Land Guarantee: ಭೂ- ಗ್ಯಾರಂಟಿ ಯೋಜನೆ ಬಗ್ಗೆ ಸರ್ಕಾರದಿಂದ ಅಪ್ಡೇಟ್ಸ್: ಈ ಆಸ್ತಿದಾರಿಗೆ ಗುಡ್‌ನ್ಯೂಸ್
ಕರ್ನಾಟಕ ಸರ್ಕಾರವು ಭೂಗ್ಯಾರಂಟಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಈ ಮೂಲಕ ಕರ್ನಾಟಕದ ಆಸ್ತಿದಾರರಿಗೆ ಬಿಗ್ ಅಪ್ಡೇಟ್ಸ್ ನೀಡಲಾಗಿದೆ. ಇದರಿಂದ ಮುಖ್ಯವಾಗಿ ಯೋಧರು ಹಾಗೂ ಮಾಜಿ ಸೈನಿಕರಿಗೆ ನಿವೇಶನ ಹಂಚಿಕೆ ಸುಲಭವಾಗಲಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969 ರ ಅಡಿಯಲ್ಲಿ ಸೈನಿಕರು / ಮಾಜಿ ಸೈನಿಕರಿಗೆ ಕೃಷಿ ಜಮೀನು ಮಂಜೂರು ಮಾಡಲು ಅವಕಾಶವಿದ್ದರೂ, ಪ್ರಸ್ತುತ ದಿನಗಳಲ್ಲಿ ಕೃಷಿ ಯೋಗ್ಯ ಸರ್ಕಾರಿ ಜಮೀನಿನ ತೀವು ಕೊರತೆ ಇರುವುದರಿಂದ, ನಿಯಮ 8(8) ರಿಂದ 8(10) ರನ್ವಯ ಕೃಷಿ ಜಮೀನಿನ ಬದಲಾಗಿ ವಸತಿ ನಿವೇಶನಗಳನ್ನು (Sites in lieu of agricultural land) ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.

ಸೈನಿಕರಿಗೆ ನಿವೇಶನಗಳನ್ನು ನೀಡಲು ವಿಶೇಷ ಯೋಜನೆಯನ್ನು ಜಾರಿಗೊಳಿಸಲು ಸಹ ನಿಯಮ (8)(8) ರಲ್ಲಿ ಅವಕಾಶ ನೀಡಲಾಗಿದೆ. ಇದರಿಂದ ದೇಶದ ಗಡಿ ಕಾಯುವ ಯೋಧರು ಮತ್ತು ನಿವೃತ್ತ ಮಾಜಿ ಸೈನಿಕರಿಗೆ ನಿವೇಶನವನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು "ಸೈನಿಕ ಸಮ್ಮಾನ್ ಯೋಜನೆ" ಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಮುಂದುವರಿದು ಜಮೀನು ಲಭ್ಯತೆಯ ಸದ್ಬಳಕೆ ಹಾಗೂ ವ್ಯವಸ್ಥಿತ ಬಡಾವಣೆಗಳ ನಿರ್ಮಾಣಕ್ಕಾಗಿ ಭೂ ಗ್ಯಾರಂಟಿ ಅಡಿಯಲ್ಲಿ ಸಾರ್ವಜನಿಕರಿಗೆ ನೀಡಲಾಗುವ ನಿವೇಶನ ಯೋಜನೆ ಮತ್ತು ಸೈನಿಕರಿಗೆ ನೀಡಲಾಗುವ "ಸೈನಿಕ ಸಮ್ಮಾನ್ ಯೋಜನೆ" ಇವೆರಡನ್ನೂ ಒಟ್ಟಾಗಿಯೇ Hoe woodsah (Joint & Convergent Implementation) ಅಮಾನಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಆದರೆ, ವಿವಿಧ ವಿಲೇವಾರಿಯಾಗದೆ ಬಾಕಿ ಉಳಿದಿರುವುದು, ಆಫ್‌ಲೈನ್ ಅರ್ಜಿಗಳು ಪೋರ್ಟಲ್‌ಗೆ ದಾಖಲಾಗದಿರುವುದು ಮತ್ತು ಅರ್ಹತಾ ನಿಯಮಗಳನ್ನು ಮೀರಿ ಅನರ್ಹರಿಗೆ / ಕಮಿಷನ್ ಅಧಿಕಾರಿಗಳಿಗೆ ಮಂಜೂರಾತಿ ನೀಡಿರುವ ಕುರಿತು ಸುಪ್ರೀಂ ಕೋರ್ಟ್ ಹಾಗೂ ಮಾನ್ಯ ಲೋಕಾಯುಕ್ತದಲ್ಲಿ ಪ್ರಕರಣಗಳು ದಾಖಲಾಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿರುವುದಾಗಿ ಸರ್ಕಾರ ಹೇಳಿದೆ. ಕರ್ನಾಟಕದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಹತ್ವದ ನಿರ್ದೇಶನ ನೀಡಲಾಗಿದೆ.
