ಟ್ರಾಫಿಕ್ ದಂಡ ಇಳಿಕೆ ಅಧಿಕೃತ: ಯಾವ ಉಲ್ಲಂಘನೆಗೆ ಎಷ್ಟು ದಂಡ?

ಬೆಂಗಳೂರು, ಸೆಪ್ಟೆಂಬರ್ 21: ನೂತನ ಸಂಚಾರ ಕಾಯ್ದೆಯಡಿ ಜಾರಿಗೆ ತರಲಾಗಿದ್ದ ದುಬಾರಿ ದಂಡದ ಪ್ರಮಾಣವನ್ನು ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಡಿತಗೊಳಿಸಿದೆ. ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗುವ ದಂಡದ ಪ್ರಮಾಣವನ್ನು ಇಳಿಕೆ ಮಾಡುವುದಾಗಿ ಸರ್ಕಾರ ಹೇಳಿಕೆ ನೀಡಿದ್ದರೂ ಅಧಿಕೃತ ಆದೇಶ ಬಂದಿರಲಿಲ್ಲ.

ಶನಿವಾರ ಈ ಬಗ್ಗೆ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಅಧಿಕ ದಂಡ ಭಯಕ್ಕೆ ಒಳಗಾಗಿದ್ದ ವಾಹನ ಸವಾರರಿಗೆ ಕೊಂದ ನೆಮ್ಮದಿ ನೀಡಿದೆ.

ಹೆಲ್ಮೆಟ್ ಧರಿಸದೆ ಇದ್ದರೆ ವಿಧಿಸಲಾಗುತ್ತಿದ್ದ 1,000 ರೂ. ಇದ್ದ ದಂಡ ಮೊತ್ತವನ್ನು 500 ರೂ.ಗೆ ಇಳಿಸಲಾಗಿದೆ. ಪರವಾನಗಿ ರಹಿತ ವಾಹನ ಚಾಲನೆಗೆ ಇದ್ದ ದಂಡ ಪ್ರಮಾಣವನ್ನು 10,000 ದಿಂದ 5,000ಕ್ಕೆ ಇಳಿಸಲಾಗಿದೆ.

Karnataka Govt Reduces Traffic Rules Violation Fine Rate

ಸುರಕ್ಷಿತಾ ಕ್ರಮ ಅನುಸರಿದೆ ಇದ್ದರೆ 500 ರೂ. ದಂಡ ನಿಗದಿಪಡಿಸಲಾಗಿದೆ. ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವುದಕ್ಕೆ ಇದ್ದ ದಂಡವನ್ನು 1,000 ರೂ. ದಿಂದ 500 ರೂ,ಗೆ ತಗ್ಗಿದಲಾಗಿದೆ. ಆದರೆ ಕುಡಿದು ವಾಹನ ಚಾಲನೆ ಮಾಡುವುದರ ಮೇಲೆ ವಿಧಿಸಲಾಗುವ ದಂಡದ ಪ್ರಮಾಣವನ್ನು ಇಳಿಕೆ ಮಾಡಿಲ್ಲ. ಕುಡಿದು ಚಾಲನೆ ಮಾಡಿದರೆ 10,000 ರೂ. ದಂಡ ತೆರವುದು ಅನಿವಾರ್ಯ.

ನೋಂದಣಿ ಇಲ್ಲದ ಲಘು ವಾಹನಗಳಿಗೆ ಹಾಕಲಾಗುತ್ತಿದ್ದ ದಂಡದ ಮೊತ್ತವನ್ನು 3 ಸಾವಿರಕ್ಕೆ ಮತ್ತು ಘನ ವಾಹನಗಳ ದಂಡ ಪ್ರಮಾಣವನ್ನು 5 ಸಾವಿರ ರೂ.ಗೆ ಇಳಿಸಲಾಗಿದೆ. ಪರವಾನಗಿ ಇಲ್ಲದ ವಾಹನಗಳಿಗೆ 10,000 ರೂ. ದಂಡ ನಿಗದಿಪಡಿಸಲಾಗಿತ್ತು. ಅದನ್ನು 5 ಸಾವಿರ ರೂ.ಗೆ ಇಳಿಸಲಾಗಿದೆ..

ವೇಗದ ವಾಹನ ಚಾಲನೆಗೆ ದ್ವಿಚಕ್ರವಾಹನ, ತ್ರಿಚಕ್ರ ವಾಹನ ಮತ್ತು ಲಘು ವಾಹನಗಳ ದಂಡದ ಪ್ರಮಾಣ 1,000ಕ್ಕೆ ತಗ್ಗಿಸಲಾಗಿದೆ. ಭಾರಿ ವಾಹನಗಳಿಗೆ 2,000 ರೂ. ದಂಡವಿದೆ. ನೋಂದಣಿ ಇಲ್ಲದ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

ಟಿಕೆಟ್ ಇಲ್ಲದೆ ಪ್ರಯಾಣಕ್ಕೆ 500 ರೂ. ವಿಧಿಸಲಾಗುತ್ತದೆ. ವಾಹನಗಳ ಮಾಹಿತಿ ನೀಡದೆ ಇದ್ದರೆ ವಿಧಿಸಲಾಗುವ ದಂಡವನ್ನು 1,000ಕ್ಕೆ ಇಳಿಸಲಾಗಿದೆ.

ಅನಧಿಕೃತ ವ್ಯಕ್ತಿಗಳಿಗೆ ವಾಹನ ಚಾಲನೆ ಮಾಡಲು ನೀಡಿದರೆ ಮಾಲೀಕನಿಗೆ; ದ್ವಿಚಕ್ರ ವಾಹನಕ್ಕೆ -1,000 ರೂ, ಲಘುವಾಹನ-2,000 ರೂ. ಮತ್ತು ಇತರೆ ವಾಹನಗಳಿಗೆ 5,000 ರೂ. ವಿಧಿಸಲಾಗುತ್ತದೆ.

ಪರವಾನಗಿ ಸಂಬಂಧಿಸಿದ ನಿಯಮ ಉಲ್ಲಂಘನೆಗೆ 10,000 ರೂ. ವಿಧಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+