ಸರ್ಕಾರಿ ಶಾಲಾ ಶಿಕ್ಷಕರಿಗೆ 5 ದಿನಗಳ ಇಂಗ್ಲೀಷ್ ತರಬೇತಿ ಸಂಪೂರ್ಣ ವಿಫಲ: ಪಾಠ ಮಾಡೋದು ಹೇಗೆ ಎಂದು ಶಿಕ್ಷಕರು

ರಾಜ್ಯದ 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ 1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸುವ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (DSEL) ಶಿಕ್ಷಕರಿಗೆ ಇಂಗ್ಲೀಷ್ ಭಾಷೆಯನ್ನು ಬೋಧಿಸಲು ತರಬೇತಿಯನ್ನು ಆಯೋಜಿಸಿತ್ತು. ಆದರೆ, ಈ ತರಬೇತಿಯು ಕೇವಲ ಐದು ದಿನಗಳವರೆಗೆ ಮಾತ್ರ ಸೀಮಿತವಾಗಿದ್ದು, ತರಬೇತಿ ಪಡೆದ ಶಿಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಲೆಗಳು ಇನ್ನು ಕೇವಲ ಒಂದೂವರೆ ತಿಂಗಳಲ್ಲಿ ಪ್ರಾರಂಭವಾಗಲಿವೆ. ಆದರೆ ಭಾಷೆಯನ್ನು ಸರಿಯಾಗಿ ಕಲಿಯಲು ಮತ್ತು ಆ ನಂತರ ವಿದ್ಯಾರ್ಥಿಗಳಿಗೆ ಕಲಿಸಲು ಕೇವಲ ಐದು ದಿನಗಳು ಯಾವುದೇ ಕಾರಣಕ್ಕೂ ಸಾಲುವುದಿಲ್ಲ ಎಂದು ಶಿಕ್ಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವೆಬ್‌ಸೈಟ್‌ನಲ್ಲಿ "ಸಕ್ರಿಯ, ಕಲಿಯುವವರ-ಕೇಂದ್ರಿತ, ಭಾಷಾ-ಬೆಂಬಲಿತ ಬೋಧನಾ ವಿಧಾನಗಳನ್ನು" ಅಳವಡಿಸಿಕೊಳ್ಳಲು 15 ದಿನಗಳ ತರಬೇತಿ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ವಾಸ್ತವದಲ್ಲಿ ಕೇವಲ ಐದು ದಿನಗಳ ಕಾಲ ಮಾತ್ರ ತರಬೇತಿ ನೀಡಲಾಗಿದೆ.

Karnataka

ಬೆಳಗಾವಿ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಈ ಬಗ್ಗೆ ಮಾತನಾಡುತ್ತಾ, "ಇಂಗ್ಲೀಷ್ ಕಲಿಸಲು ನಮ್ಮನ್ನೇ ಸಂಪನ್ಮೂಲ ವ್ಯಕ್ತಿಗಳಾಗಿ (Resource Persons) ಆಯ್ಕೆ ಮಾಡಲಾಗಿತ್ತು. ಆದರೆ ಆಯ್ಕೆಯಾದವರಲ್ಲಿ ಕೆಲವರಿಗೆ ಇಂಗ್ಲೀಷ್ ಬೋಧನೆಯ ಹಿನ್ನೆಲೆಯೇ ಇರಲಿಲ್ಲ. ಅವರು ಮೂಲತಃ ಕನ್ನಡ ಭಾಷಾ ಶಿಕ್ಷಕರಾಗಿದ್ದು, ತರಗತಿಯಲ್ಲಿ ಇಂಗ್ಲೀಷ್ ಭಾಷೆಯನ್ನು ಸರಿಯಾಗಿ ಬಳಸಲು ಅಥವಾ ನಮಗೆ ಕಲಿಸಲು ಅವರು ಸಜ್ಜಾಗಿರಲಿಲ್ಲ. ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಶಿಕ್ಷಕರಿಗೆ ತರಬೇತಿ ನೀಡಲು ಸಿದ್ಧಪಡಿಸಿದ ಪುಸ್ತಕಗಳು ಸಾಕಷ್ಟು ದೊಡ್ಡದಾಗಿವೆ. ಅದನ್ನು ಬೇರೆಯವರಿಗೆ ಕಲಿಸುವ ಮುನ್ನ ನಾವು ಅರ್ಥಮಾಡಿಕೊಳ್ಳಲು ಕನಿಷ್ಠ ಎರಡು ದಿನಗಳೇ ಬೇಕಾಗುತ್ತದೆ" ಎಂದು ಅಳಲು ತೋಡಿಕೊಂಡಿದ್ದಾರೆ.