"ನಿವೇಶನ ಯೋಜನ" ಜೊತೆಯಲ್ಲಿ ಜಂಟಿ ಅನುಷ್ಠಾನ (Joint Implementation): ಅರ್ಹ ಮಾಜಿ ಸೈನಿಕರು ಮತ್ತು ಯೋಧರಿಗೆ "ಸೈವಿಕ ಸಮ್ಮಾನ್ ಯೋಜನೆಯಡಿ ನಿವೇಶನ ನೀಡುವ ಪ್ರಕ್ರಿಯೆಯನ್ನು ಸಾಮಾನ್ಯ ಸಾರ್ವಜನಿಕ ಫಲಾನುಭವಿಗಳಿಗಾಗಿ ರೂಪಿಸಲಾಗಿರುವ "ನಿವೇಶನ ಯೋಜನೆಯೊಂದಿಗೆ ಸಂಯೋಜಿಸಿ ಜಂಟಿಯಾಗಿ ಕೈಗೊಳ್ಳಲು ಸೂಚಿಸಲಾಗಿದೆ. ಜಿಲ್ಲಾಡಳಿತವು ಗುರುತಿಸುವ ಸಮಗ್ರ ವಸತಿ ಬಡಾವಣೆಗಳಲ್ಲಿಯೇ ಸೈನಿಕ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೂ ನಿಗದಿತ ನಿವೇಶನಗಳನ್ನು ಕಾಯ್ದಿರಿಸಿ, ಇತರೆ ಸಾರ್ವಜನಿಕ ಫಲಾನುಭವಿಗಳೊಂದಿಗೆ ಏಕಕಾಲದಲ್ಲಿ ಹಂಚಿಕೆ ಮಾಡುವುದಕ್ಕೆ ತಿಳಿಸಳಾಗಿದೆ.
ಸೈನಿಕರ ಸಾಂದ್ರತೆ ಹೆಚ್ಚಿರುವ ಜಿಲ್ಲಾ ಕೇಂದ್ರ ಅಥವಾ ತಾಲ್ಲೂಕು ಕೇಂದ್ರಗಳಲ್ಲಿ ಅಗತ್ಯವಿದ್ದಲ್ಲಿ, ಜಿಲ್ಲಾಧಿಕಾರಿಗಳು ಇವರಿಗಾಗಿಯೇ ಪ್ರತ್ಯೇಕ ಸೈನಿಕ ಬಡಾವಣೆಗಳನ್ನು (Exclusive Layout5) ಸಹ ರಚಿಸಲು ತೀರ್ಮಾನಿಸಬಹುದು.
