ಸರ್ಕಾರಿ ಶಾಲಾ ಮಕ್ಕಳಿಗೆ ಭರ್ಜರಿ ಸಿಹಿಸುದ್ದಿ: ಇನ್ಮುಂದೆ 6ನೇ ತರಗತಿಯಿಂದಲೇ ಸಿಗಲಿದೆ ಕೌಶಲ್ಯಾಧಾರಿತ ಶಿಕ್ಷಣ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಶಿಕ್ಷಣ ಇಲಾಖೆ ಸಿಹಿಸುದ್ದಿಯೊಂದನ್ನಾ ನೀಡಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಬೇಕಾದಂತೆ ವಿದ್ಯಾರ್ಥಿಗಳನ್ನ ತಯಾರು ಮಾಡಲು ನಿರುದ್ಯೋಗ ಸಮಸ್ಯೆಯನ್ನಾ ಬಗೆಹರಿಸಲು ಇದೀಗ ರಾಜ್ಯ ಸರ್ಕಾರ ಮಹತ್ವದ ಕ್ರಮವೊಂದನ್ನ ತೆಗೆದುಕೊಂಡಿದೆ.

ಸಿಎಸ್‌ಆರ್‌ ಅಂದರೆ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಉಪಕ್ರಮದ ಅಡಿಯಲ್ಲಿ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ 6ನೇ ತರಗತಿಯಿಂದಲೇ ಇಂಡಸ್ಟ್ರಿಗಳ ಅಗತ್ಯಗಳಿಗೆ ಬೇಕಾದಂತೆ 'ಕೌಶಲ್ಯಾಧಾರಿತ ಶಿಕ್ಷಣ' ನೀಡಲು ನಿರ್ಧರಿಸಲಾಗಿದೆ. ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಮುಂದೆ ಉದ್ಯೋಗಕ್ಕೆ ಬೇಕಾದ ಕೌಶ್ಯಲ್ಯಗಳನ್ನಾ ಈ ತರಬೇತಿಯಲ್ಲಿ ನೀಡುವುದೇ ಈ ಯೋಜನೆಯ ಮುಖ್ಯ ಉದ್ದೇಶ.

Karnataka Government

ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಮೊದಲು ಜಾರಿ

ಈ ವಿನೂತನ ಯೋಜನೆಯನ್ನ ಏಕಾಏಕಿ ಎಲ್ಲೆಡೆ ಜಾರಿಗೆ ತರುವ ಬದಲು, ಪ್ರಾಯೋಗಿಕವಾಗಿ ಹಾಗೂ ಹಂತ ಹಂತವಾಗಿ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದೆ. ಮೊದಲ ಹಂತದಲ್ಲಿ ಈ ಕೌಶಲ್ಯಾಧಾರಿತ ಶಿಕ್ಷಣವನ್ನ ಕೇವಲ ಕರ್ನಾಟಕ ಪಬ್ಲಿಕ್ ಶಾಲೆ ( ಕೆಪಿಎಸ್‌ ) ಗಳಲ್ಲಿ ಆರಂಭಿಸಲಾಗುತ್ತದೆ. ನಂತರ ಇತರ ಸರ್ಕಾರಿ ಶಾಲೆಗಳಿಗೂ ಈ ಮಾದರಿಯನ್ನ ಅಳವಡಿಸುವ ಗುರಿಯಿದೆ.

ಪಠ್ಯಪುಸ್ತಕದ ಜ್ಞಾನದ ಜೊತೆಗೆ, ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗಿ ವೃತ್ತಿಪರ ತರಬೇತಿ ನೀಡುವ ಮೂಲಕ ಮಕ್ಕಳನ್ನ ಭವಿಷ್ಯದಲ್ಲಿ ಎದುರಾಗುವ ಸವಾಲುಗಳಿಗೆ ಇವಾಗಿನಿಂದಲೇ ಸಿದ್ಧಪಡಿಸಲಾಗುತ್ತದೆ . ಈ ಯೋಜನೆ ಯಶಸ್ವಿಯಾದರೆ, ಮಕ್ಕಳು 10 ಮತ್ತು 12ನೇ ತರಗತಿ ಮುಗಿಸುವ ಹೊತ್ತಿಗೆ ವಿದ್ಯಾರ್ಥಿಗಳು ಸಂಪೂರ್ಣವಾಗಿ ಸ್ವಾವಲಂಬಿಗಳಾಗಿರುತ್ತಾರೆ.

