ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಆಯ್ತಾ? ಗಾಬರಿಯಾಗಬೇಡಿ, ಹೀಗ್ ಮಾಡಿ

ಕೆಲವೊಮ್ಮೆ ಹಾಗಾಗುವುದುಂಟು. ಇದ್ದಕ್ಕಿದ್ದಂತೆ ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಆಗಿಬಿಡುತ್ತದೆ. ಅಕೌಂಟ್‌ನಿಂದ ಯಾವುದೇ ಹಣಕಾಸು ವಹಿವಾಟು ನಡೆಸಲು ಆಗುವುದಿಲ್ಲ. ಯಾಕಪ್ಪಾಾ ಹೀಗಾಯ್ತು, ಇನ್ನೇನು ಮಾಡೋದು, ಎಟಿಎಂನಿಂದ ಕಾಸು ತೆಗೆಯೋದು ಹೇಗೆ, ಆನ್‌ಲೈನ್ ವಹಿವಾಟಿಗೆ ಏನು ಮಾಡೋದು ಅಂತೆಲ್ಲ ಆತಂಕ ಪಡಬೇಡಿ. ಈ ಪರಿಸ್ಥಿತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತು ಅದನ್ನು ಸರಿಪಡಿಸಿಕೊಳ್ಳಲು ಇಲ್ಲಿ ಮಾಹಿತಿ ಇದೆ.

ಬ್ಯಾಂಕ್ ಖಾತೆ ಏಕೆ ಫ್ರೀಜ್ ಆಗುತ್ತದೆ?

ಬ್ಯಾಂಕ್‌ಗಳು ನಿಮ್ಮ ಖಾತೆಯ ಭದ್ರತೆಗಾಗಿ ಮತ್ತು ಬ್ಯಾಂಕಿಂಗ್ ನಿಯಮಗಳನ್ನು ಪಾಲಿಸಲು ಕೆಲವು ಕಾರಣಗಳಿಂದ ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುತ್ತವೆ. ಆ ಕಾರಣಗಳು ಹೀಗಿವೆ-

Bank Account Frozen

ಕೆವೈಸಿ ಅಪ್ಡೇಟ್ ಆಗಿಲ್ಲದಿದ್ದರೆ: ನಿಮ್ಮ ಗುರುತಿನ ಚೀಟಿಗಳು ಅಥವಾ ವಿಳಾಸದ ದಾಖಲೆಗಳು ಹಳೆಯದಾಗಿದ್ದರೆ ಅಥವಾ ಅವಧಿ ಮುಗಿದಿದ್ದರೆ. ಬ್ಯಾಂಕುಗಳು ಕಾಲಕಾಲಕ್ಕೆ ಆಧಾರ್, ಪ್ಯಾನ್ ಹಾಗೂ ಇತರೆ ಗುರುತಿನ ದಾಖಲೆಗಳನ್ನು ನವೀಕರಿಸುವಂತೆ ಗ್ರಾಹಕರಿಗೆ ಸೂಚಿಸುತ್ತವೆ. ಈ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬಹುದು.

ಅನುಮಾನಾಸ್ಪದ ವ್ಯವಹಾರಗಳು: ನಿಮ್ಮ ಖಾತೆಯಲ್ಲಿ ಅಸಾಮಾನ್ಯ ರೀತಿಯಲ್ಲಿ ಹಣದ ವಹಿವಾಟು ನಡೆದರೆ, ಖಾತೆಯಲ್ಲಿ ಅಸಾಮಾನ್ಯ ಪ್ರಮಾಣದ ಹಣ ಜಮೆಯಾಗುವುದು ಅಥವಾ ಪದೇ ಪದೇ ಅಪರಿಚಿತ ವಹಿವಾಟುಗಳು ನಡೆಯುವುದು ಕಂಡುಬಂದರೆ, ಗ್ರಾಹಕರ ಹಣವನ್ನು ರಕ್ಷಿಸುವ ಉದ್ದೇಶದಿಂದ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಬಹುದು.

ಬ್ಯಾಂಕ್ ಗ್ರಾಹಕರ ಗಮನಕ್ಕೆ: ಈ ವಾರ 2 ದಿನ ರಜೆ ಇರುತ್ತೆ; ಕರ್ನಾಟಕದಲ್ಲಿ ಯಾವ ದಿನ?
ಬ್ಯಾಂಕ್ ಗ್ರಾಹಕರ ಗಮನಕ್ಕೆ: ಈ ವಾರ 2 ದಿನ ರಜೆ ಇರುತ್ತೆ; ಕರ್ನಾಟಕದಲ್ಲಿ ಯಾವ ದಿನ?

