ಬೀಡಿ, ಸಿಗರೇಟು, ಹೆಂಡಕ್ಕೆ ತೆರಿಗೆ ಕಟ್ಟಿಕಟ್ಟಿ ಸುಸ್ತಾಯ್ತಾ?!

ಕರ್ನಾಟಕ, ಮಾ 14 : ಹಣಕಾಸು ಖಾತೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2015-16ರ ಸಾಲಿನ ರಾಜ್ಯ ಆಯವ್ಯಯ ಪತ್ರವನ್ನು ಶುಕ್ರವಾರ (ಮಾ 13) ಮಂಡಿಸಿದ್ದಾರೆ. ಸರಿ, ಎಂದಿನಂತೆ ಧೂಮಪಾನಿಗಳು ಮತ್ತು ಮದ್ಯಪ್ರಿಯರು ಬಜೆಟನ್ನು ವಿಷಾದದಿಂದಲೇ ಸ್ವೀಕರಿಸುವಂತೆ/ಪ್ರತಿಕ್ರಯಿಸುವಂತೆ ಮಾಡಿದ್ದಾರೆ! "ಎಲ್ಲಾ ಬಜೆಟ್ಟುಗಳ ಹಣೇಬರಹ ಇದೇ ಆಗೋಯ್ತು" ಅಂತ ಅಲಂಕಾರ್ ಬಾರ್ ನಿಂದ ಹೊರಗೆಬರುತ್ತಿದ್ದ ಹರೀಶನ ಗೊಣಗಾಟ ನಮ್ಮ ಕಿವಿಗೆ ಬಿತ್ತು.

ನಿಮಗೆ ಗೊತ್ತಲ್ಲವಾ? ಹಿಂದೆ ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಸಿಗರೇಟು ಪ್ಯಾಕಿನ ಎಲ್ಲೋ ಒಂದು ಮೂಲೆಯಲ್ಲಿ ಶಾಸನ ವಿಧಿಸಿದ ಎಚ್ಚರಿಕೆ ಎಂದು ಅಚ್ಚಾಗುತ್ತಿತ್ತು. ಬದಲಾದ ಸುಪ್ರೀಂಕೋರ್ಟ್ ಆದೇಶದ ನಂತರ ಹೃದಯದ ಚಿಹ್ನೆಯೊಂದಿಗೆ 'ವಾರ್ನಿಂಗ್ ಸ್ಮೋಕಿಂಗ್ ಕಿಲ್ಸ್' ಎಂದು ಅಚ್ಚಾಗುತ್ತಿದೆ. ಎಷ್ಟೇ ಎಚ್ಚರಿಕೆ ಸಂದೇಶ ಕೊಟ್ರೂ ನಮ್ಮ ಸಮಾಜದಲ್ಲಿ ತಂಬಾಕು ಉತ್ಪನ್ನಗಳ ಅಥವಾ ಮದ್ಯದ ಬೇಡಿಕೆ ಕಮ್ಮಿಯಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. [ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]

Karnataka hikes tax on liquor tobacco products in Budget 2015

ಹಾಗಾಗಿ ವ್ಯಸನಿಗಳ ಪಲ್ಸ್ ಅರಿತಿರುವ ಎಲ್ಲಾ ಸರಕಾರಗಳು, ವರ್ಷ ವರ್ಷ ಈ ವ್ಯಸನಿಗಳ ವ್ಯಸನವನ್ನು ಹೆಚ್ಚಿಸುತ್ತಲೇ ಬಂದಿವೆ. ಸರಕಾರದ ಈ ಕ್ರಮಕ್ಕೆ ವ್ಯಸನಿಗಳ ಹೊರತಾಗಿ ಯಾರೂ ತಕರಾರು ಎತ್ತುವವರೂ ಇಲ್ಲ ಬಿಡಿ, ಎಲ್ಲರೂ ಸಮರ್ಥಿಸಿಕೊಳ್ಳುವವರೇ. ಸತೀಶ್ ಜಾರಕಿಹೊಳೆ ಎಣ್ಣೆಖಾತೆಯ ಸಚಿವರಾಗಿದ್ದಾಗ ಮದ್ಯ ಪದಾರ್ಥಗಳ ಬೆಲೆ ಕಮ್ಮಿಯಾಗುತ್ತದೆ ಎನ್ನುವ ಗಾಳಿಮಾತು ಹಬ್ಬಿತ್ತು, ಮುಖ್ಯಮಂತ್ರಿಗಳ ಜೊತೆ ಮಾತುಕತೆಯೂ ನಡೆದಿತ್ತಂತೆ. [ಕರ್ನಾಟಕ ಬಜೆಟ್ 2015-16 ಮುಖ್ಯಾಂಶಗಳು]

