ನಾಲ್ಕನೇ ಕೇಸ್‌ನಲ್ಲೂ ಪ್ರಜ್ವಲ್‌ ರೇವಣ್ಣಗೆ ಜಾಮೀನು ಸಿಕ್ತಾ?

ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಜ್ವಲ್‌ ಸಲ್ಲಿಸಿದ್ದ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ಮತ್ತೆ ವಜಾಗೊಂಡಿದ್ದು, ಒಟ್ಟಾರೆ ನಾಲ್ಕು ಪ್ರತ್ಯೇಕ ಅರ್ಜಿ ವಿಚಾರಣೆಯಲ್ಲೂ ಜಾಮೀನಿಗೆ ಹಿನ್ನಡೆಯಾಗಿದೆ. ಈ ಹಿಂದೆ ಮೂರು ಕೇಸ್‌ಗಳಲ್ಲಿ ಜಾಮೀನು ಅರ್ಜಿ ವಜಾ ಆಗಿತ್ತು.

ನಾಲ್ಕನೇ ಕೇಸ್‌ನಲ್ಲಿ ವಿಚಾರಣೆ ಪೂರ್ಣಗೊಂಡು ಆದೇಶ ಬರುವುದು ಬಾಕಿಯಿತ್ತು. ಇದೀಗ ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್‌ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾ ಮಾಡಿದೆ. ಹಲವು ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳು ಪ್ರಜ್ವಲ್‌ ವಿರುದ್ಧ ದಾಖಲಾಗಿತ್ತು.

Karnataka High Court Dismisses Former MP Prajwal Revanna s Bail Application

ಈ ಪ್ರಕರಣಗಳ ತನಿಖೆ ನಡೆಸಿದ್ದ ಎಸ್‌ಐಟಿ ಕಳೆದ ಆಗಸ್ಟ್​ನಲ್ಲಿ 2,144 ಪುಟಗಳ ಚಾರ್ಜ್​​​ಶೀಟ್​ ಸಲ್ಲಿಕೆ ಮಾಡಿತ್ತು. ಇದರ ನಡುವೆ ಪ್ರಜ್ವಲ್ ರೇವಣ್ಣ ಕೂಡ ಜಾಮೀನು ಪಡೆಯಲು ನಾನಾ ಕಸರತ್ತು ನಡೆಸಿದ್ದರು. ಮೂರು ಪ್ರಕರಣಗಳ ವಿಚಾರಣೆ ನಡೆಸಿದ್ದ ಕೋರ್ಟ್‌ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಮತ್ತೊಂದು ಅರ್ಜಿಯನ್ನು ಸಹ ಇದೀಗ ವಜಾ ಮಾಡಿ ಆದೇಶಿಸಿದೆ. ಇದರಿಂದ ಪ್ರಜ್ವಲ್‌ ಕಂಡಿದ್ದ ಜಾಮೀನು ಕನಸು ಭಗ್ನವಾಗಿದೆ.

ಇನ್ನು ಇತ್ತೀಚೆಗೆ ಸುಪ್ರೀಂಕೋರ್ಟ್​ನಲ್ಲೂ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ ಆಗಿತ್ತು. ಕರ್ನಾಟಕ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ, ಪ್ರಜ್ವಲ್ ಪರ ವಕೀಲರು ಸುಪ್ರೀಂಕೋರ್ಟ್​ ಮೆಟ್ಟಿಲೇರಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಜ್ವಲ್‌ಗೆ ಜಾಮೀನು ನೀಡುವಂತೆ ವಾದ ಮಂಡಿಸಿದ್ದರು. ಆದ್ರೆ, ಆರೋಪಿ ಪ್ರಭಾವಿ ವ್ಯಕ್ತಿ ಎಂದು ಪರಿಗಣಿಸಿ ಸುಪ್ರೀಂಕೋರ್ಟ್‌ ಕೂಡ ಜಾಮೀನು ನಿರಾಕರಿಸಿತ್ತು. ಸದ್ಯ ಪ್ರಜ್ವಲ್‌ಗೆ ಜೈಲುವಾಸ ಮುಂದುವರಿದಿದೆ.

ಇದೀಗ ಜಿಲ್ಲಾ ಪಂಚಾಯಿತಿ ಸದಸ್ಯೆ ಮೇಲಿನ ಅತ್ಯಾಚಾರ ಕೇಸ್‌ನಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಇನ್ನು ಈ ಅತ್ಯಾಚಾರ ಕೇಸ್‌ನಲ್ಲಿ ಆರೋಪಿ ಪ್ರಜ್ವಲ್‌ ಅವರನ್ನು ಬಂಧಿಸದೆ, ಎಸ್‌ಐಟಿ ಚಾರ್ಜ್‌ಶೀಟ್‌ ಸಲ್ಲಿಸಿತ್ತು.

