ಸುನಾಮಿ ಮಳೆಗೆ ತುಂಬಿದ ರಾಜ್ಯದ ಪ್ರಮುಖ ಜಲಾಶಯಗಳು: ನದಿತೀರದ ಜನರಿಗೆ ನಡುಕ ಶುರು
Karnataka Reservoirs Water Level: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಬಿಡುವು ನೀಡಿದ್ದ ಮುಂಗಾರು ಮಳೆ ಮತ್ತೆ ಚುರುಕು ಪಡೆದಿದೆ. ಈಗಾಗಲೇ ಭಾರೀ ಮಳೆಯಿಂದ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಕೆಲವೇ ಕೆಲವು ಮಾತ್ರ ತುಂಬುವ ಹಂತದಲ್ಲಿವೆ. ಹಾಗಾದ್ರೆ ಇಂದು (ಸೆಪ್ಟೆಂಬರ್ 1) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್‌ಎಸ್ ಸೇರಿದಂತೆ ಉಳಿದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮುಂಗಾರು ಮಳೆ ಆರ್ಭಟದಿಂದ ಹಲವು ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿರುವ ಪರಿಣಾಮ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಜನಜೀವನ ಅಸ್ತವ್ಯಸ್ತವಾದ ಘಟನೆಗಳು ನಡೆದಿವೆ. ಮತ್ತೊಂದೆಡೆ ಜಲಾಶಯಗಳಿಗೂ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಲಿದೆ. ಈಗಾಗಲೇ ಕೆಆರ್‌ಎಸ್, ಕಬಿನಿ ಸೇರಿಂದತೆ ಹಲವು ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ.

1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಒಟ್ಟು ಸಾಮರ್ಥ್ಯ- 49.45 ಟಿಎಂಸಿ
* ಇಂದಿನ ನೀರಿನ ಮಟ್ಟ- 124.36 ಅಡಿ
* ಒಳಹರಿವು - 27,491 ಕ್ಯೂಸೆಕ್
* ಹೊರಹರಿವು - 25,682 ಕ್ಯೂಸೆಕ್
2. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2,283.96 ಅಡಿ
* ಒಳಹರಿವು - 9,029 ಕ್ಯೂಸೆಕ್
* ಹೊರಹರಿವು - 6,650 ಕ್ಯೂಸೆಕ್
3. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ 519.60 ಮೀಟರ್
* ಒಟ್ಟು ಸಾಮರ್ಥ್ಯ- 123.8 ಟಿಎಂಸಿ
* ಇಂದಿನ ನೀರಿನ ಮಟ್ಟ - 519.53 ಮೀಟರ್
* ಒಳಹರಿವು - 84,277 ಕ್ಯೂಸೆಕ್
* ಹೊರಹರಿವು - 90,365 ಕ್ಯೂಸೆಕ್
4. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಒಟ್ಟು ಸಾಮರ್ಥ್ಯ - 105.79 ಟಿಎಂಸಿ
* ಇಂದಿನ ನೀರಿನ ಮಟ್ಟ- 1,625.32 ಅಡಿ
* ಒಳಹರಿವು - 78,335 ಕ್ಯೂಸೆಕ್
* ಹೊರಹರಿವು - 69,121 ಕ್ಯೂಸೆಕ್
5. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,079.5 ಅಡಿ
* ಒಟ್ಟು ಸಾಮರ್ಥ್ಯ - 49.45 ಟಿಎಂಸಿ
* ಇಂದಿನ ನೀರಿನ ಮಟ್ಟ - 2,079.15 ಅಡಿ
* ಒಳಹರಿವು - 4,904 ಕ್ಯೂಸೆಕ್
* ಹೊರಹರಿವು - 4,904 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಒಟ್ಟು ಸಾಮರ್ಥ್ಯ - 151.75 ಟಿಎಂಸಿ
* ಇಂದಿನ ನೀರಿನ ಮಟ್ಟ - 1,817.40 ಅಡಿ
* ಒಳಹರಿವು - 24,867 ಕ್ಯೂಸೆಕ್
* ಹೊರಹರಿವು 24,711 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಒಟ್ಟು ಸಾಮರ್ಥ್ಯ - 71.54 ಟಿಎಂಸಿ
* ಇಂದಿನ ನೀರಿನ ಮಟ್ಟ - 184.3 ಅಡಿ
* ಒಳಹರಿವು - 22,226 ಕ್ಯೂಸೆಕ್
* ಹೊರಹರಿವು - 28,222 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಒಟ್ಟು ಸಾಮರ್ಥ್ಯ - 51 ಟಿಎಂಸಿ
* ಇಂದಿನ ನೀರಿನ ಮಟ್ಟ - 2,174.93 ಅಡಿ
* ಒಳಹರಿವು - 11,530 ಕ್ಯೂಸೆಕ್
* ಹೊರಹರಿವು - 9,925 ಕ್ಯೂಸೆಕ್
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಒಟ್ಟು ಸಾಮರ್ಥ್ಯ - 37.10 ಟಿಎಂಸಿ
* ಇಂದಿನ ನೀರಿನ ಮಟ್ಟ - 2,921.84 ಅಡಿ
* ಒಳಹರಿವು - 17,217 ಕ್ಯೂಸೆಕ್
* ಹೊರಹರಿವು - 17,835 ಕ್ಯೂಸೆಕ್
10. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಒಟ್ಟು ಸಾಮರ್ಥ್ಯ - 8.5 ಟಿಎಂಸಿ
* ಇಂದಿನ ನೀರಿನ ಮಟ್ಟ - 2,858.43 ಅಡಿ
* ಒಳಹರಿವು - 8,461 ಕ್ಯೂಸೆಕ್
* ಹೊರಹರಿವು - 8,750 ಕ್ಯೂಸೆಕ್
ಒಟ್ಟಿನಲ್ಲೊ ನೋಡೋದಾದ್ರೆ, ಬಹುತೇಕ ಪ್ರಮುಖ ಜಲಾಶಯಗಳು ತುಂಬಿದ್ದು, ಇನ್ನೂ ಕೆಲವು ಭರ್ತಿಯಾಗುವ ಹಂತದಲ್ಲಿವೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಮತ್ತೆ ಭಾರೀ ಮಳೆ ಮುಂದುವರದರೆ, ಉಳಿದ ಜಲಾಶಯಗಳು ಭರ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಪೈಕಿ ಕೆಲವು ಎರಡು ಬಾರಿ ಭರ್ತಿಯಾಗಿವೆ. ಅದೇನೇ ಇರಲಿ ಜಲಾಶಯಗಳು ಭರ್ತಿಯಿಂದ ಬೇಸಿಗೆಯಲ್ಲಿ ಇದೇ ನೀರು ಆಸರೆಯಾಗಲಿದೆ. ಈ ಹಿನ್ನೆಲೆ ರೈತರ ಮುಖದಲ್ಲಿ ಮಂದಹಾಸ ಹೆಚ್ಚಾಗಿದೆ. ಮತ್ತೊಂದೆಡೆ ನೋಡೋದಾದ್ರೆ, ನದಿ ತೀರಗಳ ಜನರಿಗೆ ನಡುಕ ಶುರುವಾಗಿದೆ. ಯಾಕಂದ್ರೆ, ಡ್ಯಾಂಗಳಿಂದ ಯಾವಾಗ ಬೇಕಾದ್ರೂ ನೀರನ್ನು ಹೊರಗಡೆ ಬಿಡಬಹುದು ಆದ್ದರಿಂದ.












Click it and Unblock the Notifications