Karnataka: ಇನ್ಮುಂದೆ ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಲಿದೆ ಸಂಜೆ ಪೌಷ್ಟಿಕ ಸ್ನ್ಯಾಕ್ಸ್‌ ಭಾಗ್ಯ

ಕರ್ನಾಟಕದ ಸರ್ಕಾರಿ ಹಾಗೂ ಶಾಲಾ ಮಕ್ಕಳಿಗೆ ಗುಡ್‌ನ್ಯೂಸ್‌ ಇಲ್ಲಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಆರೋಗ್ಯ ಸುಧಾರಣೆ ಹಾಗೂ ಅಪೌಷ್ಟಿಕತೆಯನ್ನ ಹೊಗಲಾಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮಧ್ಯಾಹ್ನದ ಬಿಸಿಯೂಟ, ಬೆಳಗಿನ ರಾಗಿ ಮಾಲ್ಟ್ ಅಥವಾ ಹಾಲಿನ ಜೊತೆಗೆ, ಇನ್ಮುಂದೆ ಸಂಜೆ ಪೌಷ್ಟಿಕ ಲಘು ಉಪಹಾರ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ.

ಶಾಲಾ ಅವಧಿ ಮುಗಿದ ಬಳಿಕ ಮಕ್ಕಳು ಆಯಾಸಕ್ಕೆ ಒಳಗಾಗುವುದನ್ನ ತಪ್ಪಿಸುವುದು ಹಾಗೂ ಅವರಿಗೆ ಪೂರಕ ಪೌಷ್ಟಿಕಾಂಶವನ್ನ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಗಣಿ ಬಾಧಿತ ಪ್ರದೇಶಗಳಲ್ಲಿ ಅಪೌಷ್ಟಿಕತೆ ಎದುರಿಸುತ್ತಿರುವ ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.

Karnataka Govt Plans Evening Snack Scheme for School Children Benefits for Students in 4 Districts

ಸಂಜೆ ವಿಶೇಷ ತರಗತಿಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಿಸಲು ಸಹ ಇದು ನೆರವಾಗಲಿದೆ. 1ನೇ ತರಗತಿಯಿಂದ 10ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.

ಶಾಲಾ ಮಕ್ಕಳಿಗೆ ಲಘು ಉಪಹಾರದಲ್ಲಿ ಏನೇನು ಸಿಗಲಿದೆ?

ಈ ಯೋಜನೆಯಡಿ ವಾರದಲ್ಲಿ ಆರು ದಿನಗಳ ಕಾಲ ಮಕ್ಕಳಿಗೆ ಪೌಷ್ಟಿಕ ತಿಂಡಿಗಳನ್ನ ವಿತರಿಸಲಾಗುತ್ತದೆ. ಕಡಲೆಕಾಯಿ, ಮೊಳಕೆ ಕಟ್ಟಿದ ಹೆಸರು ಕಾಳು ಹಾಗೂ ಕಡಲೆಕಾಯಿ ಚಿಕ್ಕಿಯಂತಹ ಪೌಷ್ಟಿಕಾಂಶಯುಕ್ತ ಆಹಾರಗಳನ್ನ ನೀಡಲು ತಜ್ಞರು ಶಿಫಾರಸು ಮಾಡಿದ್ದಾರೆ.

ವಿಶೇಷವಾಗಿ ಶನಿವಾರದಂದು ಮಕ್ಕಳಿಗೆ ಕಿತ್ತಳೆ, ಮೂಸಂಬಿ ಅಥವಾ ಸಪೋಟಾದಂತಹ ತಾಜಾ ಹಣ್ಣುಗಳನ್ನ ನೀಡುವ ಕುರಿತು ನಿರ್ಧರಿಸಲಾಗಿದೆ.