ಇದರ ನಡುವೆ, ತಾಲೂಕು ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿದ್ದ ಮತ್ತೊಬ್ಬ ಶಿಕ್ಷಕರು, "ತರಬೇತಿಯು ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಏಕೆಂದರೆ ನಾವು ಒಂದು ಕಡೆ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿದ್ದೆವು ಮತ್ತು ಅದೇ ಸಮಯದಲ್ಲಿ ಜನಗಣತಿ ತರಬೇತಿಯಲ್ಲೂ ಪಾಲ್ಗೊಳ್ಳಬೇಕಾಗಿತ್ತು. ವಿದ್ಯಾರ್ಥಿಗಳಿಗೆ ಕಲಿಸುವುದನ್ನು ಮರೆತುಬಿಡಿ, ಬಹಳಷ್ಟು ಶಿಕ್ಷಕರಿಗೆ ಇಂಗ್ಲೀಷ್ ನಲ್ಲಿ ಒಂದು ಸರಳ ವಾಕ್ಯವನ್ನು ಹೇಗೆ ರಚಿಸುವುದು ಎಂದು ಸಹ ತಿಳಿದಿಲ್ಲ. ಆದ್ದರಿಂದ, ಈ ಐದು ದಿನಗಳ ತರಬೇತಿಯು ಖಂಡಿತಾ ಸಹಾಯಕವಾಗುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

Ranya Rao: ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್ ಬಂಧನ ಎತ್ತಿ ಹಿಡಿದ ಸುಪ್ರೀಂಕೋರ್ಟ್
Ranya Rao: ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್ ಬಂಧನ ಎತ್ತಿ ಹಿಡಿದ ಸುಪ್ರೀಂಕೋರ್ಟ್

ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಯಾವುದೇ ಭಾಷೆಯ ಮೂಲಭೂತ ಅಂಶಗಳನ್ನು ಕೇವಲ ಐದು ದಿನಗಳಲ್ಲಿ ಕಲಿಯಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. "ಸರ್ಕಾರವು ಇಂಗ್ಲೀಷ್ ಹಿನ್ನೆಲೆ ಹೊಂದಿರುವ ಶಿಕ್ಷಕರನ್ನೇ ನೇಮಿಸಿಕೊಳ್ಳಬೇಕು. ಇಲ್ಲದಿದ್ದರೆ, ಇದು ವಿದ್ಯಾರ್ಥಿಗಳಲ್ಲಿ ಭಾಷೆಯ ಕಳಪೆ ಕಲಿಕೆಗೆ ಕಾರಣವಾಗುತ್ತದೆ ಮತ್ತು ಅವರ ಫಲಿತಾಂಶಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ" ಎಂದು ಅವರು ಎಚ್ಚರಿಸಿದ್ದಾರೆ. ಸೂಕ್ತ ತರಬೇತಿ ಇಲ್ಲದೆ, ನುರಿತ ಶಿಕ್ಷಕರಿಲ್ಲದೆ ಏಕಾಏಕಿ ಇಂಗ್ಲಿಷ್ ಮಾಧ್ಯಮ ಆರಂಭಿಸಿದರೆ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದು ಇದೀಗ ಪೋಷಕರ ಆತಂಕಕ್ಕೂ ಕಾರಣವಾಗಿದೆ. ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗಲು ಕೆಲವೇ ವಾರಗಳು ಬಾಕಿ ಇರುವಾಗ, ಶಿಕ್ಷಣ ಇಲಾಖೆ ಈ ಬಗ್ಗೆ ಯಾವ ರೀತಿಯ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+