ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ: ಬೇಕಾ? ಬೇಡ್ವಾ?

ಬೆಂಗಳೂರು, ಜನವರಿ, 04: ಬೈಕ್ ನಲ್ಲಿ ಒಬ್ಬರೆ ಮನೆಗೆ ಹೋಗುತ್ತಾ ಇರುತ್ತಿರಿ. ನಿಮ್ಮ ಸ್ನೇಹಿತ ಎದುರಿಗೆ ಸಿಗುತ್ತಾನೆ. ಅವನನ್ನು ನಿಮ್ಮ ಮನೆಗೆ ಕರೆದುಕೊಂಡು ಹೊರಡುತ್ತೀರಿ. ಮಧ್ಯ ದಾರಿಯಲ್ಲಿ ಪೊಲೀಸರು ಅಡ್ಡಹಾಕಿ ಪ್ರಶ್ನೆ ಮಾಡಿದರೆ ದಂಡ ನೀಡಬೇಕಾಗುತ್ತದೆ. ಯಾಕಂದ್ರೆ ಇನ್ನು ಮುಂದೆ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ.

ಇನ್ನು ಮುಂದೆ ಬೈಕ್ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ. ಜನವರಿ ಅಂತ್ಯದೊಳಗೆ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ.[ಬೆಂಗಳೂರಲ್ಲಿ ಕಳುವಾದ ಸ್ಕೂಟಿಯ ಇಂಟರೆಸ್ಟಿಂಗ್ ಕತೆ!]

Karnataka: Helmets compulsory for pillion riders

ಈ ಕುರಿತು ಡಿ. 31ರಂದೇ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಈ ನಿಯಮ ರಾಜ್ಯದ ಎಲ್ಲ ಪಾಲಿಕೆಗಳ ವ್ಯಾಪ್ತಿಯಲ್ಲಿ ಅನ್ವಯವಾಗಲಿದೆ. ಹಿಂಬದಿ ಸವಾರರು ಹೆಲ್ಮೆಟ್‌ ಧರಿಸದಿರುವುದು ಕಂಡುಬಂದರೆ 100 ರು. ದಂಡ ವಿಧಿಸಲಾಗುತ್ತದೆ.

ಅಂಗಡಿ ಮಾಲೀಕರು ಸಾಕಷ್ಟು ಹೆಲ್ಮೆಟ್ ದಾಸ್ತಾನು ಮಾಡಬೇಕು, ಖರೀದಿಸಲು ಸಾರ್ವಜನಿಕರಿಗೆ ತುಸು ಕಾಲ ಬೇಕು. ಹೀಗಾಗಿ ಜನವರಿ 12-13 ರಿಂದ ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.[ಯಮ, ಗಣಪ ಇಹಲೋಕಕ್ಕಿಳಿದಿದ್ದಾರೆ ಹುಷಾರ್!]

ಸಾರಿಗೆ ಇಲಾಖೆ ನಿಯಮಾವಳಿಗೆ ಸರ್ಕಾರದ ಅಧಿಕೃತ ಮುದ್ರೆ ಸಿಕ್ಕರೆ ಯೋಜನೆ ಕಾನೂನು ಬದ್ಧವಾಗಿ ಜಾರಿಗೆ ಬರಲಿದೆ. ಹಿಂದೆಯೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯದ ಬಗ್ಗೆ ಕೂಗು ಕೇಳಿ ಬಂದಿತ್ತು. ಪರ ವಿರೋಧದ ಚರ್ಚೆಗಳು ಆಗಿದ್ದವು. ಇದೀಗ ಹೆಲ್ಮೆಟ್ ಕಡ್ಡಾಯ ಚೆಂಡು ಮತ್ತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಅಂಗಣ ತಲುಪಿದ್ದು ಸರ್ಕಾರ ಯಾವ ತೀರ್ಮಾನ ಮಾಡುತ್ತದೆ ಎಂಬುದರ ಮೇಲೆ ಕುತೂಹಲ ನೆಟ್ಟಿದೆ.[ಬೈಕ್‌ ಸವಾರರ ತಲೆಗೆ 'ಹೆಲ್ಮೆಟ್‌' ಹಾಕಿದ ಸರ್ಕಾರ!]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+