Karnataka Major Reservoirs: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ನವೆಂಬರ್ 07ರ ಅಂಕಿಅಂಶಗಳು
Karnataka Major Reservoirs Water Level: ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ವರುಣನ ಆರ್ಭಟ ಸಂಪೂರ್ಣ ತಗ್ಗಿದ್ದು, ಅಲ್ಲಲ್ಲಿ ಸಾಧಾರಣ ಮಳೆ ಮುಂದುವರೆದಿದೆ. ಪರಿಣಾಮ ಕೆಲವೇ ಕೆಲವು ಜಲಾಶಯಗಳಿಗೆ ಮಾತ್ರ ಒಳಹರಿವಿನ ಪ್ರಮಾಣ ಹೆಚ್ಚಿದೆ. ಹಾಗಾದ್ರೆ, ಶುಕ್ರವಾರ (ನವೆಂಬರ್ 07) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೃಷ್ಣರಾಜಸಾಗರ (ಕೆಆರ್ಎಸ್) ಸೇರಿದಂತೆ ಉಳಿದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮುಂಗಾರು ಕೈಕೊಟ್ಟ ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳು ಖಾಲಿ ಆಗುವ ಹಂತಕ್ಕೆ ತಲುಪಿವೆ. ಅಲ್ಲದೆ, ಪ್ರಮುಖ ಜಲಾಶಯಗಳಲ್ಲಿ ಒಳಹರಿವು ತಗ್ಗಿದ್ದು, ಇದರಿಂದ ಅನ್ನದಾತರಿಗೆ ಆತಂಕ ಶುರುವಾಗಿದೆ. ಕೆಲ ಡ್ಯಾಂಗಳಿಗೆ ಮಾತ್ರ ಒಳಹರಿವಿದೆ.

1. ಕೆಆರ್ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ - 99.40 ಅಡಿ
* ಒಳಹರಿವು - 1,527 ಕ್ಯೂಸೆಕ್
* ಹೊರಹರಿವು - 7,884 ಕ್ಯೂಸೆಕ್
2. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2,272.52 ಅಡಿ
* ಒಳಹರಿವು - 773 ಕ್ಯೂಸೆಕ್
* ಹೊರಹರಿವು - 2,250 ಕ್ಯೂಸೆಕ್
3. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಇಂದಿನ ನೀರಿನ ಮಟ್ಟ - 2,897.20 ಅಡಿ
* ಒಳಹರಿವು - 1,238 ಕ್ಯೂಸೆಕ್
* ಹೊರಹರಿವು - 340 ಕ್ಯೂಸೆಕ್
4. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಇಂದಿನ ನೀರಿನ ಮಟ್ಟ - 1,791.20 ಅಡಿ
* ಒಳಹರಿವು - 1,022 ಕ್ಯೂಸೆಕ್
* ಹೊರಹರಿವು - 3,342.14 ಕ್ಯೂಸೆಕ್
5. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಇಂದಿನ ನೀರಿನ ಮಟ್ಟ - 1,610.18 ಅಡಿ
* ಒಳಹರಿವು - 00 ಕ್ಯೂಸೆಕ್
* ಹೊರಹರಿವು - 9,193 ಕ್ಯೂಸೆಕ್
6. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,079.50 ಅಡಿ
* ಇಂದಿನ ನೀರಿನ ಮಟ್ಟ - 2,064.72 ಅಡಿ
* ಒಳಹರಿವು - 00 ಕ್ಯೂಸೆಕ್
* ಹೊರಹರಿವು - 1,194 ಕ್ಯೂಸೆಕ್
7. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಇಂದಿನ ನೀರಿನ ಮಟ್ಟ - 2,171.94 ಅಡಿ
* ಒಳಹರಿವು - 00 ಕ್ಯೂಸೆಕ್
* ಹೊರಹರಿವು - 5,833 ಕ್ಯೂಸೆಕ್
8. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಇಂದಿನ ನೀರಿನ ಮಟ್ಟ - 172.07 ಅಡಿ
* ಒಳಹರಿವು - 180 ಕ್ಯೂಸೆಕ್
* ಹೊರಹರಿವು - 1,291 ಕ್ಯೂಸೆಕ್
9. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 519.60 ಮೀಟರ್
* ಇಂದಿನ ನೀರಿನ ಮಟ್ಟ - 515.23 ಮೀಟರ್
* ಒಳಹರಿವು - 00 ಕ್ಯೂಸೆಕ್
* ಹೊರಹರಿವು - 24,596 ಕ್ಯೂಸೆಕ್
10. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,859 ಮೀಟರ್
* ಇಂದಿನ ನೀರಿನ ಮಟ್ಟ - 2,848.47 ಮೀಟರ್
* ಒಳಹರಿವು - 252 ಕ್ಯೂಸೆಕ್
* ಹೊರಹರಿವು - 912 ಕ್ಯೂಸೆಕ್
ಸದ್ಯ ರಾಜ್ಯದಲ್ಲಿ ಮಳೆರಾಯನ ಆರ್ಭಟ ತಗ್ಗಿದ್ದು, ಚಳಿ ಆವರಿಸಿದೆ. ಈ ನಡುವೆಯೇ ಕೆಲವು ಭಾಗಗಳ ಅಲ್ಲಲ್ಲಿ ಮಾತ್ರ ಜಿನುಗು ಮಳೆಯಾಗುತ್ತುದೆ. ಬೆಳಗ್ಗೆ ಹಾಗೂ ಸಂಜೆ ವೇಳೆ ಮಂಜಿನ ಜೊತೆ ಶೀತಾಗಳಿ ಬೀಸುತ್ತಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಚಳಿಗಾಳಿ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ನೀಡಿದೆ.


Click it and Unblock the Notifications
