Karnataka Dam Water level: ರಾಜ್ಯದ ಅಣೆಕಟ್ಟುಗಳ ಭರ್ತಿಗೆ ಕೆಲವೇ ಅಡಿಗಳು ಬಾಕಿ! ಇಂದು ಒಳ-ಹೊರ ಹರಿವು ಎಷ್ಟಿದೆ?
ಬೆಂಗಳೂರು, ಜೂನ್ 22: ಸಮುದ್ರ ಮಟ್ಟದಲ್ಲಿ ಹಾಗೂ ಹವಾಮಾನ ದಲ್ಲಿ ಉಂಟಾಗಿದ್ದ ವೈಪರೀತ್ಯ ದುರ್ಬಲಗೊಂಡ ಪರಿಣಾಮ ರಾಜ್ಯದಲ್ಲಿ ಮಳೆ ಅಬ್ಬರ ಇಳಿಕೆ ಆಗಿದೆ. ಕರಾವಳಿಗೆ ಮಾತ್ರವೇ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಕಳೆದ ಎರಡು ವಾರಗಳಿಂದ ನಿರಂತರವಾಗಿ ಸುರಿದ ಮುಂಗಾರು ಮಳೆಗೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದೆ. ಕೆಲವು ಜಲಾಶಯಗಳು ಮಳೆಗಾಲದ ಮೊದಲ ತಿಂಗಳಲ್ಲೇ ಬಹುತೇಕ ಭರ್ತಿಯಾಗಿವೆ.
ಹಾರಂಗಿ, ಹೇಮಾವತಿ, ಕಬಿನಿ ಹಾಗೂ ಕೃಷ್ಣ ರಾಜಸಾಗರ ಅಣೆಕಟ್ಟುಗಳು ಬಹುತೇಕ ಶೇಕಡಾ 90ರಷ್ಟು ಭರ್ತಿಯಾಗಿವೆ. ಒಟ್ಟು ಮುಂದಿನ ತಿಂಗಳಲ್ಲಿ ಹೆಚ್ಚಿನ ಮಳೆಯಾದರೆ ಉಕ್ಕಿ ಹರಿಯುವ ಮಟ್ಟಕ್ಕೆ ನೀರಿನ ಸಂಗ್ರಹವಾಗಿದೆ. ಇದಕ್ಕೆ ಮೇ ತಿಂಗಳಾಂತ್ಯದಿಂದ ಈವರೆಗೆ ಸುರಿದ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಕಾರಣ ಎನ್ನಲಾಗಿದೆ. ಕಾವೇರಿ ನದಿ ಉಗಮ ಸ್ಥಾನ ಕೊಡಗಿನ ತಲಕಾವೇರಿಯಲ್ಲಿ ನೆನ್ನೆ 29 ಮಿಲಿ ಮೀಟರ್ ಮಳೆ ಆಗಿದೆ. ವಾರ್ಷಿಕವಾಗಿ 3071 ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.

ರಾಜ್ಯದಲ್ಲಿ ಈವರೆಗಿನ ಮಳೆಯಿಂದಾಗಿ ಪ್ರಮುಖ ಡ್ಯಾಂಗಳ ಭರ್ತಿಗೆ ಕೆಲವೇ ಅಡಿಗಳಷ್ಟು ಮಾತ್ರವೇ ಬಾಕಿ ಇದೆ. ಮಳೆಗಾಲ ಇನ್ನೂ ಮೂರವರೆ ತಿಂಗಳು ಬಾಕಿ ಇದ್ದು, ನದಿಗಳು, ಕೆರೆಗಳು ಹರಿಯುತ್ತಿವೆ. ಜಲಾಶಯಗಳಿಂದ ನೀರು ಹೊರ ಹರಿವು ಸಹ ಹೆಚ್ಚಾಗಿದ್ದು, ಕೆಳ ಭಾಗದ ಗ್ರಾಮಸ್ಥರಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ.
