Milk Price Hike : ಜಂಬೋ ಹಾಲಿನ ಪ್ಯಾಕೆಟ್ ದರ 3 ರೂಪಾಯಿ ಏರಿಕೆ

ಕರ್ನಾಟಕ ಹಾಲು ಒಕ್ಕೂಟ, ಜಂಬೋ ಪ್ಯಾಕೆಟ್ ಹಾಲಿನ ದರವನ್ನು 3 ರೂಪಾಯಿ ಏರಿಕೆ ಮಾಡಿದೆ. 6‌ ಲೀಟರ್ ಹಾಲಿನ ಸಾಮರ್ಥ್ಯದ ಜಂಬೋ ಪ್ಯಾಕೆಟ್ ದರ ಮೊದಲು 231 ರೂಪಾಯಿ ಇದ್ದು, ಈಗ 234 ರೂಪಾಯಿಗೆ ಹೆಚ್ಚಾಗಿದೆ.

ಬೆಂಗಳೂರು ಫೆಬ್ರವರಿ 11: ಇತ್ತೀಚಿಗಷ್ಟೆ ಹಾಲು ಮೊಸರಿನ ದರ ಏರಿಸಿ ಜನರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿದ್ದ ಕೆಎಂಫ್‌ ಸಂಸ್ಥೆ ಇದೀಗ ಮತ್ತೆ ಗ್ರಾಹಕರಿಗೆ ಶಾಕ್‌ ನೀಡಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬರೆಯಿಂದ ಸಂಕಷ್ಟಕ್ಕೆ ಸಿಲುಕುತ್ತಿರುವ ಜನರಿಗೆ ಹಾಲಿನ ದರ ಏರಿಕೆ ಕಹಿ ಸುದ್ದಿಯಾಗಿದೆ.

ಕರ್ನಾಟಕ ಹಾಲು ಒಕ್ಕೂಟ, ಜಂಬೋ ಪ್ಯಾಕೆಟ್ ಹಾಲಿನ ದರವನ್ನು 3 ರೂಪಾಯಿ ಏರಿಕೆ ಮಾಡಿದೆ. 6‌ ಲೀಟರ್ ಹಾಲಿನ ಸಾಮರ್ಥ್ಯದ ಜಂಬೋ ಪ್ಯಾಕೆಟ್ ದರ ಮೊದಲು 231 ರೂಪಾಯಿ ಇದ್ದು, ಈಗ 234 ರೂಪಾಯಿಗೆ ಹೆಚ್ಚಾಗಿದೆ. ಫೆಬ್ರವರಿ 11 ಶನಿವಾರದಿಂದಲೇ ಪರಿಷ್ಕೃತ ಜಂಬೋ ಪ್ಯಾಕೆಟ್ ಹಾಲಿನ ದರ ಜಾರಿಗೆ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಮೂಲ್ ಕೆಎಂಎಫ್​​​ ಅಂಗ ಸಂಸ್ಥೆಯಿಂದ‌ ಪ್ರಕಟಣೆ ಹೊರಬಿದ್ದಿದ್ದು, ಫೆಬ್ರವರಿ 11ರಿಂದ ಮಾರುಕಟ್ಟೆಗೆ ಹೊಸ ಮುದ್ರಿತ ಪ್ಯಾಕೆಟ್ ಮಾರಾಟವಾಗಲಿದೆ. ಈಗಾಗಲೇ ಬೆಲೆ ಮುದ್ರಿತ ಹಾಲಿನ ಪ್ಯಾಕೆಟ್​ಗಳನ್ನು​ ಹಳೇ ಬೆಲೆಯಲ್ಲಿಯೇ ಮಾರಾಟ ಮಾಡಬೇಕು ಎಂದು ರಿಟೇಲ್, ಫ್ರಾಂಚೈಸಿ, ಔಟ್​ಲೆಟ್​ದಾರರಿಗೆ ಬಮೂಲ್ ಪ್ರಕಟಣೆ ಮೂಲಕ ತಿಳಿಸಿದೆ ಎನ್ನಲಾಗಿದೆ.

Karnataka Milk Federation Hiked ₹3 For Jumbo Packets

ಇನ್ನು ಕಳೆದ ವರ್ಷ 2022ರ ನವೆಂಬರ್‌ನಲ್ಲಿ ಕೆಎಂಫ್‌ ಸಂಸ್ಥೆ ಹಾಲು ಹಾಗೂ ಮೊಸರಿನ ದರವನ್ನು ಏರಿಕೆ ಮಾಡಿತ್ತು. ದರ ಪರಿಷ್ಕರಣೆ ಬಳಿಕ ಹಾಲಿನ ದರ ಈ ಕೆಳಗಿನಂತಿದೆ.

ಇನ್ನು ಫೆಬ್ರವರಿ 03 ಶುಕ್ರವಾರದಿಂದ ಅಮುಲ್ ಹಾಲಿನ ಬೆಲೆಯನ್ನು ಸಹ ಹೆಚ್ಚಿಸಲಾಗಿತ್ತು. ಅಮುಲ್ ಹಾಲಿನ ಪ್ಯಾಕ್‌ಗಳ ಎಲ್ಲಾ ವಿಧಗಳಲ್ಲಿಯೂ ಬೆಲೆಯನ್ನು ಲೀಟರ್‌ಗೆ 3 ರೂಪಾಯಿಗೆ ಹೆಚ್ಚಿಸಲಾಗಿತ್ತು. ಫೆಬ್ರವರಿ 3, 2023ರಿಂದ ಪರಿಷ್ಕರಿಸದ ದರದಲ್ಲಿ ಹಾಲಿನ ಮಾರಾಟದ ಬಗ್ಗೆ ಅಮುಲ್ ಬ್ರಾಂಡ್‌ಗೆ ಹೆಸರುವಾಸಿಯಾದ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಮಾಹಿತಿ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+