ಪತಿಯ ಕಣ್ಣಿನ ಆಪರೇಷನ್‌ಗೆ ನೆರವಾದ ʼಗೃಹಲಕ್ಷ್ಮಿʼ ಹಣ; ಎಲ್ಲಿ?

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ಶುರುವಾಗಿ ಇತ್ತೀಚೆಗೆ ಒಂದು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಲಕ್ಷಾಂತರ ಮಹಿಳೆಯರಿಗೆ ಈ ಯೋಜನೆ ವರದಾನವಾಗಿರುವ ಬಗ್ಗೆ ವರದಿಯಾಗಿವೆ. ಇತ್ತೀಚೆಗೆ ವೃದ್ಧೆಯೊಬ್ಬರು ಗೃಹಲಕ್ಷ್ಮಿ ಹಣ ಕೂಡಿಟ್ಟು, ಊರಿಗೆಲ್ಲ ಹೋಳಿಗೆ ಊಟ ಹಾಕಿಸಿದ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಮತ್ತೊಬ್ಬರು ಇದೇ ಹಣದಲ್ಲಿ ಜೀವನೋಪಾಯಕ್ಕಾಗಿ ಫ್ಯಾನ್ಸಿ ಸ್ಟೋರ್‌ ಕೂಡ ತೆರೆದಿದ್ದರು.

ಇದೀಗ ಇಂತದ್ದೇ ಯಶೋಗಾಥೆಯ ಕಥೆಗೆ ಗೃಹಲಕ್ಷಿ ಯೋಜನೆ ಸಾಕ್ಷಿಯಾಗಿದೆ. ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣ ಕೂಡಿಟ್ಟು ತನ್ನ ಪತಿಗೆ ಕಣ್ಣಿನ ಆಪರೇಷನ್‌ ಮಾಡಿಸಿದ್ದಾರೆ. ಜೊತೆಗೆ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Karnataka Government s Grulahakshmi Scheme Helped The Woman s Husband s Eye Surgery

ಬೆಳಗಾವಿಯ ಅನಗೋಳದ ಅನಿತಾ ಎಂಬುವವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ. ಇವರ ಪತಿ ಚಂದ್ರಶೇಖರ್‌ ಬಡಿಗೇರ ಎಂಬುವವರಿಗೆ ಕಣ್ಣಿನ ಸಮಸ್ಯೆ ಇತ್ತು. ಹಾಗಾಗಿ ಆಪರೇಷನ್‌ ಮಾಡಿಸಲು ನಿರ್ಧರಿಸಿದಾಗ ಹಣಕಾಸಿಗೆ ಏನು ಮಾಡುವುದು ಎಂದು ತಲೆಕೊಡಿಸಿಕೊಳ್ಳಲಿಲ್ಲ. ಏಕೆಂದರೆ ಅನಿತಾ ಅವರು ಪ್ರತಿ ತಿಂಗಳು ಬರುವ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟಿದ್ದರು. ಇದೇ ಹಣ ಇಂದು ಅವರ ಪತಿಯ ಕಣ್ಣಿನ ಆಪರೇಷನ್‌ಗೆ ನೆರವಾಗಿದೆ.

ಇನ್ನು ಗೃಹಲಕ್ಷ್ಮಿ ಯೋಜನೆಯಿಂದ 18,000 ಸಾವಿರ ರೂಪಾಯಿಯನ್ನು ಅನಿತಾ ಅವರು ಕೂಡಿಟ್ಟಿದ್ದರು. ಇದರ ಜೊತೆಗೆ ತಮ್ಮ ಬಳಿ ಇಟ್ಟುಕೊಂಡಿದ್ದ 10,000 ರೂಪಾಯಿ ಸೇರಿಸಿ, ಪತಿ ಚಂದ್ರಶೇಖರ್​ ಅವರ ಕಣ್ಣಿನ ಆಪರೇಷನ್​ ಯಶಸ್ವಿಯಾಗಿ ಮಾಡಿದ್ದಾರೆ. ಇದರಿಂದ ಅವರ ಪತಿಯ ಕಣ್ಣಿನ ಸಮಸ್ಯೆಯೂ ದೂರವಾಗಿದೆ.

Karnataka Government s Grulahakshmi Scheme Helped The Woman s Husband s Eye Surgery

ಈ ಬಗ್ಗೆ ದಂಪತಿ ವಿಡಿಯೋ ಮಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಈ ಗೃಹಲಕ್ಷ್ಮಿ ಯೋಜನೆಯನ್ನು ನೀಡಿ ನೆರವಾದ ರಾಜ್ಯ ಕಾಂಗ್ರೆಸ್‌ ಸರ್ಕಾರ, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಬಗ್ಗೆ ರೀಲ್ಸ್‌ ಸ್ಪರ್ಧೆ: ಇನ್ನು ಗೃಹಲಕ್ಷ್ಮಿ ಯೋಜನೆ ಶುರುವಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆ ರಾಜ್ಯ ಸರ್ಕಾರವು ವಿಶೇಷ ಸ್ಪರ್ಧೆಯೊಂದನ್ನು ಫಲಾನಿಭವಿಗಳಿಗಾಗಿ ಏರ್ಪಡಿಸಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌, ರಾಜ್ಯದ ಕೋಟ್ಯಂತರ ಮನೆಯೊಡತಿಯರ ಕುಟುಂಬ ನಿರ್ವಹಣೆಯ ಜವಾಬ್ದಾರಿಯೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿರುವ 'ಗೃಹಲಕ್ಷ್ಮಿ' ಯೋಜನೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿರುವ ಸಂಭ್ರಮದಲ್ಲಿದೆ. ಮನೆಯೊಡತಿಯರಿಗೆ ಅಥವಾ ಕುಟುಂಬಗಳಿಗೆ ಗೃಹಲಕ್ಷ್ಮಿ ಯೋಜನೆಯಿಂದ ಏನೆಲ್ಲ ಬದಲಾವಣೆಗಳಾಗಿವೆ ಎಂಬುದನ್ನು ತಿಳಿದುಕೊಳ್ಳಲು ಕಾತುರಳಾಗಿದ್ದೇನೆ ಎಂದು ಹೇಳಿದ್ದಾರೆ.

ʼನಿಮ್ಮ ಜೀವನದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದಾದ ಬದಲಾವಣೆಯ ಕುರಿತು ಒಂದು ತಿಂಗಳ ಅವಧಿಯವರೆಗೆ ಅಂದರೆ ಸೆಪ್ಟೆಂಬರ್ 30ರವರೆಗೆ ರೀಲ್ಸ್ ಮೂಲಕ ಸೋಷಿಯಲ್ ಮಿಡಿಯಾಗಳಲ್ಲಿ ಪೋಸ್ಟ್ ಮಾಡಿ ನಮ್ಮೊಂದಿಗೆ ಹಂಚಿಕೊಳ್ಳಿ, ಯಾವ ರೀಲ್ಸ್ ಗಳು ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತವೆಯೋ ಅಂತಹ ರೀಲ್ಸ್‌ಗಳಿಗೆ ವೈಯಕ್ತಿಕವಾಗಿ ಬಹುಮಾನ ವಿತರಿಸಲಿದ್ದೇನೆ‌ʼ ಎಂದು ಸಿಹಿಸುದ್ದಿ ನೀಡಿದ್ದಾರೆ. ಇದರ ಬೆನ್ನಲ್ಲೇ ಗೃಹಲಕ್ಷ್ಮಿಯರು ರೀಲ್ಸ್‌ ಮಾಡಲು ಉತ್ಸುಕರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+