ಈ ಸಸ್ಯ ನಿಮ್ಮ ಮನೆಯಲ್ಲಿದ್ದರೆ ಈಗಲೇ ಕಿತ್ತು ಬಿಸಾಡಿ, ನಿಮ್ಮೆಲ್ಲಾ ಸಮಸ್ಯೆಗಳ ಮೂಲ ಈ ಗಿಡವೇ ಆಗಿರಬಹುದು

ಸಸ್ಯಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಮನೆಯನ್ನು ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯಿಂದ ತುಂಬಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಎಲ್ಲಾ ಸಸ್ಯಗಳೂ ಈ ಗುಣಗಳನ್ನು ಹೊಂದಿರುವುದಿಲ್ಲ. ಕೆಲವೊಂದು ಸಸ್ಯಗಳು ಅದೃಷ್ಟವನ್ನು ದುರಾದೃಷ್ಟವಾಗಿ ಬದಲಿಸುವ ಶಕ್ತಿಯನ್ನೂ ಹೊಂದಿರುತ್ತದೆ. ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿ ಪ್ರಕಾರ, ಕೆಲವು ಸಸ್ಯಗಳು ಸಕಾರಾತ್ಮಕ ಶಕ್ತಿಯ ಹರಿವನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಈ ಸಸ್ಯಗಳು ಮನೆಯಲ್ಲಿದ್ದರೆ ದುರಾದೃಷ್ಟವೇ ಸರಿ. ಇದು ಮನೆ ಮಂದಿಯ ಪ್ರಗತಿಯನ್ನು ತಡೆಯುತ್ತದೆ. ನಿಮ್ಮ ಜೀವನದಲ್ಲಿ ಪಾಸಿಟಿವಿಟಿಯೇ ತುಂಬಿರಬೇಕು, ಅದೃಷ್ಟ ನಿಮ್ಮ ಕೈ ಹಿಡಿಯಬೇಕು ಎನ್ನುವ ಬಯಕೆ ನಿಮ್ಮದಾಗುದ್ದರೆ ಈ ಐದು ಸಸ್ಯಗಳನ್ನು ನಿಮ್ಮ ಮನೆಯಿಂದ ತಕ್ಷಣವೇ ಕಿತ್ತು ಬಿಸಾಡಿ.

ಒಣಗಿಹೋದ ಅಥವಾ ಸಾಯುತ್ತಿರುವ ಸಸ್ಯಗಳು:

ಅನೇಕ ಜನರು ಸಸ್ಯಗಳು ಒಣಗಿ ಹೋಗುತ್ತಿದ್ದರೂ ಮತ್ತೆ ಚೇತರಿಸಿಕೊಳ್ಳಬಹುದು ಎನ್ನುವ ಆಸೆಯಿಂದ ಅವುಗಳನ್ನು ಹಾಗೆಯೇ ಇಟ್ಟುಕೊಂಡಿರುತ್ತಾರೆ. ಮಾತ್ರವಲ್ಲ ಆ ಗಿಡಕ್ಕೆ ನೀರು ಕೂಡಾ ಹಾಕುತ್ತಿರುತ್ತಾರೆ. ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಸತ್ತ ಅಥವಾ ಸಾಯುತ್ತಿರುವ ಸಸ್ಯಗಳು ನಿಶ್ಚಲ ಅಥವಾ ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತವೆ. ಅವು ವೈಫಲ್ಯ, ನಷ್ಟ ಅಥವಾ ಅಭಿವೃದ್ದಿಯನ್ನು ತಡೆದು ನಿಲ್ಲಿಸುವ ಶಕ್ತಿಯನ್ನು ಹೊಂದಿರುತ್ತವೆ. ಇದು ಮನೆ ಮತ್ತು ಮನೆ ಮಂದಿಯ ಮೇಲೆ ಪರಿಣಾಮ ಬೀರಬಹುದು. ಒಂದು ಸಸ್ಯ ಹಿಂದೆ ಚೆನ್ನಾಗಿ ಬೆಳೆದಿದ್ದರೂ, ಅದು ಸಾಯುತ್ತಿದೆ ಎಂದಾಗ ತಕ್ಷಣ ಮನೆಯಿಂದ ಹೊರ ಹಾಕಬೇಕು. ಸಾಯುವ ಸ್ಥಿತಿಯಲ್ಲಿಯೇ ಅದನ್ನು ಮನೆಯೊಳಗೆ ಇಟ್ಟುಕೊಳ್ಳಬಾರದು.ಇದು ಮನೆಯಲ್ಲಿ ನೆಗೆಟಿವಿಟಿ ತುಂಬುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿರುವ ಸಸ್ಯಗಳನ್ನು ನಿಯಮಿತವಾಗಿ ಪರಿಶೀಲಿಸಿ. ಒಣಗಿದ ಎಲೆಗಳನ್ನು ಕತ್ತರಿಸಿ. ಸಸ್ಯ ಮತ್ತೆ ಜೀವಂತವಾಗಲು ಸಾಧ್ಯವೇ ಇಲ್ಲ ಎಂದಾದರೆ ಅಂಥಹ ಗಿಡವನ್ನು ಬಿಸಾಡಿ.

