Karnataka Dam Water Level: ಹಾರಂಗಿ, ಆಲಮಟ್ಟಿಯಲ್ಲಿ ಉತ್ತಮ ನೀರಿನ ಸಂಗ್ರಹ, ಇತರ ಡ್ಯಾಂಗಳ ಇಂದಿನ ಮಟ್ಟ?
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದು, 2023ರ ನಂತರ ಎರಡನೇ ಬಾರಿಗೆ ಪ್ರಮುಖ 14 ಜಲಾಶಯಗಳಲ್ಲಿ ನೀರಿನ ಸಂಗ್ರಹ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇತ್ತ ಹಾರಂಗಿ ಡ್ಯಾಂ ಭರ್ತಿಯಾಗಿದ್ದು, ಆಲಮಟ್ಟಿ ಜಲಾಶಯದಲ್ಲಿ ಉತ್ತಮ ಒಳಹರಿವು ಕಂಡು ಬಂದಿದೆ. ಉಳಿದಂತೆ ಎಲ್ಲ ನದಿ, ಜಲಾಶಯಗಳಲ್ಲಿ ನೀರಿನ ಸಂಗ್ರಹದಲ್ಲಿ ಈ ವರ್ಷ ಬಾರಿ ಇಳಿಕೆಯಾಗಿದೆ. 2026 ಜುಲೈ ತಿಂಗಳು ಮುಗಿಯುತ್ತಾ ಬಂದರೂ ಡ್ಯಾಂಗಳಲ್ಲಿ ಅರ್ಧದಷ್ಟು ನೀರು ಸಂಗ್ರಹವಾಗಿಲ್ಲ. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ (ಜುಲೈ 27) ನೀರಿನ ಸಂಗ್ರಹದ ಮಾಹಿತಿ ಇಲ್ಲಿದೆ.
ಕೃಷ್ಣ ರಾಜ ಸಾಗರ (KRS) ಡ್ಯಾಂ 2025ರಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಸುಮಾರು ಮೂರು ಬಾರಿ ಭರ್ತಿ ಆಗಿತ್ತು. ಈ ವರ್ಷ 2026ರಲ್ಲಿ ಕೇವಲ 91 ಅಡಿ ನೀರಿದೆ. ಕೃಷಿ, ಕುಡಿಯಲು ಕಾವೇರಿ ನೀರಿನ ದೈನಂದಿನ ಬಳಕೆ ಹೆಚ್ಚಿರುವ ಕಾರಣ KRS ಹೊರ ಹರಿವು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ನೀರಿನಮಟ್ಟ ಮತ್ತಷ್ಟು ಕುಸಿಯಲಿದೆ. ಆಲಮಟ್ಟಿ ಡ್ಯಾಂ ಸ್ಥಿತಿ ಹಿಂದಿನ ವರ್ಷಕ್ಕಿಂತ 2026ರಲ್ಲಿ ಉತ್ತಮವಾಗಿದೆ.

ಹಾರಂಗಿ ಡ್ಯಾಂ ಭರ್ತಿಯಾಗಿದ್ದು ನೀರು ಸಂಗ್ರಹ ಗರಿಷ್ಠ ಮಟ್ಟ ತಲುಪಿದೆ, ನೆನ್ನೆ (ಜುಲೈ 26) 400 ಕ್ಯೂಸೆಕ್ ನೀರನ್ನು ಕಾವೇರಿ ಉಪನದಿ ಹಾರಂಗಿ ನದಿಗೆ ಬಿಡಲಾಗಿದೆ. ರಾಜ್ಯದ ಕರಾವಳಿ ಹಾಗೂ ಮಲೆನಾಡಿನಲ್ಲಿ ವಾಡಿಕೆಯಂತೆ ಅಲ್ಲದಿದ್ದರೂ ಸಾಮಾನ್ಯ ಮಳೆ ಆಗುತ್ತಿದೆ. ಇದರಿಂದ ಹಾರಂಗಿ, ಕೆಆರ್.ಎಸ್, ವಾಣಿವಿಲಾಸ ಸಾಗರ ಸೇರಿದಂತೆ ಇನ್ನಿತರ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಏರಿಕೆ ಕಾರಣವಾಗಿದೆ.