ಇದೇನಪ್ಪಾ ಪ್ರಪಂಚದ ಇನ್ನೊಂದು ಅದ್ಭುತ ಎಂದು ಮೂಗಿನ ಮೇಲೆ ಬೆರಳು ಇಟ್ಟುಕೊಂಡು, ಜನ ಬಾರ್ ಕೌಂಟರ್ ನಲ್ಲಿ ಕ್ಯಾಷಿಯರ್ ತಲೆತಿಂದಿದ್ದೇ ತಿಂದಿದ್ದು. ಈಗ ಕಮ್ಮಿಯಾಗುವುದು ಹಾಗಿರಲಿ, ಇನ್ನೆಷ್ಟು ಬೆಲೆ ಜಾಸ್ತಿಯಾಗುತ್ತೋ ಅಂತ ಜೇಬು ಕೆರೆದುಕೊಳ್ಳುತ್ತಿದ್ದಾನೆ ಹರೀಶ! ಅಬಕಾರಿ ಇಲಾಖೆಯ ಸಂಪನ್ಮೂಲವನ್ನು ಮತ್ತಷ್ಟು ಕ್ರೋಢೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ತಂಬಾಕು ಉತ್ಪನ್ನಗಳ ಮೇಲಿನ ಮೌಲ್ಯಾವರ್ಧಿತ ತೆರಿಗೆ (VAT) ಜಾಸ್ತಿ ಆಗ್ತಿದೆ. [ಬೆಂಗಳೂರಿನ ಧೂಮಪಾನಿಗಳೆ ನಿಮಗಿದು ನೆನಪಿರಲಿ]

ಬೀಡಿ, ಗುಟ್ಕಾ, ಸಿಗರೇಟಿನ ಮೇಲಿದ್ದ ವ್ಯಾಟ್ ಶುಲ್ಕವನ್ನು ಶೇ. 17 ರಿಂದ ಶೇ.20ಕ್ಕೆ ಹೆಚ್ಚಿಸಲಾಗಿದೆ, ಸರ್. ಇದರಿಂದ ವಿವಿಧ ತಂಬಾಕು ಉತ್ಪನ್ನಗಳ ಬೆಲೆ ಪ್ಯಾಕ್ / ಪ್ಯಾಕೇಟಿನ ಮೇಲೆ ಹೆಚ್ಚುಕಮ್ಮಿ ಮೂರರಿಂದ ಹತ್ತು ರೂಪಾಯಿವರೆಗೆ ಹೆಚ್ಚಾಗುತ್ತಂತೆ. ಆಗ್ಲಿಬಿಡಿ, ಕೆಟ್ಟ ಚಟಕ್ಕೆ ಬಿದ್ದವರು ಅನುಭವಿಸುತ್ತಾರೆ. ಅದಕ್ಕೆ ನಾವ್ಯಾಕೆ ತಲೆಕೆಡಿಸ್ಕೋಬೇಕೂ! ಏನೇ ಆಗ್ಲಿ, ಮದ್ಯದ ಪರಿಷ್ಕೃತ ದರಗಳನ್ನು ಕಂಡು ವ್ಯಸನಿಗಳು ಇನ್ನಷ್ಟು ಟೈಟ್ ಆಗುವುದಂತೂ ಖರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+