ಏಕೀಕೃತ ಫೋರ್ಟಲ್‌ನಲ್ಲಿ ಬಾಕಿ ಅರ್ಜಿಗಳ 100% ದಾಖಲಾತಿ (Portal Updation): ಭೂಮಿ ಉಸ್ತುವಾರಿ ಕೋಶದ (BMC) ದಿಂದ ಅಭಿವೃದ್ಧಿ ಪಡಿಸಲಾಗಿರುವ ತಂತ್ರಾಂಶದಲ್ಲಿ ಈಗಾಗಲೇ ದಾಖಲಿಸಿರುವ ಅರ್ಜಿಯ ಜೊತೆಗೆ, ಜಿಲ್ಲಾ, ತಾಲ್ಲೂಕು ಅಥವಾ ಜಿಲ್ಲಾ ಸೈಫಿಕ್ ಕಲ್ಯಾಣ ಮಂಡಳಿ ಕಚೇರಿಗಳಲ್ಲಿ ಸೈನಿಕರಿಂದ ಸ್ವೀಕರಿಸಲ್ಪಟ್ಟು ಇನ್ನೂ ತಂತ್ರಾಂಶಕ್ಕೆ ಸೇರ್ಪಡೆಯಾಗದ ಎಲ್ಲಾ ಹಳೆಯ ಆಫ್‌ಲೈನ್ ಅರ್ಜಿಗಳನ್ನು ಗುರುತಿಸಿ, ಯಾವುದೇ ಅರ್ಜಿ ಬಿಟ್ಟುಹೋಗದಂತ 100% ಫೋರ್ಟಲ್‌ನಲ್ಲಿ ದಾಖಲಿಸಬೇಕು.
ನಿವೇಶನಕ್ಕೆಂದು ಗುರುತಿಸಲಾದ ಜಮೀನುಗಳ ಲಭ್ಯತೆಯ ವಿವರಗಳನ್ನು ಪ್ರಕಟಿಸಿ, ಅರ್ಹ ಮಾಜಿ ಸೈನಿಕರು ಹಾಗೂ ಯೋಧರಿಂದ ಹೊಸ ಅರ್ಜಿಗಳನ್ನು ಆಹ್ವಾನಿಸಲು ಕಾಲಮಿತಿಯ ಅವಕಾಶ ನೀಡಬೇಕು.
ಕೃಷಿ ಜಮೀನಿನ ಬದಲಾಗಿ ನಿವೇಶನ ಪಡೆಯುವ ಲಿಖಿತ ಒಪ್ಪಿಗೆ/ಆಯ್ಕೆ (Option for Site): ನಿಯಮ 8(8)ರ ಅನ್ವಯ ಅವರ ಸ್ವಂತ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ 2400 ಚದರ ಅಡಿ ಆಳತೆಯ ನಿವೇಶನವನ್ನು ಅಥವಾ ನಗರ ಪ್ರದೇಶದಲ್ಲಿ 1200 ಚದರ ಅಡಿ ಆಳತೆಯ ನಿವೇಶನವನ್ನು ಉಚಿತವಾಗಿ ಹಂಚಿಕೆ ಮಾಡಲಾಗುವುದು.
ಮುಂದುವರಿದು ಈ ಸಂದರ್ಭದಲ್ಲಿ ಅವರ ಸ್ವಂತ ತಾಲ್ಲೂಕಿನಲ್ಲಿ ಲಭ್ಯವಿಲ್ಲದಿದ್ದರೆ, ಸಂಬಂಧಪಟ್ಟ ಜಿಲ್ಲೆಯ ಯಾವುದೇ ಇತರ ತಾಲ್ಲೂಕಿನಲ್ಲಿ ಕರ್ನಾಟಕ ಸರ್ಕಾರದ ಅಸ್ತಿತ್ವದಲ್ಲಿರುವ ಯಾವುದೇ ವಸತಿ ಯೋಜನೆಯಡಿ ಅಥವಾ ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ರೂಪಿಸಬಹುದಾದ ವಿಶೇಷ ಯೋಜನೆಯಡಿ ಉಚಿತವಾಗಿ ಹಂಚಿಕೆ ಮಾಡಲಾಗುವುದು.
