ವಿಧಾನಪರಿಷತ್ತಿನ 11 ಸ್ಥಾನಗಳ ಚುನಾವಣೆ ದಿನಾಂಕ ಘೋಷಣೆ
ಬೆಂಗಳೂರು, ಮೇ 22 : ಚುನಾವಣಾ ಆಯೋಗ ವಿಧಾನಪರಿಷತ್ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದೆ. ಜೂನ್ 11ರಂದು ವಿಧಾನಸಭೆಯಿಂದ 11 ಸದಸ್ಯರನ್ನು ಪರಿಷತ್ತಿಗೆ ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ.
ಚುನಾವಣಾ ಆಯೋಗ ಮೇ 22ರಂದು ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ಜೂನ್ 11ರಂದು ಚುನಾವಣೆ ನಡೆಯಲಿದ್ದು, ಅಂದೇ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.

ಚುನಾವಣಾ ವೇಳಾಪಟ್ಟಿ
* ಮೇ 24ರಂದು ಅಧಿಸೂಚನೆ ಪ್ರಕಟ
* ಮೇ 31ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನ
* ಜೂನ್ 4 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ
* ಜೂನ್ 11ರಂದು ಚುನಾವಣೆ ನಡೆಯಲಿದ್ದು, ಅಂದು ಫಲಿತಾಂಶ ಪ್ರಕಟ
11 ಸ್ಥಾನಗಳು ಖಾಲಿ : ಬಿಜೆಪಿಯ 5, ಕಾಂಗ್ರೆಸ್‌ನ 5, ಜೆಡಿಎಸ್‌ನ 1 ಸ್ಥಾನ ತೆರವಾಗಲಿದ್ದು, ತೆರವಾಗುವ ಸ್ಥಾನಕ್ಕೆ ಜೂನ್ 11ರಂದು ಚುನಾವಣೆ ನಡೆಯಲಿದೆ.
ನಿವೃತ್ತಿಯಾಗುವ ಸದಸ್ಯರು : ಜೂನ್ 17, 2018ರಂದು ಬಿಜೆಪಿಯ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಸೋಮಣ್ಣ ಬೇವಿನಮದರ್, ರಘುನಾಥ ರಾವ್ ಮಲ್ಕಾಪುರೆ, ಭಾನುಪ್ರಕಾಶ್ ನಿವೃತ್ತರಾಗಲಿದ್ದಾರೆ.
ಕಾಂಗ್ರೆಸ್‌ನ ಸಿ.ಎಂ.ಇಬ್ರಾಹಿಂ, ಎಂ.ಆರ್.ಸೀತಾರಾಂ, ಮೋಟಮ್ಮ, ಕೆ.ಗೋವಿಂದರಾಜು, ಭೈರತಿ ಸುರೇಶ್ ಅವರು ನಿವೃತ್ತರಾಗಲಿದ್ದಾರೆ. ಜೆಡಿಎಸ್‌ನಿಂದ ಸೈಯದ್ ಮುದೀರ್ ಆಗಾ ಅವರು ನಿವೃತ್ತಿಯಾಗಲಿದ್ದಾರೆ.
ವಿಧಾನಸಭೆಯ ಬಲಾಬಲ : 2018ರ ಚುನಾವಣೆ ಬಳಿಕ ವಿಧಾನಸಭೆಯ ಬಲಾಬಲ ಕಾಂಗ್ರೆಸ್ 78, ಜೆಡಿಎಸ್ 37, ಬಿಜೆಪಿ 104.












Click it and Unblock the Notifications