಪತ್ರದಲ್ಲಿ ಕಾಗುಣಿತ ತಪ್ಪುಗಳು ಅಥವಾ ವಾಸ್ತವಿಕ ದೋಷಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅಭ್ಯರ್ಥಿಗಳು ತಮ್ಮ ಹಾಲ್ ಟಿಕೆಟ್‌ಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ. ಅದರಲ್ಲಿನ ಅಭ್ಯರ್ಥಿಯ ಹೆಸರು, ಹುಟ್ಟಿದ ದಿನಾಂಕ, ಅಭ್ಯರ್ಥಿಯ ಅರ್ಜಿ ಸಂಖ್ಯೆ ಮತ್ತು ರೋಲ್ ಸಂಖ್ಯೆ, ಪರೀಕ್ಷೆಯ ದಿನಾಂಕ ಮತ್ತು ಸ್ಥಳವನ್ನು ಪರಿಶೀಲಿಸಿ.

Karnataka PGCET 2022 exam hall ticket released How to check in KEA website

ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರಿಕ್ಷೆ 2022 ಅಭ್ಯರ್ಥಿಗಳು ಪರೀಕ್ಷೆ ವೇಳೆ ತಮ್ಮ ಪ್ರವೇಶ ಕಾರ್ಡ್‌ಗಳನ್ನು ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯವುದು ಕಡ್ಡಾಯವಾಗಿರುತ್ತದೆ.

ಹಾಲ್ ಟಿಕೆಟ್ ಇಲ್ಲದೇ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಪ್ರವೇಶ ಇರುವುದಿಲ್ಲ. ಈ ವರ್ಷದ ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ ಇದೇ ನವೆಂಬರ್ 19 ಮತ್ತು 20 ರಂದು ನಡೆಯಲಿವೆ ಎಂದು ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

English summary
Karnataka Post Graduate Common Entrance Test 2022 (PGCET) exam hall ticket released, How to check in Karnataka Examination Authority website. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X