ಕರ್ನಾಟಕದ 224 ಕ್ಷೇತ್ರಗಳಲ್ಲಿ 5.25 ಕೋಟಿ ಮತದಾರರು ಇದ್ದಾರೆ: KEC

ಬೆಂಗಳೂರು, ನವೆಂಬರ್ 09: ಕರ್ನಾಟಕ ರಾಜ್ಯ ಚುನಾವಣೆ ಆಯೋಗವು ಬುಧವಾರ ರಾಜ್ಯ 224 ಕ್ಷೇತ್ರ ವ್ಯಾಪ್ತಿಯ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, 5.25 ಕೋಟಿ ಮತದಾರರು ಕರ್ನಾಟಕದಲ್ಲಿದ್ದಾರೆ.

ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಚುನಾವಣೆಗೆ ಸಿದ್ಧತೆ ಎಂಬಂತೆ ಚುನಾವಣೆ ಆಯೋಗ ಕರಡು ಮತದಾರರ ಪಟ್ಟಿ ಪ್ರಕಟಿಸಿದೆ. ಅದರಲ್ಲಿ 2,64,60,225 ಕೋಟಿ ಪುರುಷ ಮತದಾರರು, 2.60,42,784 ಮಹಿಳಾ ಮತದಾರರು ಮತ್ತು 4,715 ಮಂದಿ ಇತರೆ ಮತದಾರರು ಸೇರಿ ರಾಜ್ಯದಲ್ಲಿ ಒಟ್ಟು 2022ರ ಪರಿಷ್ಕರಣೆಯಂತೆ ಒಟ್ಟು 5,25,07, 724 ಮತದಾರರು ಇದ್ದಾರೆ ಎಂದು ಆಯೋಗ ತಿಳಿಸಿದೆ.

ರಾಜ್ಯದ 224 ಮತ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಒಟ್ಟು ಮತದಾರರ ಸಂಖ್ಯೆಯಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತೀ ಹೆಚ್ಚು 6,41,466 ಮತದಾರರನ್ನು ಒಳಗೊಂಡಿದೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರ ಅತೀ ಕಡಿಮೆ 1,65,485 ಮತದಾರರು ಹೊಂದಿದೆ. ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳು ಇವೆ.

Karnataka has 5.25 crore voters in 224 constituencies says KEC

ಆಯೋಗದ ನಿರ್ದೇಶನಗಳಡಿ ವಿಶೇಷ ಪರಿಷ್ಕರಿಣೆಗೆ ಒಳಗೊಂಡ ಮತದಾರರ ಪಟ್ಟಿಯಲ್ಲಿ 11,13, 063, ಮತಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. 27,08, 947 ಮತದಾರರನ್ನು ಈ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್ ಮೀನಾ ತಿಳಿಸಿದ್ದಾರೆ.

ನಿಮ್ಮ ಹೆಸರುಗಳನ್ನು ಇಲ್ಲಿ ಪರಿಶೀಲಿಸಿ

ಮತದಾರರು ಚುನಾವಣೆ ಆಯೋಗವು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿನ ತಮ್ಮ ಹೆಸರುಗಳನ್ನು ವೆಬ್‌ಸೈಟ್ https://www.ceokarnataka.kar.nice.in/ ನಲ್ಲಿ ಅಥವಾ ನಿಮ್ಮ ಜಿಲ್ಲಾಧಿಕಾರಿಗಳು ಕಚೇರಿ, ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ, ವಿಧಾನಸಭೆ ವ್ಯಾಪ್ತಿಯ ಎಲ್ಲ ಮತಗಟ್ಟೆಗಳಲ್ಲಿ ಪರಿಶೀಲಿಸಿಕೊಳ್ಳುವಂತೆ ತಿಳಿಸಿದೆ. ಜೊತೆಗೆ ಆಕ್ಷೇಪಣೆಗೆ, ಹೊಸದಾಗಿ ಹೆಸರು ಸೇರ್ಪಡೆ, ಹೆಸರು ತೆಗೆಯಲು ಮತ್ತು ತಿದ್ದುಪಡಿಗೆ ದಿನ ನಿಗದಿಪಡಿಸಿದೆ.

ಸಾರ್ವಜನಿಕರು ಹಕ್ಕುಗಳು ಮತ್ತು ಆಕ್ಷೇಪಣೆಗಳಿದ್ದಲ್ಲಿ ಡಿಸೆಂಬರ್‌ 8ರೊಳಗೆ ಸಲ್ಲಿಸಬೇಕು. ಅವುಗಳನ್ನು ಆಯೋಗ ಡಿಸೆಂಬರ್ 26ರ ಒಳಗೆ ವಿಲೇವಾರಿ ಮಾಡಬೇಕು. ನಂತರ 2023ರ ಜನೇವರಿ 5ರಂದು ಮತದಾರರ ಅಂತಿಮ ಪಟ್ಟಿಯನ್ನು ಆಯೋಗ ಪ್ರಕಟಿಸಲಿದೆ.

Karnataka has 5.25 crore voters in 224 constituencies says KEC

ಮತದಾರರ ಪಟ್ಟಿಯಲ್ಲಿ ಹೆಸರು, ಭಾವಚಿತ್ರಗಳ ದೋಷವಿದ್ದರೆ ಅರ್ಜಿ ಸಲ್ಲಿಸಬೇಕು. ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ನಮೂನೆ 6, ಸಾಗರೋತ್ತರ ಭಾರತೀಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ನಮೂನೆ 6ಎ, ಹೆಸರು ತೆಗೆದುಹಾಕಲು ಇಲ್ಲವೇ ಹೆಸರಿನ ಸೇರ್ಪಡೆ ವಿರುದ್ಧ ಆಕ್ಷೇಪಣೆಗೆ ನಮೂನೆ 7, ವಿಧಾನಸಭಾ ಕ್ಷೇತ್ರದ ಹೊರಗೆ ಮತ್ತು ಒಳಗೆ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಬದಲಾವಣೆ, ಅಸ್ಪಷ್ಟ ಭಾವಚಿತ್ರ ಇದ್ದಲ್ಲಿ ಅದರ ಬದಲಾವಣೆಗೆ ಕೋರಿ ನಮೂನೆ 8ರ ಅರ್ಜಿಯನ್ನು ಸಲ್ಲಿಸಬೇಕು.

ಇಲ್ಲವೇ ಸಾರ್ವಜನಿರಕು ಸ್ವಯಂಪ್ರೇರಿತವಾಗಿ https://www.nvsp.in/ ಮತ್ತು ವೋಟರ್‌ ಹೆಲ್ಫ್ ಲೈನ್‌ ಮೊಬೈಲ್‌ ಅಪ್ಲಿಕೇಷನ್ ಮೂಲಕ ಈ ಮೇಲಿನ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಚುನಾವಣೆ ಆಯೋಗ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+