Vastu Tips

ಮಿಲ್ಕ್‌ವೀಡ್ ಅಥವಾ ಹಾಲಿನಂತಹ ರಸವನ್ನು ಹೊರಸೂಸುವ ಸಸ್ಯಗಳು:

ಕೆಲವು ಸಸ್ಯಗಳನ್ನು ಕತ್ತರಿಸುವಾಗ ಅಥವಾ ಅವುಗಳ ಎಲೆಯನ್ನು ಮುರಿಯುವಾಗ ಬಿಳಿ ಹಾಲಿನಂತಹ ರಸವನ್ನು ಹೊರಹಾಕುತ್ತವೆ. ಉದಾಹರಣೆಗೆ ಮಿಲ್ಕ್‌ವೀಡ್ ಮತ್ತು ಕೆಲವು ಯೂಫೋರ್ಬಿಯಾ ಜಾತಿಗೆ ಸೇರಿದ ಸಸ್ಯಗಳು. ಇವುಗಳು ಮನೆಗೆ ದುರದೃಷ್ಟವನ್ನು ತರುತ್ತವೆ ಎನ್ನುವುದು ನಂಬಿಕೆ. ಈ ಸಸ್ಯಗಳು ಮನೆಯಲ್ಲಿ ಅಸ್ಥಿರತೆ ಮತ್ತು ಭಾವನಾತ್ಮಕ ಒತ್ತಡವನ್ನು ಉಂಟುಮಾಡುತ್ತವೆ ಎಂದು ಹೇಳಲಾಗುತ್ತದೆ. ಜೊತೆಗೆ, ಅವುಗಳ ರಸವು ಮಕ್ಕಳಿಗೂ ಮತ್ತು ಸಾಕುಪ್ರಾಣಿಗಳಿಗೂ ಹಾನಿಕಾರಕವಾಗಿರಬಹುದು. ಆದ್ದರಿಂದ ಅವುಗಳನ್ನು ಮನೆಯ ಒಳಗೆ ಇಡುವುದು ಸೂಕ್ತವಲ್ಲ. ಇವುಗಳನ್ನು ಇಟ್ಟುಕೊಳ್ಳಲೇಬೇಕಾದರೆ, ಮನೆಯ ಹೊರಗೆ ಒಂದು ಜಾಗ ಕೊಟ್ಟರೆ ಸೂಕ್ತ.