ಕೇವಲ ಅಂಕ ಗಳಿಕೆ ಮಾತ್ರವಲ್ಲದೆ, ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ್ಯ ಒದಗಿಸುವುದು ತೂಂಬ ಅಗತ್ಯವಿದೆ. ಹೀಗಾಗಿ, ಈ ಯೋಜನೆಯಡಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ , ಕೋಡಿಂಗ್, ಡಿಜಿಟಲ್ ಸಾಕ್ಷರತೆಯಂತಹ ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ, ಗ್ರಾಮೀಣ ಸೊಗಡಿನ ಕೃಷಿ, ತೋಟಗಾರಿಕೆ, ಮರಗೆಲಸ, ಕುಂಬಾರಿಕೆ, ನೇಯ್ಗೆ, ಹಾಗೂ ಗ್ರಾಫಿಕ್ ಡಿಸೈನಿಂಗ್, ಫೋಟೋಗ್ರಫಿ ಮುಂತಾದ ಹತ್ತು ಹಲವು ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ.

ತಿಂಗಳಲ್ಲಿ ಕೆಲವು ನಿರ್ದಿಷ್ಟ ದಿನಗಳಲ್ಲಿ ಸಂಬಂಧ ಪಟ್ಟ ವಲಯದ ಪರಿಣತರು ಹಾಗೂ ತಜ್ಞರು ಖುದ್ದಾಗಿ ಶಾಲೆಗೆ ಭೇಟಿ ನೀಡಿ ಉಚಿತವಾಗಿ ಈ ತರಬೇತಿಯನ್ನ ನೀಡಲಿದ್ದಾರೆ. ಶಿಕ್ಷಣ ಇಲಾಖೆ ಹಾಗೂ ಕೈಗಾರಿಕೆಗಳ ಜಂಟಿ ಸಹಯೋಗದಲ್ಲಿ ಪ್ರಮಾಣಪತ್ರವನ್ನ ವಿತರಿಸುವ ಆಲೋಚನೆ ಕೂಡ ಇದೆ. ಇದು ಭವಿಷ್ಯದಲ್ಲಿ ಉನ್ನತ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳಿಗೆ ಸಹಾಯ ಮಾಡಲಿದೆ.

ಶಿಕ್ಷಣದಲ್ಲಿ ಸಿಎಸ್‌ಆರ್ ಉಪಕ್ರಮ

ಈ ಯೋಜನೆಯನ್ನು ಯಶಸ್ವಿಗೊಳಿಸಲು ಶಿಕ್ಷಣದಲ್ಲಿ ಸಿಎಸ್‌ಆರ್ ಉಪಕ್ರಮವನ್ನು ಬಳಸಿಕೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಿಎಸ್‌ಆರ್ ಕೋಶಗಳನ್ನ ಈಗಾಗಲೇ ರಚಿಸಲಾಗಿದೆ. ಕೈಗಾರಿಕಾ ಮಾಲೀಕರು, ದಾನಿಗಳು, ಉದ್ಯಮಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಶಾಲೆಗಳಿಗೆ ಬೇಕಾದ ಆರ್ಥಿಕ ಸಹಾಯ ಮತ್ತು ಮೂಲಸೌಕರ್ಯಗಳನ್ನ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಚಿತ್ರಣವನ್ನಾ ಸಂಪೂರ್ಣವಾಗಿ ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ.

ಇಂದಿನ ದಿನಗಳಲ್ಲಿ ಪದವಿ ಮುಗಿಸಿದರೂ ಸೂಕ್ತ ಉದ್ಯೋಗ ಸಿಗದೆ ಯುವಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಶಿಕ್ಷಣ ವ್ಯವಸ್ಥೆಗೂ ಹಾಗೂ ಪ್ರಸ್ತುತ ಉದ್ಯೋಗ ಮಾರುಕಟ್ಟೆಯ ಬೇಡಿಕೆಗೂ ಇರುವ ವ್ಯತ್ಯಾಸ. ಇದನ್ನಾ ಸರಿದೂಗಿಸುವ ನಿಟ್ಟಿನಲ್ಲಿ 6ರಿಂದ 12ನೇ ತರಗತಿಯವರೆಗಿನ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಇಂತಹ ವೃತ್ತಿಪರ ಕೌಶಲ್ಯಗಳನ್ನ ರೂಢಿಸುವುದು ಅನಿವಾರ್ಯ. ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಅಧಿಕೃತವಾಗಿ ಕೈಬಿಡಲಾಗಿದ್ದರೂ, ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪರೋಕ್ಷವಾಗಿ ಇಂತಹ ಉತ್ತಮ ಅಂಶಗಳನ್ನ ಅಳವಡಿಸಿಕೊಳ್ಳಲಾಗುತ್ತಿದೆ ಎನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+