ಖಾತೆ ನಿಷ್ಕ್ರಿಯವಾಗಿದ್ದರೆ: ನಿಷ್ಕ್ರಿಯ ಖಾತೆಗಳು ಕೂಡ ಫ್ರೀಜ್ ಆಗಬಹುದು. ಸಾಮಾನ್ಯವಾಗಿ ಎರಡು ವರ್ಷಗಳ ಕಾಲ ಗ್ರಾಹಕರು ಯಾವುದೇ ವಹಿವಾಟು ನಡೆಸದಿದ್ದರೆ ಖಾತೆಯನ್ನು ಡಾರ್ಮೆಂಟ್ ಎಂದು ಪರಿಗಣಿಸಲಾಗುತ್ತದೆ. ಇಂತಹ ಖಾತೆಗಳನ್ನು ಪುನಃ ಸಕ್ರಿಯಗೊಳಿಸಲು ಬ್ಯಾಂಕ್ ಪರಿಶೀಲನೆ ನಡೆಸುತ್ತದೆ.

ಕೋರ್ಟ್ ಅಥವಾ ಸರ್ಕಾರದ ಆದೇಶ: ಕೆಲವೊಮ್ಮೆ ನ್ಯಾಯಾಲಯ ಅಥವಾ ಸರ್ಕಾರಿ ಆದೇಶಗಳು ಕೂಡ ಖಾತೆ ಫ್ರೀಜ್ ಆಗಲು ಕಾರಣವಾಗಬಹುದು. ತೆರಿಗೆ ವಸೂಲಿ, ಕಾನೂನು ತನಿಖೆ ಅಥವಾ ನ್ಯಾಯಾಂಗ ಪ್ರಕ್ರಿಯೆಗಳ ಹಿನ್ನೆೆಲೆಯಲ್ಲಿ ಬ್ಯಾಾಂಕುಗಳಿಗೆ ಖಾತೆಗಳನ್ನು ನಿರ್ಬಂಧಿಸಲು ಸೂಚನೆ ಬರಬಹುದು.

ದಾಖಲೆಗಳಲ್ಲಿ ವ್ಯತ್ಯಾಸ: ಅದೇ ರೀತಿ, ಹೆಸರು, ಪ್ಯಾನ್ ಅಥವಾ ಆಧಾರ್ ಮಾಹಿತಿಯಲ್ಲಿನ ವ್ಯತ್ಯಾಸಗಳು ಕೂಡ ಸಮಸ್ಯೆೆಗೆ ಕಾರಣವಾಗಬಹುದು. ದಾಖಲೆಗಳಲ್ಲಿನ ಮಾಹಿತಿ ಹೊಂದಿಕೆಯಾಗದಿದ್ದರೆ ಬ್ಯಾಂಕ್ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಬಹುದು.

''ಕರ್ನಾಟಕದ ಈ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್, ಸಾಲ ವಿತರಣೆಯಲ್ಲಿ ಶೇ 107ರಷ್ಟು ಪ್ರಗತಿ''
''ಕರ್ನಾಟಕದ ಈ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್, ಸಾಲ ವಿತರಣೆಯಲ್ಲಿ ಶೇ 107ರಷ್ಟು ಪ್ರಗತಿ''

ಖಾತೆಯನ್ನು ಅನ್‌ಫ್ರೀಜ್ ಮಾಡುವುದು ಹೇಗೆ?

ನಿಮ್ಮ ಖಾತೆ ಫ್ರೀಜ್ ಆಗಿದ್ದರೆ ಈ ಕ್ರಮಗಳನ್ನು ಅನುಸರಿಸಿ:

ಬ್ಯಾಂಕ್ ಸಂಪರ್ಕಿಸಿ: ತಕ್ಷಣವೇ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಥವಾ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ಮಾಹಿತಿ ಪಡೆಯಿರಿ.

ಕಾರಣ ತಿಳಿಯಿರಿ: ಖಾತೆ ಏಕೆ ಫ್ರೀಜ್ ಆಗಿದೆ ಎಂಬುದಕ್ಕೆ ನಿಖರವಾದ ಕಾರಣವನ್ನು ಬ್ಯಾಂಕ್ ಅಧಿಕಾರಿಗಳಿಂದ ಕೇಳಿ ತಿಳಿದುಕೊಳ್ಳಿ.

