ಕೇವಲ 1 ವರ್ಷದಲ್ಲಿ 10 ಲಕ್ಷದಿಂದ 80 ಲಕ್ಷ ರೂ. ವೇತನ ಹೆಚ್ಚಳ: ಈ ಜಾಬ್ ಗಿಟ್ಟಿಸಲು ಮಹಿಳೆಯ 5 ಮಾಸ್ಟರ್ ಪ್ಲಾನ್‌ ಇಲ್ಲಿದೆ

ಬೆಂಗಳೂರು: ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಕೆಲಸ ಗಿಟ್ಟಿಸಿಕೊಳ್ಳುವುದೇ ಎಲ್ಲರಿಗೂ ಒಂದು ಬಹುದೊಡ್ಡ ಸವಾಲಾಗಿದೆ. ನೂರಾರು ಕಂಪನಿಗಳಿಗೆ ಅರ್ಜಿಗಳನ್ನು ಹಾಕಿದರೂ ಸಂದರ್ಶನಕ್ಕೆ ಕರೆ ಬರದೇ ಇರುವವರ ಸಂಖ್ಯೆ ಬಹಳ ದೊಡ್ಡದಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಕೇವಲ ಪದವಿ ಪ್ರಮಾಣಪತ್ರಗಳು ಹಾಗೂ ಸಾಂಪ್ರದಾಯಿಕ ಬಯೋಡೇಟಾಗಳು ಮಾತ್ರ ಕೆಲಸ ಗಿಟ್ಟಿಸಲು ಸಾಕಾಗುವುದಿಲ್ಲ. ಕಂಪನಿಗಳು ಅಭ್ಯರ್ಥಿಯ ನಿಜವಾದ ಕೌಶಲ ಹಾಗೂ ಸಮಸ್ಯೆಯನ್ನು ಬಗೆಹರಿಸುವ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಆದರೆ, ಇಲ್ಲೊಬ್ಬ ಮಹಿಳೆ ಕೇವಲ ಸಾಂಪ್ರದಾಯಿಕ ವಿಧಾನಗಳಿಗೆ ಅಂಟಿಕೊಳ್ಳದೆ, ಎಐ ಸಾಧನಗಳನ್ನು ಬಳಸಿಕೊಂಡು ಕೇವಲ ಒಂದು ವರ್ಷದಲ್ಲಿ ತಮ್ಮ ವಾರ್ಷಿಕ ವೇತನವನ್ನು 10 ಲಕ್ಷ ರೂಪಾಯಿಯಿಂದ ಬರೋಬ್ಬರಿ 80 ಲಕ್ಷ ರೂಪಾಯಿಗೆ ಹೆಚ್ಚಿಸಿಕೊಂಡಿದ್ದಾರೆ.

ಹೌದು, ರಿತು ಮೌರ್ಯ ಎಂಬ ಮಹಿಳೆಯೇ ಈ ಅದ್ಭುತ ಸಾಧನೆ ಮಾಡಿದ್ದು, ಆಕರ್ಷಕ ರಿಮೋಟ್ ಉದ್ಯೋಗವನ್ನು ಪಡೆಯಲು ತಾವು ಅನುಸರಿಸಿದ 5 ಪ್ರಮುಖ ಹಂತಗಳ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿವರವಾಗಿ ಹಂಚಿಕೊಂಡಿದ್ದಾರೆ. ಉದ್ಯೋಗಾಕಾಂಕ್ಷಿಗಳು ರೆಸ್ಯೂಮ್ ಸಿದ್ಧಪಡಿಸಿ ಕಾಯುವ ಬದಲು, ಪ್ರಾಜೆಕ್ಟ್ ಬಿಲ್ಡಿಂಗ್ ಹಾಗೂ ನೇರವಾಗಿ ಹೈರಿಂಗ್ ಮ್ಯಾನೇಜರ್‌ಗಳನ್ನು ಸಂಪರ್ಕಿಸುವ ವಿನೂತನ ತಂತ್ರವನ್ನು ಅವರು ತಿಳಿಸಿಕೊಟ್ಟಿದ್ದಾರೆ. ಅವರು ಹಂಚಿಕೊಂಡಿರುವ ಈ ಮಾಹಿತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Remote Job

