ಆನಂದ್ ಮಹೀಂದ್ರಾ ಮನಗೆದ್ದ ನಮ್ಮ ಹೊನ್ನಾವರ! ಕೇರಳಕ್ಕೆ ಸಿಕ್ಕಷ್ಟು ಮಾನ್ಯತೆ ಕರ್ನಾಟಕ್ಕೆ ಇಲ್ವಾ?
ಖ್ಯಾತ ಉದ್ಯಮಿ ಆನಂದ ಮಹೀಂದ್ರ ಆಗಾಗ ಸೊಗಸಾದ ತಾಣಗಳ ಬಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಈ ಬಾರಿ ಹೊನ್ನಾವರದ ಮಾಯಾಲೋಕದ ಬಗ್ಗೆ ಬರೆದು ಜಗತ್ತಿನ ಗಮನ ಸೆಳೆದಿದ್ದಾರೆ. ಹೊನ್ನಾವರ ನಿಜಕ್ಕೂ ಮಾಯಾಲೋಕವಾ? ಅಲ್ಲಿ ಏನೇನು ವಿಶೇಷ ಇದೆ?
ಫಾರಿನ್‌ಗೆ ಹೋಗೋ ಖಯಾಲಿ ನಮ್ಮಲ್ಲಿ ಅನೇಕರಿಗಿದೆ. ಹೋಗೋದು ತಪ್ಪೇನಿಲ್ಲ, ಆದರೆ ಫಾರಿನ್‌ಗಿಂತಲೂ ಚಂದದ ಜಾಗಗಳು ನಮ್ಮ ಸಮೀಪದಲ್ಲೇ ಇವೆ. ಅವನ್ನೂ ನೋಡಬೇಕಲ್ವಾ.. ಆದರೆ ನಮ್ಮವರು ಹೊನ್ನಾವರದ ಬಗ್ಗೆ ಅಷ್ಟಾಗಿ ಆಕರ್ಷಣೆಗೆ ಬಿದ್ದ ಹಾಗಿಲ್ಲ. ಆದರೆ ಜಗತ್ತಿನ ಸೊಗಸಾದ ತಾಣಗಳ ಬಗ್ಗೆ ಆಗಾಗ್ಗೆ ಪೋಸ್ಟ್ ಹಾಕುವ ಪ್ರಖ್ಯಾತ ಉದ್ಯಮಿ ಆನಂದ ಮಹೀಂದ್ರ ಹೊನ್ನಾವರದ ಪ್ರಾಕೃತಿಕ ಸೌಂದರ್ಯ ನೋಡಿ ಮೂಕವಿಸ್ಮಿತರಾಗಿದ್ದಾರೆ. ರಮಣೀಯ ಪ್ರಕೃತಿ ಸೌಂದರ್ಯ ಕಂಡು Honnavar is a magical landscape ಎಂದು ಉದ್ಗರಿಸಿದ್ದಾರೆ.

'ಕರಾವಳಿ ಅಂದಾಕ್ಷಣ ನಾವು ಸದಾ ಕೇರಳದ ಹಿನ್ನೀರು ಪ್ರದೇಶಗಳಿಗೆ ಪ್ರವಾಸ ಹೋಗುತ್ತಿರುತ್ತೇವೆ. ಅಲ್ಲಿನ ಪ್ರಕೃತಿಯನ್ನ ಹಾಡಿ ಹೊಗಳುತ್ತೇವೆ. ಆದರೆ ಕರ್ನಾಟಕದ ಕರಾವಳಿಯನ್ನೊಮ್ಮೆ ನೋಡಿ. ಅದೊಂದು hidden gem hidden gem ನಂತಿದೆ. ಯಾವ ರೀತಿಯಲ್ಲು ಕೇರಳದ ಕರಾವಳಿಗೆ ಕಮ್ಮಿ ಇಲ್ಲʼ ಎಂದಿದ್ದಾರೆ. ಅಂದರೆ ಕೇರಳದ ಹಿನ್ನೀರು ಪ್ರವಾಸೋದ್ಯಮಕ್ಕೆ ಸಿಕ್ಕಿರುವಷ್ಟು ಪ್ರಚಾರ ಇದಕ್ಕೆ ಸಿಕ್ಕಿಲ್ಲ ಎಂಬ ವಿಷಾದ ಅವರ ಧ್ವನಿಯಲ್ಲಿದ್ದ ಹಾಗಿದೆ.