ಮೊದಲ ಹಂತದಲ್ಲಿ ಈ ನಾಲ್ಕು ಜಿಲ್ಲೆಗಳಲ್ಲಿ ಪೌಷ್ಟಿಕ ಆಹಾರ ಯೋಜನೆ ಜಾರಿ

ಸದ್ಯ ಪ್ರಾಯೋಗಿಕವಾಗಿ ಈ ಯೋಜನೆಯನ್ನ ಗಣಿಗಾರಿಕೆಯಿಂದ ಬಾಧಿತವಾಗಿರುವ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಜಾರಿಗೆ ತರಲು ಉದ್ದೇಶಿಸಲಾಗಿದೆ. ವಿಜಯನಗರ, ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಮೊದಲ ಹಂತವಾಗಿ ಯೋಜನೆ ಆರಂಭವಾಗಲಿದೆ.

ಈ ಜಿಲ್ಲೆಗಳಲ್ಲಿನ ಮಕ್ಕಳ ಆರೋಗ್ಯದಲ್ಲಾಗುವ ಸುಧಾರಣೆ ಹಾಗೂ ಯೋಜನೆಯ ಕಾರ್ಯಕ್ಷಮತೆಯನ್ನ ಪರಿಶೀಲಿಸಿದ ಬಳಿಕ ಮುಂದಿನ ದಿನಗಳಲ್ಲಿ ಇಡೀ ರಾಜ್ಯದಾದ್ಯಂತ ಇದನ್ನು ವಿಸ್ತರಿಸುವ ಚಿಂತನೆ ಶಿಕ್ಷಣ ಇಲಾಖೆಯ ಮುಂದಿದೆ.

KMERCL ಯೋಜನೆ ಅಡಿ ಅನುದಾನ ಬಿಡುಗಡೆ

ಈ ಯೋಜನೆಗಾಗಿ ಕರ್ನಾಟಕ ಗಣಿ ಮತ್ತು ಪರಿಸರ ಪುನಸ್ಥಾಪನೆ ನಿಗಮ ಅನುದಾನವನ್ನ ಒದಗಿಸುತ್ತಿದೆ. ಮುಂದಿನ ಮೂರು ವರ್ಷಗಳ ಅನುಷ್ಠಾನಕ್ಕಾಗಿ ಒಟ್ಟು 31.9 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಪ್ರಸ್ತುತ 10.6 ಕೋಟಿ ರೂಪಾಯಿ ಬಿಡುಗಡೆಗೆ ಅನುಮೋದನೆ ದೊರೆತಿದೆ.

ಅಡುಗೆದಾರರು ಹಾಗೂ ಸಹಾಯಕರಿಗಾಗಿ ಪ್ರತ್ಯೇಕ ನಿಧಿಯನ್ನ ಸಹ ಒದಗಿಸಲಾಗಿದೆ. ಆದರೆ, ಪ್ರಸ್ತುತ ಶಾಲೆಗಳಲ್ಲಿ SATS ತಂತ್ರಾಂಶದಡಿ ವಿದ್ಯಾರ್ಥಿಗಳ ಮಾಹಿತಿ ಅಪ್‌ಡೇಟ್ ಆಗುವುದು ಬಾಕಿಯಿದ್ದು, ಯೋಜನೆ ಜಾರಿಗೆ ಮುನ್ನ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ ಪಡೆಯುವುದೇ ಸವಾಲಾಗಿದೆ.

ಇದರ ಜೊತೆಗೆ, ಈ ಯೋಜನೆಯಿಂದ ತಮಗೆ ಆಡಳಿತಾತ್ಮಕ ಕೆಲಸದ ಹೊರೆ ಹೆಚ್ಚಾಗದಿರಲಿ ಎಂಬ ಆತಂಕವನ್ನು ಶಿಕ್ಷಕರು ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ದೈಹಿಕ ಆರೋಗ್ಯವನ್ನೂ ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಈ ಸಂಜೆ ಉಪಹಾರ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು, ಪೋಷಕರಿಂದ ವ್ಯಾಪಕ ಮೆಚ್ಚುಗೆ ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+