ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ರಾಜೀನಾಮೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 08 : ಪ್ರತಿಪಕ್ಷಗಳು, ಹಲವಾರು ಸಂಘಟನೆಗಳ ಒತ್ತಾಯಕ್ಕೆ ಮಣಿದಿರುವ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರು ಲೋಕಾಯುಕ್ತರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಲೋಕಾಯುಕ್ತದಲ್ಲಿ ನಡೆದ ಹಗರಣ ಬೆಳಕಿಗೆ ಬಂದು, ಹಗರಣದ ತನಿಖೆಗೆ ಸರ್ಕಾರ ಎಸ್‌ಐಟಿ ರಚನೆ ಮಾಡಿದ ನಂತರ ಭಾಸ್ಕರರಾವ್ ಅವರು ಸುಮಾರು 135 ದಿನಗಳ ಸರಣಿ ರಜೆ ಪಡೆದಿದ್ದರು. ಲೋಕಾಯುಕ್ತರು ರಾಜೀನಾಮೆ ನೀಡಬೇಕು ಎಂದು ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದವು. [ಲೋಕಾಯುಕ್ತದಲ್ಲಿ ಏನಿದು ಹಗರಣ?]

y bhaskar rao

'ಸೋಮವಾರ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿರುವ ವೈ.ಭಾಸ್ಕರರಾವ್ ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. ಮಂಗಳವಾರ ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು ಹೇಳಿದ್ದಾರೆ. [ಸರಣಿ ರಜೆ ಪಡೆದ ಲೋಕಾಯುಕ್ತರು]

ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ಲೋಕಾಯುಕ್ತ ನ್ಯಾ.ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರನ್ನು ಜುಲೈ 27ರಂದು ಬಂಧಿಸಿತ್ತು. ಅಶ್ವಿನ್ ರಾವ್ ಬಂಧನದ ಬಳಿಕ ಲೋಕಾಯುಕ್ತರು ಕಚೇರಿಗೆ ಹಾಜರಾಗಿರಲಿಲ್ಲ. [ಲೋಕಾಯುಕ್ತ ಪದಚ್ಯುತಿ ಹೇಗೆ ನಡೆಯುತ್ತದೆ?]

4ನೇ ಬಾರಿ ರಜೆ ವಿಸ್ತರಣೆ : ವೈ.ಭಾಸ್ಕರರಾವ್ ಅವರು ಮೊದಲು ಜುಲೈ 17ರಿಂದ ಆಗಸ್ಟ್ 17ರ ತನಕ ರಜೆ ಹಾಕಿದ್ದರು. ನಂತರ ಅದನ್ನು ಸೆಪ್ಟೆಂಬರ್ 30ರ ತನಕ ವಿಸ್ತರಣೆ ಮಾಡಿದ್ದರು. ಪುನಃ ಅದನ್ನು ಅಕ್ಟೋಬರ್ 21ರ ತನಕ ವಿಸ್ತರಿಸಿದರು. ಅಕ್ಟೋಬರ್ 22ರಿಂದ ಪುನಃ 45 ದಿನಗಳ ಕಾಲ ರಜೆ ಪಡೆದಿದ್ದರು.

ಪತ್ರಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಲೋಕಾಯುಕ್ತರ ರಾಜೀನಾಮೆಗೆ ಪಟ್ಟು ಹಿಡಿದಿದ್ದವು. ಲೋಕಾಯುಕ್ತರನ್ನು ಪದಚ್ಯುತಿಗೊಳಿಸಲು ಶಾಸಕರು ಸಹಿ ಹಾಕಿದ ಮನವಿ ಪತ್ರವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಮತ್ತು ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಸಲ್ಲಿಸಿದ್ದವು. ಲೋಕಾಯುಕ್ತ ಪದಚ್ಯುತಿ ನಿರ್ಣಯವನ್ನು ಸದನದಲ್ಲಿ ಮಂಡನೆ ಮಾಡಲಾಗಿತ್ತು. ಉಭಯ ಸದನಗಳಲ್ಲೂ ಈ ನಿರ್ಣಯ ಅಂಗೀಕಾರಗೊಂಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Lokayukta justice Y.Bhaskar Rao resigned. Governor Vajubhai Rudabhai Vala has accepted the resignation. Y.Bhaskar Rao has taken more than 100 days leave after corruption in Lokayukta comes to light. SIT arrested Y.Bhaskar Rao son Ashwin Rao in connection with the alleged corruption case in Lokayukta.
Please Wait while comments are loading...