Karnataka Dams water Level: ಜುಲೈ 23ರಂದು ಕೆಆರ್‌ಎಸ್ ಸೇರಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?
Karnataka Dam water Level: ರಾಜ್ಯದ ಮಳೆರಾಯನ ಆರ್ಭಟ ಮುಂದುವರೆದಿದ್ದು, ನದಿ, ಕೆರೆ-ಕಟ್ಟೆಗಳು ಸೇರಿದಂತೆ ಅನೇಕ ಜಲಮೂಲಗಳು ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಬಹುತೇಕ ಜಿಲ್ಲೆಗಳಲ್ಲಿ ಪ್ರಮುಖ ಜಲಾಶಯಗಳು ಕೂಡ ಭರ್ತಿಯಾಗುವ ಹಂತವನ್ನು ತಲುಪಿವೆ.
ಹಾಗಾದರೆ ಇಂದು (ಜುಲೈ 23) ಕೆಆರ್‌ಎಸ್ (ಕೃಷ್ಣರಾಜ ಸಾಗರ, ಕಬಿನಿ, ತುಂಗಾಭದ್ರಾ ಸೇರಿದಂತೆ ಇನ್ನಿಳಿದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕಳೆದ ಬಾರಿ ಅಂದರೆ 2023ರಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜಲಾಶಯಗಳು ಬತ್ತಿಹೋಗುವ ಹಂತವನ್ನು ತಲುಪಿದ್ದವು. ಆದರೆ ಇದೀಗ 2024ರ ಜೂನ್ ಆರಂಭವಾಗುತ್ತಿದ್ದಂತೆ ಮುಂಗಾರು ಮಳೆ ಚುರುಕುಪಡೆದಿದ್ದು, ಇಲ್ಲಿಯವರೆಗೂ ಕೂಡ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಲೇ ಇದ್ದಾನೆ.
ಇದರಿಂದ ಜಲಮೂಲಗಳು ಈಗಾಗಲೇ ಬಹುತೇಕ ಭರ್ತಿಯಾಗಿವೆ. ಹಾಗಾದರೆ ಇಂದು ಕೆಆರ್‌ಎಸ್ (ಕೃಷ್ಣರಾಜ ಸಾಗರ), ಕಬಿನಿ, ಹಾರಂಗಿ, ಹೇಮಾವತಿ, ಭದ್ರಾ, ತುಂಗಭದ್ರಾ ಸೇರಿದಂತೆ ಇನ್ನುಳಿದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂದು ತಿಳಿಯಿರಿ.
1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 122.85 ಅಡಿ
* ಒಳಹರಿವು - 40,029 ಕ್ಯೂಸೆಕ್
* ಹೊರಹರಿವು - 45,327 ಕ್ಯೂಸೆಕ್
2. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಇಂದಿನ ನೀರಿನ ಮಟ್ಟ - 517.72 ಮೀಟರ್
* ಒಳಹರಿವು- 1,15,406 ಕ್ಯೂಸೆಕ್
* ಹೊರಹರಿವು - 1,44,295 ಕ್ಯೂಸೆಕ್
3. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಇಂದಿನ ನೀರಿನ ಮಟ್ಟ- 1,627.21 ಅಡಿ
* ಒಳಹರಿವು - 1,13,402 ಕ್ಯೂಸೆಕ್
* ಹೊರಹರಿವು - 4,798 ಕ್ಯೂಸೆಕ್
4. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,079.50 ಅಡಿ
* ಇಂದಿನ ನೀರಿನ ಮಟ್ಟ - 2,063.40 ಅಡಿ
* ಒಳಹರಿವು - 11,328 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
5. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಇಂದಿನ ನೀರಿನ ಮಟ್ಟ - 1797.06 ಅಡಿ
* ಒಳಹರಿವು - 44,387 ಕ್ಯೂಸೆಕ್
* ಹೊರಹರಿವು - 1,899 ಕ್ಯೂಸೆಕ್
6. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2283.30 ಅಡಿ
* ಒಳಹರಿವು - 20,386 ಕ್ಯೂಸೆಕ್
* ಹೊರಹರಿವು - 13,542 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಇಂದಿನ ನೀರಿನ ಮಟ್ಟ - 166.6 ಅಡಿ
* ಒಳಹರಿವು - 25,367 ಕ್ಯೂಸೆಕ್
* ಹೊರಹರಿವು - 293 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಇಂದಿನ ನೀರಿನ ಮಟ್ಟ - 2,158.55 ಅಡಿ
* ಒಳಹರಿವು - 31,201 ಕ್ಯೂಸೆಕ್
* ಹೊರಹರಿವು - 2,405 ಕ್ಯೂಸೆಕ್
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಇಂದಿನ ನೀರಿನ ಮಟ್ಟ - 2,920.10 ಅಡಿ
* ಒಳಹರಿವು - 23,769 ಕ್ಯೂಸೆಕ್
* ಹೊರಹರಿವು - 15,624 ಕ್ಯೂಸೆಕ್
10. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಇಂದಿನ ನೀರಿನ ಮಟ್ಟ - 2,855.30 ಅಡಿ
* ಒಳಹರಿವು - 4,940 ಕ್ಯೂಸೆಕ್
* ಹೊರಹರಿವು - 4,000 ಕ್ಯೂಸೆಕ್












Click it and Unblock the Notifications