ರೋಹಿತ್ ಶರ್ಮಾ ದಾಖಲೆ ಬ್ರೇಕ್ ಮಾಡಿದ ಹರ್ಮನ್‌ಪ್ರೀತ್ ಕೌರ್, ವಿಶ್ವದ ನಂ.1 ಪಟ್ಟಕ್ಕೆ ಎರಡು ಹೆಜ್ಜೆ ಬಾಕಿ

Harmanpreet Kaur: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾನುವಾರ (ಜೂನ್‌ 14) ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ ಸಾಂಪ್ರದಾಯಿಕ ಎದುರಾಳಿ ಪಾಕ್‌ ವಿರುದ್ಧದ ಹೈ-ವೋಲ್ಟೇಜ್ ಸಮರದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ದಾಖಲಿಸಿತು. ಇದೇ ಪಂದ್ಯದಲ್ಲಿ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಅದ್ಭುತ ದಾಖಲೆ ಮಾಡಿದ್ದಾರೆ. ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದ್ದ ಸಾರ್ವಕಾಲಿಕ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇನ್ನೂ ಎರಡು ಹೆಜ್ಜೆ ಮುಂದೆ ಹೋದರೆ ವಿಶ್ವದ್ ನಂಬರ್ 1 ಪಟ್ಟವನ್ನು ಕೂಡ ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಹರ್ಮನ್‌ಪ್ರೀತ್ ಕೌರ್ ಪಾತ್ರರಾಗಿದ್ದಾರೆ. ಈ ಕರೀಟ ಇದುವರೆಗೆ ಪುರುಷರ ತಂಡದ ದಿಗ್ಗಜ ರೋಹಿತ್ ಶರ್ಮಾ ಅವರ ಮುಡಿಗೇರಿತ್ತು. ಹಿಟ್‌ಮ್ಯಾನ್‌ ತಮ್ಮ ವೃತ್ತಿಜೀವನದಲ್ಲಿ ಒಟ್ಟು 159 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ದಾಖಲೆ ಹೊಂದಿದ್ದರು.

Harmanpreet Kaur Breaks Rohit Sharma s Record Creates T20 History Women s T20 World Cup 2026

ರೋಹಿತ್ ದಾಖಲೆ ಹಿಂದಿಕ್ಕಿದ ಹರ್ಮನ್‌ಪ್ರೀತ್ ಕೌರ್

ಆದರೆ ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಮಹಿಳಾ ಟಿ20 ವಿಶ್ವಕಪ್ ಲೀಗ್ ಹಂತದ ಪಂದ್ಯದಲ್ಲಿ ಕಣಕ್ಕಿಳಿದು ನಾಯಕಿ ಹರ್ಮನ್‌ಪ್ರೀತ್ ಕೌರ್ ತಮ್ಮ 160ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಪೂರೈಸಿದರು. ಈ ಮೂಲಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ ಅವರು ಭಾರತದ ಪರವಾಗಿ (ಪುರುಷ ಹಾಗೂ ಮಹಿಳಾ ಕ್ರಿಕೆಟ್ ಎರಡೂ ಸೇರಿ) ಅತಿ ಹೆಚ್ಚು ಟಿ20 ಪಂದ್ಯಗಳನ್ನಾಡಿದ ನಂಬರ್ 1 ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾದರು.