ಆದಾಗ್ಯೂ, ಒಂದು ವೇಳೆ ಸ್ವಂತ ತಾಲ್ಲೂಕು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬಂದರೆ ಅಂತಹ ಪ್ರದೇಶಗಳಲ್ಲಿ ಈ ರೀತಿಯ ಯಾವುದೇ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದಿಲ್ಲ ಮತ್ತು ಮೇಲಿನ ಷರತ್ತಿನ ಪ್ರಕಾರ 1200 ಚದರ ಅಡಿ ಅಥವಾ 2400 ಚದರ ಅಡಿಯ ನಿವೇಶನವನ್ನು ನೆರೆಯ ಜಿಲ್ಲೆಗಳ ನೆರೆಯ ಜಿಲ್ಲೆಗಳ ಯಾವುದೇ ಯಾವುದೇ ತಾಲೂಕಿನಲ್ಲಿ ಹಂಚಿಕ ಮಾಡಲಾಗುವುದು ಎಂದು ಹೇಳಲಾಗಿದೆ. ಕೃಷಿ ಭೂಮಿ ಲಭ್ಯವಿಲ್ಲದ ಪ್ರಕರಣದಲ್ಲಿ ನಿಯಮಾನುಸಾರ ನಿವೇಶನ ನೀಡಲು ಕ್ರಮವಹಿಸುವುದು. ಈ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.
ಸರ್ಕಾರಿ ಜಮೀನು ಶೋಧನೆ, ಲ್ಯಾಂಡ್ ಪೂಲಿಂಗ್ ಮತ್ತು ಪಂಚಾಯತಿ ಆಯ್ಕೆ ಸಂಗ್ರಹಣೆ: ಸರ್ಕಾರಿ ಜಮೀನು ಶೋಧನೆ ಮತ್ತು ಲ್ಯಾಂಡ್ ಪೂಲಿಂಗ್: ಜಿಲ್ಲೆಯ ಪ್ರತಿಯೊಂದು ತಾಲೂಕು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವೇಶನ ರಚನೆಗೆ ಯೋಗ್ಯವಿರುವ ಸರ್ಕಾರಿ ಜಮೀನುಗಳನ್ನು ತಕ್ಷಣವೇ ಶೋಧಿಸಿ ಲ್ಯಾಂಡ್ ಬ್ಯಾಂಕ್ ಸಿದ್ಧಪಡಿಸಬೇಕು. ಜಮೀನಿನ ಲಭ್ಯತೆಗೆ ಅನುಗುಣವಾಗಿ ಜಿಲ್ಲಾ ಮಟ್ಟದಲ್ಲಿ ಅಥವಾ ತಾಲೂಕು ಮಟ್ಟದಲ್ಲಿ ಪ್ರತ್ಯೇಕ ಸೈವಿಕ ಬಡಾವಣೆಗಳನ್ನು (Exclusive Layouts) ಸಹ ನಿರ್ಮಿಸಬೇಕು.
ಪಂಚಾಯತಿ ಆಯ್ಕೆ (Panchayat Choice): ಸೈನಿಕರು ತಾವು ಬಯಸುವ ಗ್ರಾಮ ವಂಚಾಯತಿಯಲ್ಲಿಯೇ ಜಮೀನು ಲಭ್ಯವಿದ್ದಲ್ಲಿ, ಅದೇ ಪಂಚಾಯತಿ ವ್ಯಾಪ್ತಿಯಲ್ಲಿ ನಿವೇಶನ ನೀಡಲು ಜಿಲ್ಲಾಧಿಕಾರಿಗಳು ತೀರ್ಮಾನಿಸಬಹುದು. ಇದಕ್ಕಾಗಿ ಅರ್ಜಿದಾರರಿಂದ ಅವರು ನಿವೇಶನ ಬಯಸುವ ಗ್ರಾಮ ಪಂಚಾಯತಿಗಳ ಆದ್ಯತಾ Grada (Preference / Choice of Gram Panchayat) ಕಡ್ಡಾಯವಾಗಿ ಸಂಗ್ರಹಿಸಬೇಕು. ಬೆಂಗಳೂರು ನಗರ ಜಿಲ್ಲೆಯ ಅರ್ಹ ಅರ್ಜಿಗಳನ್ನು ಅರ್ಹತೆಯನ್ನು ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿಗಳು ಅರ್ಜಿದಾರರ ಆಯ್ಕೆಯ ಜಿಲ್ಲೆಗೆ ವರ್ಗಾಯಿಸಬೇಕು.