ದಾಖಲೆಗಳನ್ನು ಸಲ್ಲಿಸಿ: ಬ್ಯಾಂಕ್ ಕೇಳುವ ಅಗತ್ಯ ದಾಖಲೆಗಳನ್ನು (ಉದಾಹರಣೆಗೆ: ಗುರುತಿನ ಚೀಟಿ - ಆಧಾರಿತ ಮಾಹಿತಿ, ಪ್ಯಾನ್ ಕಾರ್ಡ್, ವಿಳಾಸದ ಪುರಾವೆ) ಸಲ್ಲಿಸಿ.

ಕೆವೈಸಿ ಪೂರ್ಣಗೊಳಿಸಿ: ಬ್ಯಾಂಕ್ ಕೇಳುವ ಫಾರಂಗಳನ್ನು ತುಂಬಿ ಮತ್ತು ಅಗತ್ಯವಿರುವ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ನಿರೀಕ್ಷಿಸಿ: ದಾಖಲೆಗಳನ್ನು ಸಲ್ಲಿಸಿದ ನಂತರ, ಬ್ಯಾಂಕ್ ಅದನ್ನು ಪರಿಶೀಲಿಸಿ ನಿಮ್ಮ ಖಾತೆಯನ್ನು ಮತ್ತೆ ಸಕ್ರಿಯಗೊಳಿಸುತ್ತದೆ.

ಇದಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಸಾಮಾನ್ಯ ಕೆವೈಸಿ ಸಮಸ್ಯೆಗಳು: ಸಾಮಾನ್ಯವಾಗಿ 1 ರಿಂದ 3 ಕೆಲಸದ ದಿನಗಳಲ್ಲಿ ಬಗೆಹರಿಯುತ್ತದೆ.
ಕಾನೂನು ಅಥವಾ ಗಂಭೀರ ಪ್ರಕರಣಗಳು: ತನಿಖೆ ಅಥವಾ ಕಾನೂನು ಆದೇಶಗಳಿದ್ದಲ್ಲಿ 7 ರಿಂದ 10 ಕೆಲಸದ ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಬೇಕಾಗಬಹುದು.

ಅಗತ್ಯವಿರುವ ದಾಖಲೆಗಳು

ಗುರುತಿನ ಚೀಟಿ - ಆಧಾರಿತ ದಾಖಲೆ, ಪಾಸ್‌ಪೋರ್ಟ್ ಅಥವಾ ಮತದಾರರ ಗುರುತಿನ ಚೀಟಿ.
ಪ್ಯಾನ್ ಕಾರ್ಡ್.

ಬ್ಯಾಂಕ್ ಪಾಸ್‌ಬುಕ್ ಅಥವಾ ಸ್ಟೇಟ್‌ಮೆಂಟ್ಸ್.

ವಿದ್ಯುತ್ ಬಿಲ್ ಅಥವಾ ಡ್ರೈವಿಂಗ್ ಲೈಸೆನ್ಸ್ (ವಿಳಾಸದ ಪುರಾವೆಯಾಗಿ).

ನೆನಪಿಡಬೇಕಾದ ಸಂಗತಿ

ಖಾತೆ ಫ್ರೀಜ್ ಆದರೆ ನೀವು ತಪ್ಪು ಮಾಡಿದ್ದೀರಿ ಎಂದರ್ಥವಲ್ಲ. ಬ್ಯಾಂಕ್‌ಗಳು ಗ್ರಾಹಕರ ಹಣವನ್ನು ರಕ್ಷಿಸಲು ಇದೊಂದು ಮುನ್ನೆಚ್ಚರಿಕೆ ಕ್ರಮ. ನಿಯಮಿತವಾಗಿ ನಿಮ್ಮ ಕೆವೈಸಿ ವಿವರಗಳನ್ನು ನವೀಕರಿಸುತ್ತಿದ್ದರೆ ಮತ್ತು ಬ್ಯಾಂಕ್‌ನಿಂದ ಬರುವ ಸಂದೇಶಗಳನ್ನು ಗಮನಿಸುತ್ತಿದ್ದರೆ ಇಂತಹ ತೊಂದರೆಗಳನ್ನು ತಪ್ಪಿಸಬಹುದು.

ಬರಹ: ಭವಾನಿ ಭಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+