ಕಾವೇರಿ ನೀರಾವರಿ ಇಲಾಖೆ "ಕಬಿನಿ ಡ್ಯಾಂ ಬಿರುಕು'' ಕುರಿತು ಸ್ಪಷ್ಟನೆ ನೀಡಿದೆ. ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಡ್ಯಾನಿಂದ ನೀರು ಚಿಮ್ಮುತ್ತಿಲ್ಲ. ಹನಿಹನಿಯಾಗಿ ತೊಟ್ಟಿಕ್ಕುತ್ತಿದೆ. ಬಿರುಕು ಇಲ್ಲ. ಜನರು, ರೈತರಿಗಾಗಲಿ ಯಾವುದೇ ಆತಂಕವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ಒಳ-ಹೊರ ಹರಿವಿನ ಮಟ್ಟ.
ಕೆಆರ್‌ಎಸ್ ಅಣೆಕಟ್ಟಿನ ವಿವರ
* ಕೆಆರ್‌ಎಸ್ ಒಟ್ಟು ನೀರಿನ ಸಾಮರ್ಥ್ಯ: 49.452 ಟಿಎಂಸಿ
* ಇಂದಿನ ನೀರಿನ ಸಂಗ್ರಹ ಮಟ್ಟ: 42.291 ಟಿಎಂಸಿ
* ಇಂದಿನ ಒಳಹರಿವು: 13,359 ಕ್ಯೂಸೆಕ್
* ಹೊರ ಹರಿವು ವಿವರ: 1664 ಕ್ಯೂಸೆಕ್
ಹಾರಂಗಿ ಡ್ಯಾಂ ನೀರು ಸಂಗ್ರಹ
* ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 8.5 ಟಿಎಂಸಿ
* ಇಂದಿನ ನೀರಿನ ಸಂಗ್ರಹ ಮಟ್ಟ: 6.09 ಟಿಎಂಸಿ
* ಇಂದಿನ ಒಳಹರಿವು: 2287 ಕ್ಯೂಸೆಕ್
* ಹೊರ ಹರಿವು ವಿವರ: 1000 ಕ್ಯೂಸೆಕ್
ಕಬಿನಿ ಜಲಾಶಯದ ನೀರು ಸಂಗ್ರಹ ವಿವರ
* ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 19.52 ಟಿಎಂಸಿ
* ಇಂದಿನ ನೀರಿನ ಸಂಗ್ರಹ ಮಟ್ಟ: 15.76 ಟಿಎಂಸಿ
* ಇಂದಿನ ಒಳಹರಿವು: 11,932 ಕ್ಯೂಸೆಕ್
* ಹೊರ ಹರಿವು ವಿವರ: 12,000 ಕ್ಯೂಸೆಕ್
ಹೇಮಾವತಿ ಡ್ಯಾಂ ಇಂದಿನ ಮಟ್ಟ
* ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 37.10 ಟಿಎಂಸಿ
* ಇಂದಿನ ನೀರಿನ ಸಂಗ್ರಹ ಮಟ್ಟ: 30.322 ಟಿಎಂಸಿ
* ಇಂದಿನ ಒಳಹರಿವು: 8079 ಕ್ಯೂಸೆಕ್
* ಹೊರ ಹರಿವು ವಿವರ: 2400 ಕ್ಯೂಸೆಕ್
ಮೆಟ್ಟೂರು ಡ್ಯಾಂ ವಿವರ
* ಡ್ಯಾಂ ಒಟ್ಟು ಎತ್ತರ: 114 ಅಡಿ
* ಇಂದಿನ ನೀರಿನ ಸಂಗ್ರಹ ಮಟ್ಟ: 84222 Mcft
* ಇಂದಿನ ಒಳಹರಿವು: 21628 ಕ್ಯೂಸೆಕ್
* ಹೊರ ಹರಿವು ವಿವರ: 18000 ಕ್ಯೂಸೆಕ್












Click it and Unblock the Notifications