ಬಾಲ್ಕನಿಗೆ ಯಾವ ಗಿಡಗಳು ಶುಭ? ವಾಸ್ತು ಪ್ರಕಾರ ಸಕಾರಾತ್ಮಕ ಶಕ್ತಿ ನೀಡುವ ಸಸ್ಯಗಳು
ಬಾಲ್ಕನಿಗೆ ಯಾವ ಗಿಡಗಳು ಶುಭ? ವಾಸ್ತು ಪ್ರಕಾರ ಸಕಾರಾತ್ಮಕ ಶಕ್ತಿ ನೀಡುವ ಸಸ್ಯಗಳು

ಗೋಡೆಗಳ ಮೇಲೆ ಬೆಳೆಯುವ ಅಥವಾ ಏರುವ ಸಸ್ಯಗಳು:

ಮೇಲೇರುವ ಸಸ್ಯಗಳು ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಬಹುದು. ಆದರೆ ಅವು ಮನೆಯ ಗೋಡೆಗಳನ್ನು ಏರಿ ಬೆಳೆಯುವಾಗ, ಮನೆಯ ರಚನೆ ಮತ್ತು ಶಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಆಧ್ಯಾತ್ಮಿಕವಾಗಿ, ಇಂತಹ ಸಸ್ಯಗಳು ನಾವು ಮಾಡುವ ಕೆಲಸ ಕಾರ್ಯಗಳಿಗೆ ಅಡೆ ತಡೆ ಉಂಟು ಮಾಡುತ್ತದೆಯಂತೆ. ಭಾವನೆಗಳ ಆಸ್ಪಷ್ಟತೆಗೂ ಈ ಸಸ್ಯಗಳೇ ಕಾರಣ ಎನ್ನಲಾಗಿದೆ. ಅವು ಗೋಡೆಗಳಿಗೆ ಹಾನಿ ಮಾಡಬಹುದು. ತೇವಾಂಶವನ್ನು ಹಿಡಿದಿಟ್ಟುಕೊಳ್ಳಬಹುದು ಮತ್ತು ಕೀಟಗಳನ್ನು ಆಕರ್ಷಿಸಬಹುದು. ನಿಮಗೆ ಕ್ಲೈಂಬರ್‌ಗಳೇ ಇಷ್ಟ ಎನ್ನುವುದಾದರೆ ಅದನ್ನು ಗೊಡೆಯ ಮೇಲೆ ಏರಲು ಬಿಡಬೇಡಿ, ಬದಲಿಗೆ ಅದಕ್ಕೊಂದು ಬೇರೆ ರೀತಿಯ ಆಧಾರ ನೀಡಿ ಬಳ್ಳಿ ಹರಡಲು ಸಹಾಯ ಮಾಡಿಕೊಡಿ.

ಹತ್ತಿ ಅಥವಾ ರೇಷ್ಮೆ ಸಸ್ಯಗಳು:

ಹತ್ತಿ, ರೇಷ್ಮೆ ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಕೃತಕ ಸಸ್ಯಗಳು ಆಕರ್ಷಕವಾಗಿ ಕಾಣಬಹುದು. ಇದರ ನಿರ್ವಹಣೆ ಕೂಡಾ ಸುಲಭವಿರಬಹುದು. ಆದರೆ ಅವು ಜೀವಂತ ಸಸ್ಯಗಳಂತೆಯೇ ಶಕ್ತಿಯನ್ನು ಹೊಂದಿರುವುದಿಲ್ಲ. ಆಧ್ಯಾತ್ಮಿಕವಾಗಿ, ಅವುಗಳನ್ನು ಅದೃಷ್ಟವೆಂದು ಪರಿಗಣಿಸಲಾಗುವುದಿಲ್ಲ. ಇವು ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸದಿದ್ದರೂ, ಇವುಗಳು ಗಾಳಿಯನ್ನು ಶುದ್ಧೀಕರಿಸುವುದು, ಪರಿಸರಕ್ಕೆ ಕೊಡುಗೆ ನೀಡುವಂಥಹ ಯಾವ ಕೆಲಸವನ್ನೂ ಮಾಡುವುದಿಲ್ಲ. ಇವುಗಳು ಕಾಲಕ್ರಮೇಣ, ತಮ್ಮ ಮೇಲೆ ಧೂಳು ಸಂಗ್ರಹವಾಗಿ ಸ್ಥಳವನ್ನು ಮಂದ ಮತ್ತು ನಿಶ್ಚಲವಾಗಿ ಭಾಸವಾಗುವಂತೆ ಮಾಡಬಹುದು. ನಿಮಗೆ ಹಸಿರು ಸಸ್ಯಗಳು ಇಷ್ಟವಿದ್ದರೆ, ಸ್ನೇಕ್ ಪ್ಲಾಂಟ್ ಅಥವಾ ಪೀಸ್ ಲಿಲಿ ಮುಂತಾದ ಕಡಿಮೆ ನಿರ್ವಹಣೆಯ ನೈಜ ಸಸ್ಯಗಳನ್ನು ನೆಡಬಹುದು.