ಜಿಲ್ಲಾ ಸೈನಿಕ ಕಲ್ಯಾಣ ಮಂಡಳಿಯು ನೋಡಲ್ ಸಂಸ್ಥೆ (Nodal Agency): "ಸೈನಿಕ ಸಮ್ಮಾನ್ ಯೋಜನೆ'ಯ ಅನುಷ್ಠಾನ, ಆರ್ಜಿದಾರರ ಸೈನಿಕ ಸೇವಾ ದಾಖಲೆಗಳು, ಡಿಸ್ಯಾರ್ಜ್ ಸರ್ಟಿಫಿಕೇಟ್ ಹಾಗೂ ಹುದ್ದೆಯ ಶ್ರೇಣಿಯನ್ನು ದೃಢೀಕರಿಸಲು ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969 ರ ಅಡಿಯಲ್ಲಿ ವಿಶೇಷವಾಗಿ ಈ ಕೆಳಗಿನ ಮಾನದಂಡಗಳನ್ನು ಪರಿಶೀಲಿಸಿ ಅರ್ಹ ಸೈನಿಕರ ಹೆಸರನ್ನು ಜಿಲ್ಲಾಧಿಕಾರಿಗಳಿಗೆ ಶಿಪಾರಸ್ಸು ಮಾಡುವುದು ನೋಡಲ್ ಸಂಖ್ಯೆಯ ಕರ್ತವ್ಯವಾಗಿದೆ.
ಅಲ್ಲದೆ ಸೈನಿಕರಿಗಾಗಿ ಪ್ರತ್ಯೇಕ ಬಡಾವಣೆಗೆ ಭೂಮಿಯನ್ನು ಗುರುತಿಸಿರುವ ಪ್ರಕರಣದಲ್ಲಿ, ಬಡಾವಣೆ ಅಭಿವೃದ್ಧಿಗೆ ಅನುದಾನದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬಹುದು. ಮಾಜಿ ಸೈನಿಕರಿಗೆ ಭೂ ಮಂಜೂರಾತಿ ನೀಡುವ ವಿಷಯದಲ್ಲಿ ಉಂಟಾಗಿರುವ ವಿಳಂಬದ ಬಗ್ಗೆ ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ತೀವು ಅಸಮಾಧಾನ ವ್ಯಕ್ತವಡಿಸಿದ್ದು, ಅರ್ಹರಿಗೆ ಸಕಾಲದಲ್ಲಿ ಸೌಲಭ್ಯ ಕಲ್ಪಿಸಲು ನಿರ್ದೇಶಿ ಅದೇ ರೀತಿ ಲೋಕಾಯುಕ್ತರು ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿ ಈ ಬಗ್ಗೆ ಸೂಚನೆಯನ್ನು ನೀಡಿರುತ್ತಾರೆ. ಆದುದರಿಂದ ಎಲ್ಲ ಜಿಲ್ಲಾಧಿಕಾರಿಗಳು ಸೈನಿಕರ ಸ್ವಂತ ಜಿಲ್ಲೆಯಲ್ಲಿಯೇ ಯಾವುದೇ ಅರ್ಹ ಸೈನಿಕ/ಮಾಜಿ ಸೈನಿಕರು ಬಾಕಿ ಇರದಂತೆ ಯುದ್ಯೋಪಾದಿಯಲ್ಲಿ ಕ್ರಮ ಕೈಗೊಂಡು, ನಿವೇಶನ ಹಂಚಿಕೆ ಮಾಡುವಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.


Click it and Unblock the Notifications