'ನಾನಿಲ್ಲಿ ಪೋಸ್ಟ್ ಮಾಡಿರುವ ಫೋಟೋಗಳು ಸ್ವಲ್ಪ ಎಡಿಟೆಡ್ ಆಗಿರಬಹುದು, ಆದರೆ ಹೊನ್ನಾವರ ಪ್ರಕೃತಿ ಮಡಿಲಿನ ಮಾಯಾಲೋಕದ ಹಾಗಿದೆ.ನಮ್ಮ ಕರಾವಳಿಯ ತಣ್ಣನೆಯ ಗಾಳಿ, ಹಸಿರ ಹಾಸಿಗೆಯ ನಡುವೆ ಅಂಕುಡೊಂಕಾಗಿ ಹರಿಯುವ ನದಿ, ಕಣ್ಣು ಹಾಯಿಸಿದಷ್ಟೂ ಕಾಣುವ ಕನ್ನಡಿಯಂತಹ ನೀರು... ಹೌದು, ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಸ್ವರ್ಗ ಹೊನ್ನಾವರ ಈಗ ದೇಶದಾದ್ಯಂತ ಸಖತ್ ಸೌಂಡ್ ಮಾಡುತ್ತಿದೆ! ಇದಕ್ಕೆ ಕಾರಣ ಪ್ರಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರ ಒಂದು ಪೋಸ್ಟ್. ಸದಾ ಭಾರತದ ಅಪ್ರತಿಮ ಜಾಗಗಳನ್ನು ಜಗತ್ತಿಗೆ ಪರಿಚಯಿಸುವ ಮಹೀಂದ್ರಾ, ಈ ಬಾರಿ ಹೊನ್ನಾವರದ ಸೌಂದರ್ಯಕ್ಕೆ ಮನಸೋತು, ಇದೊಂದು 'ಮಾಯಾಲೋಕ' ಎಂದು ಕೊಂಡಾಡಿದ್ದಾರೆ.

ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಧುಮ್ಮಿಕ್ಕಿ, ಅಬ್ಬರಿಸಿ, ಹರಿಯುವ ಶರಾವತಿ ನದಿ, ಹೊನ್ನಾವರಕ್ಕೆ ಬರುತ್ತಿದ್ದಂತೆ ತಾಯಿಯ ಮಡಿಲಂತೆ ಅತ್ಯಂತ ಶಾಂತವಾಗಿಬಿಡುತ್ತದೆ. ಇಲ್ಲಿ ಹಾಲಿನಂತಹ ನದಿ,ನೀಲಿ ಸಮುದ್ರವನ್ನು ಸೇರುವ ದೃಶ್ಯವೇ ಒಂದು ಅದ್ಭುತ ಕಾವ್ಯ. ಹೊನ್ನಾವರದ ಪ್ರಮುಖ ಆಕರ್ಷಣೆಯೇ ಇಲ್ಲಿನ ಮಂಗ್ರೋವ್ ಅರಣ್ಯಗಳು ಅಂದರೆ ಕಾಂಡ್ಲಾ ಕಾಡುಗಳು. ನೀರಿನ ನಡುವೆ ತೇಲುವಂತೆ ಕಾಣುವ ಈ ಹಸಿರು ಕಾಡುಗಳ ಮಧ್ಯೆ ಬೋಟಿಂಗ್ ಮಾಡುವುದೆಂದರೆ, ಅದೊಂದು ಮರೆಯಲಾರದ ಅನುಭವ. ಈ ಕಾಡುಗಳು ಕೇವಲ ಪ್ರವಾಸಿಗರ ಕಣ್ಣಿಗೆ ಹಬ್ಬವಷ್ಟೇ ಅಲ್ಲ, ಸಮುದ್ರದ ಅಲೆಗಳಿಂದ ಕರಾವಳಿಯನ್ನು ಕಾಯುವ ಪ್ರಕೃತಿಯ ರಕ್ಷಣಾ ಕವಚವೂ ಹೌದು.