Karnataka High Court Dismisses Former MP Prajwal Revanna s Bail Application

ತನಿಖಾಧಿಕಾರಿಗಳು ಬರೋಬ್ಬರಿ ಸಾವಿರಾರು ಪುಟಗಳ ಚಾರ್ಜ್​ಶೀಟ್​ ಸಲ್ಲಿಸಿದ್ದು, ಇದರಲ್ಲಿ 113 ಸಾಕ್ಷಿಗಳು ಒಳಗೊಂಡಿವೆ ಎನ್ನಲಾಗಿದೆ. ಇದರಲ್ಲಿ ಪ್ರಜ್ವಲ್ ರೇವಣ್ಣ ಮಹಿಳೆಯರಿಗೆ ಯಾವ ಲೈಂಗಿಕ ಕಿರುಕುಳ ನೀಡಿದ್ದರು? ಅವರ ಕ್ರೌರ್ಯ ಯಾವ ರೀತಿ ಇತ್ತು? ಎಂಬುದೆಲ್ಲ ಉಲ್ಲೇಖವಾಗಿದೆ.

ಪ್ರಜ್ವಲ್‌ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎನ್ನಲಾದ ಸಂತ್ರಸ್ತೆಯರ ಸೀರೆಯಲ್ಲಿ ವೀರ್ಯ (sperm) ಮತ್ತು ಕೂದಲು ಪತ್ತೆಯಾಗಿದೆ ಎನ್ನಲಾಗಿದೆ. ಈ ಸೀರೆಯಲ್ಲಿ ಪತ್ತೆಯಾಗಿರುವ ವೀರ್ಯ ಯಾರದ್ದು? ಪ್ರಜ್ವಲ್‌ ಅತ್ಯಾಚಾರದ ವೇಳೆ ವೀರ್ಯ ಸಂತ್ರಸ್ತೆಯರ ಸೀರೆ ಮೇಲೆ ಬಿದ್ದಿತ್ತಾ? ಎನ್ನುವುದನ್ನು ದೃಢಪಡಿಸಿಕೊಳ್ಳಲು ಪ್ರಜ್ವಲ್ ರೇವಣ್ಣಗೆ ಡಿಎನ್​​ಎ ಪರೀಕ್ಷೆ ಕೂಡ ನಡೆಸಲಾಗಿತ್ತು.

ಈ ಸಂಬಂಧ ಪ್ರಜ್ವಲ್‌ ರೇವಣ್ಣ ಅವರ ವೀರ್ಯದ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ, ಡಿಎನ್‌ಎ ವರದಿಯಲ್ಲಿ ಸೀರೆಯಲ್ಲಿ ಪತ್ತೆಯಾದದ್ದು ಪ್ರಜ್ವಲ್‌ ಅವರ ವೀರ್ಯ ಎಂದು ಹೋಲಿಕೆಯಾಗಿ, ಈ ಕೇಸ್‌ ಮತ್ತೊಂದು ತಿರುವು ಪಡೆದುಕೊಂಡಿತ್ತು. ಅಲ್ಲದೆ, ಪ್ರಜ್ವಲ್‌ ರೇವಣ್ಣಗೆ ಸಂಕಷ್ಟ ಮತ್ತೊಮ್ಮೆ ಎದುರಾಗಿತ್ತು.

Karnataka High Court Dismisses Former MP Prajwal Revanna s Bail Application

ಪ್ರಜ್ವಲ್‌ ರೇವಣ್ಣ ಬನ್ನಿಕೋಡ ತೋಟದ ಮನೆಯಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ. ಮೊದಲಿಗೆ ಮಹಿಳೆಗೆ ನೀರು ತರುವಂತೆ ಸೂಚಿಸಿದ ಪ್ರಜ್ವಲ್‌, ಕೊಠಡಿಗೆ ಬಂದ ಕೂಡಲೇ ಬಾಗಿಲು ಹಾಕಿದ್ದರು. ನಂತರ ಮಹಿಳೆ ಎಷ್ಟು ಕೇಳಿಕೊಂಡರೂ ಬಾಗಿಲು ತೆಗೆಯದೆ ಕೊನೆಗೆ ಬಲವಂತವಾಗಿ ಸೀರೆ ಎಳೆದು, ಒಳ ಉಡುಪುಗಳನ್ನು ಬಿಚ್ಚಿಸಿ, ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಬಳಿಕ ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಎಸ್‌ಐಟಿ ಅಧಿಕಾರಿಗಳು ಉಲ್ಲೇಖಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+