ವೇತನ ಹೆಚ್ಚಿಸಲು 5 ಪ್ರಮುಖ ಹಂತಗಳು:

1. ಕಂಪನಿ ಮತ್ತು ಹುದ್ದೆಯ ಆಯ್ಕೆ: ಉದ್ಯೋಗಾಕಾಂಕ್ಷಿಗಳು ಮೊದಲು ತಾವು ಕೆಲಸ ಮಾಡಲು ಬಯಸುವ ಕಂಪನಿಯನ್ನು ಗುರುತಿಸಬೇಕು. ಆ ಕಂಪನಿಯಲ್ಲಿ ಸದ್ಯಕ್ಕೆ ಆ ಹುದ್ದೆ ಖಾಲಿ ಇರಲಿ ಅಥವಾ ಇಲ್ಲದಿರಲಿ, ನಿಮ್ಮ ವೃತ್ತಿಜೀವನದ ಗುರಿಗಳಿಗೆ ಹೊಂದುವಂತಹ ಜಾಬ್ ಡಿಸ್ಕ್ರಿಪ್ಷನ್ ಅನ್ನು ಅಧ್ಯಯನ ಮಾಡಬೇಕು. ಕಂಪನಿಯ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ಮೊದಲ ಹೆಜ್ಜೆ ಎಂದು ಅವರು ವಿವರಿಸಿದ್ದಾರೆ.

2. ಚಾಟ್‌ಜಿಪಿಟಿ ಬಳಕೆ: ಆಯ್ಕೆ ಮಾಡಿದ ಜಾಬ್ ಡಿಸ್ಕ್ರಿಪ್ಷನ್ ಅನ್ನು ಸರಿಯಾಗಿ ವಿಶ್ಲೇಷಿಸಲು ಚಾಟ್‌ಜಿಪಿಟಿ ಸಹಾಯ ಪಡೆಯಬೇಕು. ಈ ಜನಪ್ರಿಯ ಎಐ ಟೂಲ್ ಮೂಲಕ ಆ ನಿರ್ದಿಷ್ಟ ಹುದ್ದೆಗೆ ಸಂಬಂಧಿಸಿದಂತೆ ಯಾವ ರೀತಿಯ ಪ್ರಾಜೆಕ್ಟ್ ಮಾಡಬಹುದು ಎಂಬ ಐಡಿಯಾಗಳನ್ನು ಪಡೆದುಕೊಳ್ಳಬಹುದು. ಪ್ರಾಜೆಕ್ಟ್‌ನ ಸಂಪೂರ್ಣ ವಿನ್ಯಾಸ ಹಾಗೂ ಅಗತ್ಯ ಸೂಚನೆಗಳನ್ನು ಇದು ಒದಗಿಸುತ್ತದೆ.

3. Emergent.sh ಮೂಲಕ ಪ್ರಾಜೆಕ್ಟ್ ರಚನೆ: ಕಲ್ಪನೆಯನ್ನು ಕಾರ್ಯಗತಗೊಳಿಸಲು ಎಮರ್ಜೆಂಟ್.ಎಸ್ಎಚ್‌ನಂತಹ ಎಐ ಆಧಾರಿತ ಡೆವಲಪ್‌ಮೆಂಟ್ ಪ್ಲಾಟ್‌ಫಾರ್ಮ್ ಬಳಸಬೇಕು ಎಂದು ರಿತು ಮೌರ್ಯ ಸಲಹೆ ನೀಡಿದ್ದಾರೆ. ನಿಮಗೆ ಕೋಡಿಂಗ್ ಬಗ್ಗೆ ಹೆಚ್ಚು ತಾಂತ್ರಿಕ ಜ್ಞಾನವಿಲ್ಲದಿದ್ದರೂ, ಈ ಪ್ಲಾಟ್‌ಫಾರ್ಮ್ ಸಹಾಯದಿಂದ ಪ್ಲಾನಿಂಗ್, ಕೋಡಿಂಗ್, ಡಿಬಗ್ಗಿಂಗ್ ಮಾಡಿ ಒಂದು ಉತ್ತಮ ಕಾರ್ಯಾಚರಣೆಯ ಮಾದರಿಯನ್ನು ಸುಲಭವಾಗಿ ಸಿದ್ಧಪಡಿಸಬಹುದು.

4. ಪ್ರಾಜೆಕ್ಟ್ ಸುಧಾರಣೆ: ಯಾವುದೇ ಪ್ರಾಜೆಕ್ಟ್‌ನ ಮೊದಲ ಆವೃತ್ತಿಯೇ ಅಂತಿಮವಾಗಿರುವುದಿಲ್ಲ. ಅದು ಕೇವಲ ಆರಂಭಿಕ ಹಂತವಷ್ಟೇ. ಅದನ್ನು ಹಲವು ಬಾರಿ ಪರೀಕ್ಷಿಸಿ, ಇತರರಿಂದ ಫೀಡ್‌ಬ್ಯಾಕ್ ಪಡೆದು, ಅಗತ್ಯ ಬದಲಾವಣೆಗಳನ್ನು ಮಾಡಬೇಕು. ಆ ಪ್ರಾಜೆಕ್ಟ್ ಸಂಪೂರ್ಣವಾಗಿ ವೃತ್ತಿಪರ ಹಾಗೂ ಪ್ರಾಯೋಗಿಕವಾಗಿರುವಂತೆ ಸಿದ್ಧಪಡಿಸಿಕೊಳ್ಳಬೇಕು.

5. ನೇರ ಸಂಪರ್ಕ ಮತ್ತು ಲಿಂಕ್ಡ್‌ಇನ್ ಪ್ರಚಾರ: ಪ್ರಾಜೆಕ್ಟ್ ಸಿದ್ಧವಾದ ನಂತರ, ಅದನ್ನು ನೇರವಾಗಿ ಆಯಾ ಕಂಪನಿಯ ಹೈರಿಂಗ್ ಮ್ಯಾನೇಜರ್‌ಗೆ ಕಳುಹಿಸಬೇಕು. ಆ ಹುದ್ದೆಗೆ ಸಂಬಂಧಿಸಿದ ಸವಾಲುಗಳನ್ನು ನೀವು ಸಿದ್ಧಪಡಿಸಿರುವ ಈ ಪ್ರಾಜೆಕ್ಟ್ ಹೇಗೆ ಬಗೆಹರಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಿ ಮೆಸೇಜ್ ಮಾಡಬೇಕು. ಇದರ ಜೊತೆಗೆ, ಪ್ರಾಜೆಕ್ಟ್‌ನ ಕಾರ್ಯವೈಖರಿಯ ಚಿಕ್ಕ ವಿಡಿಯೋ ಮಾಡಿ ಅದನ್ನು ನಿಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಪಿನ್ ಮಾಡಬೇಕು.

ರಿತು ಮೌರ್ಯ ಅವರ ಈ ವಿಧಾನವು ಆಧುನಿಕ ಉದ್ಯೋಗ ಹುಡುಕಾಟದಲ್ಲಿ ಎಐ ಸಾಧನಗಳ ಪಾತ್ರ ಎಷ್ಟು ದೊಡ್ಡದು ಎಂಬುದನ್ನು ಸಾಬೀತುಪಡಿಸುತ್ತದೆ. ಕೇವಲ ರೆಸ್ಯೂಮ್ ಮೂಲಕ ಕೆಲಸ ಕೇಳುವ ಬದಲು, ಸಂದರ್ಶನಕ್ಕೂ ಮುನ್ನವೇ ನಿಮ್ಮ ಕೌಶಲ್ಯವನ್ನು ಪ್ರಾಜೆಕ್ಟ್ ಮೂಲಕ ಪ್ರದರ್ಶಿಸಿದರೆ ಅತ್ಯುತ್ತಮ ರಿಮೋಟ್ ಉದ್ಯೋಗ ಹಾಗೂ ಭಾರಿ ವೇತನ ಹೆಚ್ಚಳ ಪಡೆಯಬಹುದು ಎಂಬುದಕ್ಕೆ ಈ ಮಹಿಳೆಯೇ ಉದಾಹರಣೆಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+