ವಿಶ್ವದಾಖಲೆಯ ಸನಿಹದಲ್ಲಿ ಹರ್ಮನ್‌ಪ್ರೀತ್ ಕೌರ್

ವಿಶ್ವ ಕ್ರಿಕೆಟ್‌ನ ಒಟ್ಟಾರೆ ಪಟ್ಟಿಯನ್ನು ಗಮನಿಸಿದರೆ ನ್ಯೂಜಿಲೆಂಡ್‌ನ ಅನುಭವಿ ಆಟಗಾರ್ತಿ ಸುಜಿ ಬೇಟ್ಸ್ (162 ಪಂದ್ಯಗಳು) ಮಾತ್ರ ಸದ್ಯ ಹರ್ಮನ್‌ಪ್ರೀತ್ ಅವರಿಗಿಂತ ಮುಂದಿದ್ದಾರೆ. ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಇನ್ನೂ ಹಲವು ಲೀಗ್ ಮತ್ತು ನಾಕೌಟ್ ಪಂದ್ಯಗಳನ್ನು ಆಡಲಿರುವುದರಿಂದ ಮುಂಬರುವ ದಿನಗಳಲ್ಲಿ ಸುಜಿ ಬೇಟ್ಸ್ ಅವರ ದಾಖಲೆಯನ್ನು ಮುರಿದು ಜಗತ್ತಿನಲ್ಲೇ ಅತಿ ಹೆಚ್ಚು ಟಿ20 ಪಂದ್ಯಗಳನ್ನಾಡಿದ ವಿಶ್ವದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಹರ್ಮನ್‌ಪ್ರೀತ್ ಪಾತ್ರರಾಗಲಿದ್ದಾರೆ.

ಜವಾಬ್ದಾರಿಯುತ ಆಟ ಆಡಿದ ಹರ್ಮನ್‌ಪ್ರೀತ್ ಕೌರ್

ನಿನ್ನೆ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ನಾಯಕಿ ಹರ್ಮನ್‌ಪ್ರೀತ್ ಕೌರ್, ಕೇವಲ 18 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಆಸರೆಯಾಗಿ ನಿಂತರು. ಉಪನಾಯಕಿ ಸ್ಮೃತಿ ಮಂದಾನ (68 ರನ್) ಅವರೊಂದಿಗೆ ಜವಾಬ್ದಾರಿಯುತ ಜೊತೆಯಾಟವಾಡಿದ ಅವರು 35 ಎಸೆತಗಳಲ್ಲಿ 36 ರನ್ ಗಳಿಸಿ ಭದ್ರವಾದ ಅಡಿಪಾಯ ಹಾಕಿಕೊಟ್ಟರು. ಮೂರನೇ ವಿಕೆಟ್‌ಗೆ ಇವರಿಬ್ಬರು 91 ರನ್‌ಗಳ ಉತ್ತಮ ಜೊತೆಯಾಟದ ನೆರವಿನಿಂದ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು.

ಉತ್ತಮವಾಗಿ ತಂಡ ಮುನ್ನಡೆಸುತ್ತಿರುವ ಹರ್ಮನ್‌ಪ್ರೀತ್

ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಹರ್ಮನ್‌ಪ್ರೀತ್ ಕೌರ್, ಉತ್ತಮ ನಾಯಕಿಯಾಗಿಯೂ ಮುಂಚೂಣಿಯಲ್ಲಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 64 ರನ್‌ಗಳ ಭರ್ಜರಿ ಗೆಲುವು ಅವರ ಚಾಣಾಕ್ಷ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬೌಲಿಂಗ್‌ನಲ್ಲಿ ದೀಪ್ತಿ ಶರ್ಮಾ (5 ವಿಕೆಟ್) ಅವರ ಸ್ಪಿನ್ ಜಾಲ ಮತ್ತು ಮೈದಾನದಲ್ಲಿ ಯುವ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಅವರ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದು ಗಮನ ಸೆಳೆದರು. ಇವರನ್ನ ಹರ್ಮನ್‌ಪ್ರೀತ್ ಬಳಸಿಕೊಂಡ ರೀತಿ ಅವರ ನಾಯಕತ್ವದ ಎಂತಹದ್ದು ಎಂದು ಎತ್ತಿತೋರಿಸುತ್ತದೆ.

ಅಲ್ಲದೆ ರೋಹಿತ್ ಶರ್ಮಾ ಅವರಂತಹ ದಿಗ್ಗಜನ ದಾಖಲೆಯನ್ನು ಮಹಿಳಾ ಕ್ರಿಕೆಟ್‌ನ ಆಟಗಾರ್ತಿಯೊಬ್ಬರು ಮುರಿದಿರುವುದು ಭಾರತೀಯ ಕ್ರೀಡಾ ಲೋಕಕ್ಕೆ ಸಂದ ಹೆಮ್ಮೆಯ ವಿಷಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಾಗೂ ಕ್ರಿಕೆಟ್ ದಿಗ್ಗಜರು ಹರ್ಮನ್‌ಪ್ರೀತ್ ಕೌರ್ ಅವರ ಈ ಮಹಾನ್ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+