Suicide Cases: ಬೆಂಗಳೂರಿನಲ್ಲಿ ಈ ಕಾರಣಕ್ಕೆ ಆತ್ಮಹತ್ಯೆ ಹೆಚ್ಚಳ: ನಿಮ್ಹಾನ್ಸ್ ಟೆಲಿಮನಸ್‌ನಿಂದ 65 ಜನರ ರಕ್ಷಣೆ
Suicide Cases Rise in Bengaluru: ಬೆಂಗಳೂರಿನ ನಿಮ್ಹಾನ್ಸ್ (ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ)ನಿಂದ 65ಕ್ಕೂ ಹೆಚ್ಚು ಜನರ ಜೀವ ಉಳಿಸಲಾಗಿದೆ. ಪೊಲೀಸ್ ತುರ್ತು ಸ್ಪಂದನ ಸಹಾಯ ವ್ಯವಸ್ಥೆ 112 ಯೊಂದಿಗೆ ನಿಮ್ಹಾನ್ಸ್‌ನ ಟೆಲಿಮನಸ್ ಸಂಯೋಜಿಸಲಾಗಿದ್ದು, ಮಹತ್ವದ ಬೆಳವಣಿಗೆ ಕಂಡುಬಂದಿದೆ. ಇನ್ನು ಕಳೆದೊಂದು ತಿಂಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೆ ಮುಂದಾದ, ಮಾನಸಿಕ ಕಿರುಕುಳದಿಂದ ತೊಂದರೆಗೊಳಗಾಗಿದ್ದ 65ಕ್ಕೂ ಹೆಚ್ಚು ಜನರ ಮನಃ ಪರಿರ್ತನೆ ಹಾಗೂ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಹಲವು ಪ್ರಕರಣಗಳಲ್ಲಿ ಆತ್ಮಹತ್ಯೆಯನ್ನು ತಡೆಯಲಾಗಿದೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಿಂದ ಫೆಬ್ರವರಿ ತಿಂಗಳಲ್ಲಿ ಉಚಿತ ಸಹಾಯವಾಣಿ ಸಂಖ್ಯೆಗಳಾದ ಟೆಲಿಮನಸ್ (14416) ಹಾಗೂ ಪೊಲೀಸರ ತುರ್ತು ಸ್ಪಂದನ ಕರೆ (112) ಜತೆಗೆ ಸಂಯೋಜಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ಮಾನಸಿಕ ಕಿರುಕುಳ ಹಾಗೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ 300ಕ್ಕೂ ಹೆಚ್ಚು ಕರೆಗಳನ್ನು ಟೆಲಿಮನಸ್ ಸಹಾಯವಾಣಿಯ ಸಿಬ್ಬಂದಿ ಸ್ವೀಕರಿಸಿದ್ದಾರೆ. ನಿಮ್ಹಾನ್ಸ್ ನಿರ್ವಹಿಸುತ್ತಿರುವ ಟೆಲಿಮನಸ್‌ಗೆ ಐಐಟಿ-ಬಿ ತಾಂತ್ರಿಕ ನೆರವು ನೀಡುತ್ತಿದೆ.

ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಆತ್ಮಹತ್ಯೆ ಪ್ರಕರಣ: ಗೃಹ ಸಚಿವಾಲಯದ
ಗೃಹ ಸಚಿವಾಲಯದ ಪ್ರಕಾರ 2022ರಿಂದ 2025ರ ನವೆಂಬರ್ ನಡುವೆ ಬೆಂಗಳೂರಿನಲ್ಲಿ 9,450 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಂದರೆ, ರಾಜ್ಯ ರಾಜಧಾನಿಯಲ್ಲಿ ಪ್ರತಿದಿನ ಸರಾಸರಿ ಏಳು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 2022ರಲ್ಲಿ ಬೆಂಗಳೂರು 2,313, 2013ರಲ್ಲಿ 2,170 ಹಾಗೂ 2024ರಲ್ಲಿ 2,403 ಹಾಗೂ ಕಳೆದ ವರ್ಷ 2,364ಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ - ವರ್ಷದ ವಿವರ
| ವರ್ಷ | ಆತ್ಮಹತ್ಯೆ ಸಂಖ್ಯೆ |
|---|---|
| 2022 | 2,313 |
| 2023 | 2,170 |
| 2024 | 2,403 |
| 2025 (ನವೆಂಬರ್ ವರೆಗೆ) | 2,364+ |
ವಯೋಮಾನ ಪ್ರಕಾರ ಶೇಕಡಾವಾರು
| ವಯಸ್ಸು | ಶೇಕಡಾವಾರು (%) |
|---|---|
| 0-12 | 1.4% |
| 13-17 | 7.5% |
| 18-45 | 74.2% |
| 46-64 | 13.3% |
| 65+ | 3.6% |
ಆತ್ಮಹತ್ಯೆ ವಿಧಾನಗಳು
| ವಿಧಾನ | ಜನರು |
|---|---|
| ನೇಣು ಬಿಗಿದುಕೊಂಡು | 8,148 |
| ವಿಷ ಸೇವನೆ | 740 |
| ಎತ್ತರದ ಸ್ಥಳಗಳಿಂದ ಹಾರಿ | 204 |
ಬೆಂಗಳೂರಿನ 35 ವರ್ಷದ ವ್ಯಕ್ತಿಯ ಮನವೊಲಿಸಿದ ಸಿಬ್ಬಂದಿ
ಬಾಟಲಿ ಹಿಡಿದುಕೊಂಡು ಇನ್ನೇನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ 35 ವರ್ಷದ ಯುವಕನನ್ನು ಸಹ ನಿಮ್ಹಾನ್ಸ್‌ನ ಟೆಲಿಮನಸ್ ಮೂಲಕ ರಕ್ಷಿಸಲಾಗಿದೆ. ಟೆಲಿಮನಸ್‌ಗೆ ಕರೆ ಮಾಡಿ ಬೇಸರ ತೋಡಿಕೊಂಡು ಯುವಕ ನಂತರ ಸಿಬ್ಬಂದಿಗೆ ಕರೆ ಮಾಡದೆ ದೂರವಾಗಿದ್ದ, ಗಂಭೀರತೆ ಅರಿತ ಟೆಲಿಮನಸ್ ತಂಡ ಪೊಲೀಸ್ ತುರ್ತು ಸ್ಪಂದನ ವ್ಯವಸ್ಥೆ ನೆರವಿನಿಂದ ಆತನನ್ನು ಸಂಪರ್ಕಿಸಿ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆದಿದೆ. ಇನ್ನೊಂದು ಪ್ರಕರಣದಲ್ಲಿ ಮನೆಯಲ್ಲಿ ಕುಟುಂಬಸ್ಥರ ಕಿರುಕುಳದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬರಿಗೆ ಟೆಲಿಮನಸ್ ತಂಡದ ಮಾನಸಿಕ ಆರೋಗ್ಯ ವೃತ್ತಿಪರರು ನೆರವಾಗಿದ್ದಾರೆ.
ಇನ್ನು ಸಮಸ್ಯೆ ಪರಿಹರಿಸುವ ಕೌಶಲದ ಕೊರತೆ ಉಂಟಾಗುವುದನ್ನು ಮಾನಸಿಕ - ಸಾಮಾಜಿಕ ಸಮಸ್ಯೆ ಎನ್ನಲಾಗುತ್ತದೆ. ಈ ರೀತಿ ಸಮಸ್ಯೆ ಹೆಚ್ಚಾದ ಸಂದರ್ಭದಲ್ಲಿ ಆತ್ಮಹತ್ಯೆಯಂತಹ ತೀವ್ರ ನಿರ್ಧಾರಕ್ಕೆ ಜನ ಬರುತ್ತಾರೆ ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವೀಶ್ ಬಿ.ಎನ್ ಅವರು ಮಾಹಿತಿ ನೀಡುತ್ತಾರೆ.
