ಸಿದ್ದರಾಮಯ್ಯ ಸಂಚಾರಕ್ಕೆ ಪವನ್ ಹನ್ಸ್ ಹೆಲಿಕಾಪ್ಟರ್‌

ಬೆಂಗಳೂರು, ಜ.23 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನು ಮುಂದೆ ಓಡಾಟಕ್ಕೆ ಪವನ್ ಹನ್ಸ್ ಹೆಲಿಕಾಪ್ಟರ್‌ಅನ್ನು ಬಳಸಲಿದ್ದಾರೆ. ಪವನ್ ಹನ್ಸ್ ಕಂಪನಿ ತಿಂಗಳಲ್ಲಿ 24 ಗಂಟೆ ಕನಿಷ್ಠ ಸೇವೆ ಒದಗಿಸಲಿದ್ದು, 57 ಲಕ್ಷ ರೂ. ಬಾಡಿಗೆ ಪಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್‌ನಲ್ಲಿ ಜನವರಿ 12ರಂದು ಬೆಂಕಿ ಕಾಣಿಸಿಕೊಂಡಿತ್ತು. ಈ ಪ್ರಕರಣದ ನಂತರ ಸರ್ಕಾರ ಹಿಂದೆ ಬಳಸುತ್ತಿದ್ದ ಪ್ರಭಾತಂ ಏವಿಯೇಷನ್‍ನ ಕಂಪನಿ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಿದ್ದು, ಪವನ್ ಹನ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. [ಸಿಎಂ ಹೆಲಿಕಾಪ್ಟರ್ ನಲ್ಲಿ ಬೆಂಕಿ, ಕಂಪನಿ ಒಪ್ಪಂದ ರದ್ದು]

Pawan Hans

ಮುಖ್ಯಮಂತ್ರಿಗಳ ಓಡಾಟಕ್ಕೆ ಮಾತ್ರ ಮೀಸಲಾಗಿರುವಂತೆ ತಿಂಗಳ ಬಾಡಿಗೆ ಲೆಕ್ಕದಲ್ಲಿ ಪವನ್ ಹನ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಪವನ್ ಹನ್ಸ್ ಹೆಲಿಕಾಪ್ಟರ್ ಲಿಮಿಟೆಡ್ ಸಿಎಂ ಓಡಾಡಕ್ಕೆ ಹೆಲಿಕಾಪ್ಟರ್ ಒದಗಿಸಲಿದೆ. [ಹೆಲಿಕಾಪ್ಟರ್ ಅವಘಡದಿಂದ ಸಿದ್ದು ಪಾರಾದದ್ದು ಹೇಗೆ?]

57 ಲಕ್ಷ ಬಾಡಿಗೆ : ಪವನ್ ಹನ್ಸ್ ಕಂಪನಿ ತಿಂಗಳಲ್ಲಿ 24 ಗಂಟೆ ಕನಿಷ್ಠ ಸೇವೆ ಒದಗಿಸಲು 57 ಲಕ್ಷ ರೂ. ಬಾಡಿಗೆ ಪಡೆಯಲಿದೆ. 24 ಗಂಟೆಗಿಂತ ಹೆಚ್ಚಿನ ಅವಧಿ ಬಳಸಿದಲ್ಲಿ ಪ್ರತಿ ಗಂಟೆಗೆ 82,000 ಸಾವಿರ ರೂ. ಹೆಚ್ಚುವರಿ ಬಾಡಿಗೆ ನೀಡಬೇಕು.

13 ಕೋಟಿ ರೂ. ಖರ್ಚಾಗಿದೆ : ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಅಧಿಕಾರ ಸ್ವೀಕರಿಸಿದ ದಿನದಿಂದ 2014ರ ನ.31ರವರೆಗೆ ಹೆಲಿಕಾಪ್ಟರ್/ಏರ್‌ಕ್ರಾಫ್ಟ್ ಪ್ರಯಾಣಕ್ಕೆ 13.07 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂಬ ಮಾಹಿತಿಯನ್ನು ಟಿ.ನರಸಿಂಹಮೂರ್ತಿ ಎಂಬುವರು ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+