ಆನಂದ್ ಮಹೀಂದ್ರಾ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಹೊನ್ನಾವರಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ತಮ್ಮ ನೆನಪುಗಳ ಬುತ್ತಿ ಬಿಚ್ಚಿಟ್ಟಿದ್ದಾರೆ. 'ಹೊನ್ನಾವರದ ಆ ಶಾಂತ ವಾತಾವರಣ, ಹಸಿರು ದ್ವೀಪಗಳು ನಮ್ಮ ಮನಸ್ಸಿನಲ್ಲಿ ಸದಾ ಹಸಿರಾಗಿ ಉಳಿಯುತ್ತವೆʼ ಎಂದು ಹಲವರು ತಾವು ತೆಗೆದ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 'ಕೇರಳಕ್ಕೆ ಪ್ರಚಾರ ಹೆಚ್ಚು ಸಿಗಬಹುದು, ಆದರೆ ಪ್ರಕೃತಿ ಮತ್ತು ಸಂಸ್ಕೃತಿಯ ವಿಷಯದಲ್ಲಿ ಕರ್ನಾಟಕ ಯಾವತ್ತೂ ನಂಬರ್ ಒನ್ʼ ಎಂದು ಕನ್ನಡಿಗರು ಹೆಮ್ಮೆಯಿಂದ ಹೇಳಿದ್ದಾರೆ.

ಇದರ ಜೊತೆಯಲ್ಲೇ, ತಮಿಳುನಾಡಿನ 'ಮೇಘಮಲೈ' ಮತ್ತು ಬಿಹಾರದ ಹಸಿರು ವನಸಿರಿ 'ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶ'ಗಳಿಗೂ ಭೇಟಿ ನೀಡಿ ಎಂದು ಬೇರೆ ರಾಜ್ಯಗಳ ಪ್ರವಾಸಿಗರು ಮಹೀಂದ್ರಾ ಅವರಿಗೆ ಆಹ್ವಾನ ನೀಡಿದ್ದಾರೆ. ಆನಂದ ಮಹೀಂದ್ರರ ಈ ಪೋಸ್ಟ್ ಮಾಡಿ ಪ್ರವಾಸಕ್ಕೆ ಮುಗಿಬೀಳುವ ಮನಸ್ಥಿತಿಯ ಇಂದಿನ ಜನ ಹೊನ್ನಾವರಕ್ಕೆ ಭೇಟಿ ನೀಡಬಹುದು. ಒಂದಿಷ್ಟು ರೀಲ್ಸ್ ಮಾಡಿ ವ್ಯೂಸ್ ಪಡೆಯಬಹುದು. ಆದರೆ ಜನ ಜಾಸ್ತಿ ಹೋಗಿ ಅಲ್ಲಿನ ಸೂಕ್ಷ್ಮ ಪರಿಸರವನ್ನು ಹಾಳು ಮಾಡದಿರಿ ಅನ್ನೋದು ಪರಿಸರವಾದಿಗಳ ಮನವಿ.
ಬರಹ: ಭವಾನಿ ಭಟ್
Continuing my search for underexplored & less crowded destinations….
— anand mahindra (@anandmahindra) June 14, 2026
We often celebrate Kerala’s backwaters. But on Karnataka’s coast is a hidden gem that deserves equal attention.
The same river that roars over Jog Falls, the Sharavathi River, finally and quietly merges with… pic.twitter.com/N9himujjg1














Click it and Unblock the Notifications