ರಾಜ್ಯದಲ್ಲಿ ಬರ ಭೀತಿ ಆವರಿಸಿದ್ದು, ಐಎಂಡಿ ಪ್ರಕಾರ ಮಳೆ ದುರ್ಬಲಗೊಳ್ಳಲಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿಗೆ, ಕೃಷಿಗೆ ನೀರಿನ ಹಾಹಾಕಾರ ಸೃಷ್ಟಿಯಾಗುವ ಸಾಧ್ಯತೆ ಇದೆ.
ಪ್ರಮುಖ ಜಲಾಶಯಗಳ ನೀರಿನ ಮಟ್ಟ
KRS ಅಣೆಕಟ್ಟಿನ ಅಪ್ಡೇಟ್ಸ್
ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 49 ಟಿಎಂಸಿ
ಇಂದಿನ ನೀರಿನ ಸಂಗ್ರಹ: 16 ಟಿಎಂಸಿ
ಇಂದಿನ ಒಳಹರಿವು: 678 ಕ್ಯೂಸೆಕ್
ಹೊರ ಹರಿವು: 1745 ಕ್ಯೂಸೆಕ್
ಆಲಮಟ್ಟಿ ಡ್ಯಾಂ ನೀರಿನ ಮಟ್ಟ
ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ:123 ಟಿಎಂಸಿ
ಇಂದಿನ ನೀರಿನ ಸಂಗ್ರಹ: 111 ಟಿಎಂಸಿ
ಇಂದಿನ ಒಳಹರಿವು: 83, 948 ಕ್ಯೂಸೆಕ್
ಹೊರ ಹರಿವು: 48,625 ಕ್ಯೂಸೆಕ್
ಲಿಂಗನಮಕ್ಕಿ ಅಣೆಕಟ್ಟು ವಿವರ
ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 151 ಟಿಎಂಸಿ
ಇಂದಿನ ನೀರಿನ ಸಂಗ್ರಹ: 40 ಟಿಎಂಸಿ
ಇಂದಿನ ಒಳಹರಿವು: 23,706 ಕ್ಯೂಸೆಕ್
ಹೊರ ಹರಿವು: 2244 ಕ್ಯೂಸೆಕ್
ಕಬಿನಿ ಅಣೆಕಟ್ಟಿನ ನೀರು ಸಂಗ್ರಹ
ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 19.52 ಟಿಎಂಸಿ
ಇಂದಿನ ನೀರಿನ ಸಂಗ್ರಹ: 13.89 ಟಿಎಂಸಿ
ಇಂದಿನ ಒಳಹರಿವು: 3768 ಕ್ಯೂಸೆಕ್
ಹೊರ ಹರಿವು: 500 ಕ್ಯೂಸೆಕ್
ಹಾರಂಗಿ ಜಲಾಶಯ
ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 8.50 ಟಿಎಂಸಿ
ಇಂದಿನ ನೀರಿನ ಸಂಗ್ರಹ: 7.95 ಟಿಎಂಸಿ
ಇಂದಿನ ಒಳಹರಿವು: 1871 ಕ್ಯೂಸೆಕ್
ಹೊರ ಹರಿವು: 2268 ಕ್ಯೂಸೆಕ್
ಹೇಮಾವತಿ ಜಲಾಶಯ
ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 37.10 ಟಿಎಂಸಿ
ಇಂದಿನ ನೀರಿನ ಸಂಗ್ರಹ: 23.14 ಟಿಎಂಸಿ
ಇಂದಿನ ಒಳಹರಿವು: 1608 ಕ್ಯೂಸೆಕ್
ಹೊರ ಹರಿವು: 500 ಕ್ಯೂಸೆಕ್
ವಾಣಿ ವಿಲಾಸ ಜಲಾಶಯ
ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 30.42 ಟಿಎಂಸಿ
ಇಂದಿನ ನೀರಿನ ಸಂಗ್ರಹ: 23.51 ಟಿಎಂಸಿ
ಇಂದಿನ ಒಳಹರಿವು: 00 ಕ್ಯೂಸೆಕ್
ಹೊರ ಹರಿವು: 00 ಕ್ಯೂಸೆಕ್
ತುಂಗಭದ್ರಾ ಜಲಾಶಯ
ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 105. 79 ಟಿಎಂಸಿ
ಇಂದಿನ ನೀರಿನ ಸಂಗ್ರಹ: 31.18 ಟಿಎಂಸಿ
ಇಂದಿನ ಒಳಹರಿವು: 12,869 ಕ್ಯೂಸೆಕ್
ಹೊರ ಹರಿವು: 3561 ಕ್ಯೂಸೆಕ್


Click it and Unblock the Notifications