ಇನ್ನು ಟೆಲಿಮನಸ್‌ಗೆ ಕಳೆದ 12 ತಿಂಗಳಲ್ಲಿ 1,14,472 ಕರೆಗಳು ಬಂದಿವೆ. ಪೊಲೀಸ್ ಸಹಾಯವಾಣಿ 112ಕ್ಕೆ ಕಳೆದ ವರ್ಷ 5,22,742 ಕರೆಗಳು ಬಂದಿವೆ. ಈಗ ಟೆಲಿಮನಸ್-112 ಲಿಂಕ್ ಮಾಡಿರುವುದರಿಂದ ಟೆಲಿಮನಸ್‌ಗೆ ಹೆಚ್ಚು ಜನ ಕರೆ ಮಾಡುತ್ತಿದ್ದಾರೆ. 18ರಿಂದ 45 ವರ್ಷದವರಿಂದ ಕರೆಗಳು ಬರುತ್ತಿವೆ. ನಿದ್ದೆ ಕೊರತೆ, ದುಃಖ, ಭಯ, ಮದುವೆಗೆ ಸಂಬಂಧಿಸಿದ ಸಮಸ್ಯೆ, ಆರ್ಥಿಕ ತೊಂದರೆಗಳು, ಪರೀಕ್ಷೆಯ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯಾ ಆಲೋಚನೆಗಳಿಂದ ಕರೆ ಮಾಡುವವರು ಇದ್ದಾರೆ ಎನ್ನುತ್ತಾರೆ ಐಐಟಿ-ಬಿ ಟೆಲಿಮನನ್ ಇ-ಹೆಲ್ತ್‌ನ ಯೋಜನಾ ವ್ಯವಸ್ಥಾಪಕಿ ಅರ್ಚನಾ ಕಾರ್ತಿಕ್.
ಆತ್ಮಹತ್ಯೆಯ ಅಲೋಚನೆ ಬಂದರೆ ಈ ರೀತಿ ಮಾಡಿ
ಇನ್ನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಆಲೋಚನೆ ಬಂದರೆ ಏನು ಮಾಡಬೇಕು ಎನ್ನುವ ಬಗ್ಗೆ ನಿಮ್ಹಾನ್ಸ್‌ನ ಟೆಲಿಮನಸ್ ವಿಭಾಗದ ಸೀನಿಯರ್ ರೆಸಿಡೆಂಟ್ ಡಾ.ಕಿರಣ್ ಆರ್ ಅವರು ಕೆಲವೊಂದು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಯಾರಿಗಾದರೂ ಆತ್ಮಹತ್ಮೆ ಮಾಡಿಕೊಳ್ಳಬೇಕು ಎನ್ನುವ ಕೆಟ್ಟ ಆಲೋಚನೆ ಬಂದರೆ ಕೂಡಲೇ ಟೆಲಿಮನಸ್ ಸಹಾಯವಾಣಿಗೆ ಕರೆ ಮಾಡಿ ವೈದ್ಯರು, ತಜ್ಞರ ಸಹಾಯ ಮಾಡಲಿದ್ದಾರೆ. ಸಂಪರ್ಕದಿಂದ ದೂರವಾಗದಿರಿ ಎನ್ನುವುದು ಅವರ ಸಲಹೆ. ಕರೆ ಮಾಡಿದವರನ್ನು ಗುರುತಿಸುವುದು, ತುರ್ತಾಗಿ ಆತ್ಮಹತ್ಯೆ ತಡೆಯುವಂತಹ ಗಂಭೀರ ಕೆಲಸಗಳನ್ನು ನಾವು ಮಾಡುತ್ತಿದ್ದೇವೆ ಎನ್ನುತ್ತಾರೆ ಡಾ. ಕಿರಣ್.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications