ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Nandini Milk Price : ನಂದಿನಿ ಹಾಲು ಮತ್ತು ಮೊಸರಿನ ದರದಲ್ಲಿ 3 ರೂಪಾಯಿ ಏರಿಕೆ

|
Google Oneindia Kannada News

ಬೆಂಗಳೂರು ನವೆಂಬರ್‌ 14: ಪ್ರತಿ ಲೀಟರ್ ನಂದಿನಿ ಹಾಲಿನ ದರದಲ್ಲಿ 3 ರೂಪಾಯಿ ಏರಿಸಲು ಕೆಎಂಎಫ್ ನಿರ್ಧರಿಸಿದೆ. ಹಾಗೂ ಮೊಸರಿನ ಬೆಲೆಯೂ ಕೂಡ 3 ರೂಪಾಯಿ ಏರಿಕೆ ಮಾಡಲಾಗಿದೆ.

ಕರ್ನಾಟಕ ಹಾಲು ಒಕ್ಕೂಟವು ನಡೆಸಿದ ಸಭೆಯಲ್ಲಿ ನಂದಿನಿ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಕೈಗೊಳ್ಳಲಾಗಿದೆ. ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡುವುದು ಹಾಗೂ ರೈತರ ಆರ್ಥಿಕ ಅಭಿವೃದ್ಧಿಗಾಗಿ ಪ್ರತಿ ಲೀಟರ್ ಹಾಲು ಹಾಗೂ ಮೊಸರಿನ ಮೇಲೆ 3 ರೂಪಾಯಿ ಹೆಚ್ಚಳ ಮಾಡುವುದಕ್ಕೆ ಕೆಎಂಎಫ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಕೆಎಂಎಫ್ ನೇಮಕಾತಿ; 487 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿಕೆಎಂಎಫ್ ನೇಮಕಾತಿ; 487 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ

ಸಮೃದ್ಧಿ ಹಾಲಿನ ದರ ಪ್ರತಿ ಲೀಟರ್‌ಗೆ 48 ರೂಪಾಯಿ ಇಂದ 51 ರೂಪಾಯಿಗೆ ಹೆಚ್ಚಳವಾಗಿದೆ. ಟೋನ್ಡ್‌ ಹಾಲಿನ ದರ 37ರೂಪಾಯಿ ಇಂದ 40 ರೂಪಾಯಿಗೆ ಏರಿಸಲಾಗಿದೆ. ಸ್ಪೆಷಲ್‌ ಹಾಲಿನ ದರ 43 ರೂಪಾಯಿ ಇಂದ 46 ರೂಪಾಯಿಗೆ ಏರಿಸಲಾಗಿದೆ. ಇನ್ನು ಮೊಸರಿನ ಬೆಲೆಯನ್ನು 45 ರೂಪಾಯಿ ಇಂದ 48 ರೂಪಾಯಿಗೆ ಏರಿಸಲಾಗಿದೆ. ಈ ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ.ನಂದಿನಿ ಟೋನ್ಡ್‌ ಹಾಲಿನ ದರ ಪ್ರಸ್ತುತ 37 ರೂಪಾಯಿ ಇದ್ದು ಪರಿಷ್ಕೃತ ದರ 40 ರೂಪಾಯಿ ಮಾಡಲಾಗಿದೆ.

Karnataka Milk Federation Hiked Nandini Milk And Curd Prices By Rs 3 Per Litre From 15th November

ಹೋಮೋಜಿನೈಸ್ಡ್‌ ಟೋನ್ಡ್‌ ಹಾಲಿನ ದರ ಪ್ರಸ್ತುತ 38 ರೂಪಾಯಿ ಇದ್ದು ಪರಿಷ್ಕೃತ ದರ 41 ರೂಪಾಯಿ ಮಾಡಲಾಗಿದೆ.

ಹೋಮೋಜಿನೈಸ್ಡ್‌ ಹಸುವಿನ ಹಾಲಿನ ದರ ಪ್ರಸ್ತುತ 42 ರೂಪಾಯಿ ಇದ್ದು ಪರಿಷ್ಕೃತ ದರ 45 ರೂಪಾಯಿ ಮಾಡಲಾಗಿದೆ.

ಸ್ಪೆಷಲ್‌ ಹಾಲಿನ ದರ ಪ್ರಸ್ತುತ 43 ರೂಪಾಯಿ ಇದ್ದು ಪರಿಷ್ಕೃತ ದರ 46 ರೂಪಾಯಿ ಮಾಡಲಾಗಿದೆ.

ಶುಭಂ ಹಾಲಿನ ದರ ಪ್ರಸ್ತುತ 43 ರೂಪಾಯಿ ಇದ್ದು ಪರಿಷ್ಕೃತ ದರ 46 ರೂಪಾಯಿ ಮಾಡಲಾಗಿದೆ.

ಹೋಮೋಜಿನೈಸ್ಡ್‌ ಸ್ಟ್ಯಾಂಡಡೈಸ್ಡ್ ಹಾಲಿನ ದರ ಪ್ರಸ್ತುತ 44 ರೂಪಾಯಿ ಇದ್ದು ಪರಿಷ್ಕೃತ ದರ 47 ರೂಪಾಯಿ ಮಾಡಲಾಗಿದೆ.

ಸಮೃದ್ಧಿ ಹಾಲಿನ ದರ ಪ್ರಸ್ತುತ 48 ರೂಪಾಯಿ ಇದ್ದು ಪರಿಷ್ಕೃತ ದರ 51 ರೂಪಾಯಿ ಮಾಡಲಾಗಿದೆ.

ಸಂತೃಪ್ತಿ ಹಾಲಿನ ದರ ಪ್ರಸ್ತುತ 50 ರೂಪಾಯಿ ಇದ್ದು ಪರಿಷ್ಕೃತ ದರ 53 ರೂಪಾಯಿ ಮಾಡಲಾಗಿದೆ.

ಡಬಲ್ಡ್‌ ಟೋನ್ಡ್‌ ಹಾಲಿನ ದರ ಪ್ರಸ್ತುತ 36 ರೂಪಾಯಿ ಇದ್ದು ಪರಿಷ್ಕೃತ ದರ 39 ರೂಪಾಯಿ ಮಾಡಲಾಗಿದೆ.

ಮೊಸರು ಪ್ರತಿ ಕೆ.ಜಿಯ ಪ್ರಸ್ತುತ 45 ರೂಪಾಯಿ ಇದ್ದು ಪರಿಷ್ಕೃತ ದರ 48 ರೂಪಾಯಿ ಮಾಡಲಾಗಿದೆ.

Nandini Ghee Price Hike : ನಂದಿನಿ ತುಪ್ಪದ ಬೆಲೆ 2 ತಿಂಗಳಲ್ಲಿ 180 ರೂ. ಹೆಚ್ಚಳ Nandini Ghee Price Hike : ನಂದಿನಿ ತುಪ್ಪದ ಬೆಲೆ 2 ತಿಂಗಳಲ್ಲಿ 180 ರೂ. ಹೆಚ್ಚಳ

English summary
Karnataka Milk Federation Hiked Nandini Milk And Curd Prices By Rs 3 Per Litre From 15th November.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X