Vehicle Cess Raised: ಫೆಬ್ರವರಿ 1ರಿಂದ ಹೆಚ್ಚುವರಿ ಸೆಸ್ , ಕರ್ನಾಟಕ ಜನರಿಗೆ ಸರ್ಕಾರ ಶಾಕ್

ಬೆಂಗಳೂರು, ಜನವರಿ 29: ಕರ್ನಾಟಕ ರಾಜ್ಯದಲ್ಲಿ ಬಜೆಟ್ ಮಂಡನೆಗೆ ಇನ್ನೂ ಎರಡು ತಿಂಗಳು ಮೊದಲೇ ರಾಜ್ಯ ಸರ್ಕಾರ ನಿರ್ದಿಷ್ಟ ವರ್ಗದ ಜನರಿಗೆ ಸೆಸ್ ಹೆಚ್ಚಿಸಿ ಶಾಕ್ ನೀಡಿದೆ. ಹೌದು, ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ಪೂರ್ವ ನಿರ್ಧಾರದಂತೆ ಹೊಸ ವಾಹನಗಳ ಖರೀದಿಸಿ ನೋಂದಣಿ ಮಾಡುವುದರ ಮೇಲಿದ್ದ ಸೆಸ್ ಅನ್ನು ಹೆಚ್ಚಳ ಮಾಡಿದೆ. ಫೆಬ್ರವರಿ 1ರಿಂದ ಇದು ಜಾರಿಗೆ ಬರಲಿದ್ದು, ಹೊಸ ದ್ವಿಚಕ್ರ ವಾಹನ ಮತ್ತು ಕಾರು ಖರೀದಿಸುವವರಿಗೆ ಅನ್ವಯವಾಗುತ್ತದೆ.

ರಾಜ್ಯ ಸಾರಿಗೆ ಇಲಾಖೆಯು ಫೆಬ್ರವರಿ ತಿಂಗಳಿನಿಂದ ಹೊಸ ಬೈಕ್ ನೋಂದಣಿಯಲ್ಲಿ 500 ರೂಪಾಯಿ ಹಾಗೂ ಕಾರು ನೋಂದಣಿಯಲ್ಲಿ 1000 ರೂಪಾಯಿ ಹೆಚ್ಚುವರಿ ಸಂಗ್ರಹಿಸುವಂತೆ ಆದೇಶ ಹೊರಡಿಸಿದೆ. ಸರ್ಕಾರದ ಆದೇಶವು ಹೊಸ ವಾಹನ ಖರೀದಿದಾರರಿಗೆ ಶಾಕ್ ನೀಡಿದೆ.

Karnataka Govt Orders Issue of Imposed cess Rs 500 on Bike Rs 1000 on Car From Feb 1st

ಡಿಸೆಂಬರ್‌ನಲ್ಲಿ ವಿಧಾನಸಭೆ ಅಂಗೀಕರಿಸಿದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ಎರಡನೇ ತಿದ್ದುಪಡಿ) ಮಸೂದೆ, 2024 ರ ಅಡಿಯಲ್ಲಿ ಸಾರಿಗೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಸರ್ಕಾರದ ಈ ಸೆಸ್ ಹೆಚ್ಚಳದ ನಿರ್ಧಾರವನ್ನು, 'ಕರ್ನಾಟಕ ಮೋಟಾರು ಸಾರಿಗೆ ಹಾಗೂ ಇತರ ಮಿತ್ರ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕಾಯ್ದೆ-2024 ರ ಅಡಿಯಲ್ಲಿ ಸ್ಥಾಪಿಸಿದ ಸಾಮಾಜಿಕ ಭದ್ರತಾ ನಿಧಿಗೆ ಕೊಡುಗೆ ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ ಎಂದು ತಿಳಿದು ಬಂದಿದೆ.

ಹೊಸ ಕಾರು ಬೈಕ್ ಮತ್ತು ಕಾರು ಖರೀದಿಸುವವರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ನೋಂದಣಿ ಮಾಡಿಸುವಾಗ ಹಾಲಿ ಇದ್ದ ಸೆಸ್‌ಗಿಂತಲೂ ಕ್ರಮವಾಗಿ ರೂ.500 ಮತ್ತು ರೂ.1000 ಹೆಚ್ಚುವರಿ ಸೆಸ್ ಪಾವತಿಸಬೇಕಿದೆ. ಇದು ವಾಹನ ಖರೀದಿದಾರರಿಗೆ ಕೊಂಚ ಹೊರೆಯಾಗಿ ಪರಿಣಮಿಸಬಹುದು.

ಇತ್ತೀಚೆಗೆ ರಾಜ್ಯ ಸಾರಿಗೆ ಇಲಾಖೆ ಕರ್ನಾಟಕ ರಾಜ್ಯ ಸರ್ಕಾರಿ ಬಸ್‌ಗಳ ಎಲ್ಲ ನಾಲ್ಕು ನಿಗಮಗಳ ಬಸ್‌ ಟಿಕೆಟ್ ದರವನ್ನು ಶೇಕಡಾ 15ರಷ್ಟು ಹೆಚ್ಚಳ ಮಾಡಿತ್ತು. ನೀರಿನ ದರ ಏರಿಕೆ ಪ್ರಸ್ತಾವನೆ ಇದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್ ದರ ಗಗನ ಮುಟ್ಟಿದೆ. ಹೀಗಿರುವಾಗ ವಾಹನ ಸೆಸ್ ಹೆಚ್ಚಳ ಎಷ್ಟು ಸರಿ ಎಂದು ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಯದ ಮೇಲೆ ಸರ್ಕಾರ ಮತ್ತೆ ಬರೆ ಎಳೆದಿದೆ ಎಂದು ಕೆಲವರು ದೂರಿದ್ದಾರೆ.

ಹೊಸ ವಾಹನ ಖರೀದಿದಾರರಿಗೆ ನೋಂದಣಿ ಶುಲ್ಕದ ಹೆಸರಿನಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುವುದು ಸರಿಯಲ್ಲ ಎಂದು ಜನರ ಬೇಸರ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+