ಮನೆಯಲ್ಲಿ ಈ ಗಿಡಗಳನ್ನು ಇಡಬೇಡಿ! ಇದರಿಂದಾಗುವ ಆರ್ಥಿಕ ತೊಂದರೆಗಳ ಬಗ್ಗೆ ವಾಸ್ತು ಏನು ಹೇಳುತ್ತದೆ?
ಮನೆಯಲ್ಲಿ ಈ ಗಿಡಗಳನ್ನು ಇಡಬೇಡಿ! ಇದರಿಂದಾಗುವ ಆರ್ಥಿಕ ತೊಂದರೆಗಳ ಬಗ್ಗೆ ವಾಸ್ತು ಏನು ಹೇಳುತ್ತದೆ?

ಪಾಚಿ ಅಥವಾ ಆಲ್ಗೆ ಬೆಳೆಯುವ ಸಸ್ಯಗಳು:

ನೀರಿನಲ್ಲಿ ಇಡಲಾದ ಸಸ್ಯಗಳು ಅಥವಾ ಅಲಂಕಾರಿಕ ಒಳಾಂಗಣ ಕಾರಂಜಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ, ಅವುಗಳಲ್ಲಿ ಪಾಚಿ ಕಟ್ಟಿಕೊಳ್ಳುತ್ತದೆ. ಶಕ್ತಿ ಸಂಬಂಧಿತ ಪದ್ಧತಿಗಳಲ್ಲಿ, ಪಾಚಿಯನ್ನು ನಿಶ್ಚಲತೆ ಮತ್ತು ಕೊಳೆಯುವಿಕೆಯ ಸಂಕೇತಗಳೆಂದು ಪರಿಗಣಿಸಲಾಗುತ್ತದೆ. ಹುಣ್ಣು ಅಥವಾ ಜಿಗುಟಾದ ಪದರ ಹೊಂದಿರುವ ಸಸ್ಯದ ಕುಂಡವು ನಿರ್ಲಕ್ಷಿತ ಶಕ್ತಿಯನ್ನು ಪ್ರತಿಬಿಂಬಿಸಬಹುದು.ಇದು ಭಾವನಾತ್ಮಕ ಅಥವಾ ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಮನೆಯಲ್ಲಿ ನೀರಿನಲ್ಲಿ ಬೆಳೆಯುವ ಸ್ಸಯಗಳನ್ನು ಇಟ್ಟುಕೊಂಡಿದ್ದರೆ ಅವುಗಳನ್ನು ಸ್ವಚ್ಛವಾಗಿಡುವುದು ಮತ್ತು ನೀರು ಸರಿಯಾಗಿ ಹರಿದು ಹೋಗುವಂತೆ ನೋಡಿಕೊಳ್ಳುವುದು ಮುಖ್ಯ. ಇಲ್ಲದಿದ್ದರೆ, ಅವುಗಳನ್ನು ಮನೆಯೊಳಗಿನಿಂದ ತೆಗೆದು ಹೊರ ಹಾಕಬೇಕು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+