2016ನೇ ಸಾಲಿನ ಸರ್ಕಾರಿ ರಜೆ ದಿನಗಳ ಸಂಖ್ಯೆ ಇಳಿಕೆ
ಬೆಂಗಳೂರು, ನ.10: ರಾಜ್ಯ ಸರ್ಕಾರ 2016ನೇ ಸಾಲಿನ ರಾಷ್ಟ್ರೀಯ ಹಾಗೂ ವಿವಿಧ ಹಬ್ಬಗಳಿಗೆ ಸಂಬಂಧಿಸಿದಂತೆ ಸಾರ್ವತ್ರಿಕ ರಜಾ ದಿನಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ಕಳೆದ ಸಾಲಿನ ರಜೆ ಪಟ್ಟಿಗೆ ಹೋಲಿಸಿದರೆ ಈ ಬಾರಿ ಮುರ್ನಾಲ್ಕು ದಿನ ರಜೆ ದಿನ ಕಡಿಮೆಯಾಗಿದೆ.
ಕಾರ್ಮಿಕರ ದಿನಾಚರಣೆ, ಗಾಂಧಿಜಯಂತಿ ಹಾಗೂ ಕ್ರಿಸ್‌ಮಸ್ ರಜಾ ದಿನಗಳು ಭಾನುವಾರದಂದು ಬರುವುದರಿಂದ ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಅ.17ರಂದು ತುಲಾ ಸಂಕ್ರಮಣ ಹಾಗೂ ಡಿ.14ರಂದು ಬರುವ ಹುತ್ತರಿ ಹಬ್ಬ ಆಚರಿಸಲು ಕೊಡಗು ಜಿಲ್ಲೆಗೆ ಸೀಮಿತವಾಗಿ ಸರ್ಕಾರ ರಜಾ ಘೋಷಿಸಲಾಗಿದೆ.
ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಿಸಲಿದ್ದಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಹೇಳಿದೆ.

2016ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಕೋಷ್ಟಕ ಹೀಗಿದೆ:
| ಕ್ರಮ-ಸಂಖ್ಯೆ | ದಿನಾಂಕ | ದಿನ | ದಿನವಿಶೇಷ / ಹಬ್ಬಹರಿದಿನ |
| 1 | ಜನವರಿ 15 | ಶುಕ್ರವಾರ | ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿ ಹಬ್ಬ |
| 2 | ಜನವರಿ 26 | ಮಂಗಳವಾರ | ಗಣರಾಜ್ಯೋತ್ಸವ |
| 3 | ಮಾರ್ಚ್ 07 | ಸೋಮವಾರ | ಮಹಾಶಿವರಾತ್ರಿ |
| 4 | ಮಾರ್ಚ್ 25 | ಶುಕ್ರವಾರ | ಗುಡ್‌ಫ್ರೈಡೆ |
| 5 | ಏಪ್ರಿಲ್ 08 | ಶುಕ್ರವಾರ | ಚಾಂದ್ರಮಾನ ಯುಗಾದಿ |
| 6 | ಏಪ್ರಿಲ್ 14 | ಗುರುವಾರ | ಅಂಬೇಡ್ಕರ್ ಜಯಂತಿ/ ಸೌರಮಾನ ಯುಗಾದಿ |
| 7 | ಏಪ್ರಿಲ್ 19 | ಮಂಗಳವಾರ | ಮಹಾವೀರ ಜಯಂತಿ |
| 8 | ಮೇ 09 | ಸೋಮವಾರ | ಬಸವ ಜಯಂತಿ |
| 9 | ಜುಲೈ 06 | ಬುಧವಾರ | ಖುತುಬ್-ಎ-ರಂಜಾನ್ |
| 10 | ಆಗಸ್ಟ್ 15 | ಸೋಮವಾರ | ಸ್ವಾತಂತ್ರ್ಯ ದಿನಾಚರಣೆ |
| 11 | ಸೆಪ್ಟಂಬರ್ 05 | ಸೋಮವಾರ | ಗಣೇಶ ಚತುರ್ಥಿ |
| 12 | ಸೆಪ್ಟಂಬರ್ 12 | ಸೋಮವಾರ | ಬಕ್ರೀದ್ |
| 13 | ಸೆಪ್ಟಂಬರ್ 30 | ಶುಕ್ರವಾರ | ಮಹಾಲಯ ಅಮಾವಾಸ್ಯೆ/ಸರ್ವಪಿತೃ ಅಮವಾಸ್ಯೆ |
| 14 | ಅಕ್ಟೋಬರ್10 | ಸೋಮವಾರ | ಮಹಾನವಮಿ/ಆಯುಧಪೂಜೆ |
| 15 | ಅಕ್ಟೋಬರ್11 | ಮಂಗಳವಾರ | ವಿಜಯದಶಮಿ. |
| 16 | ಅಕ್ಟೋಬರ್12 | ಬುಧವಾರ | ಮೊಹರಂ ಕಡೇ ದಿನ |
| 17 | ಅಕ್ಟೋಬರ್15 | ಶನಿವಾರ | ವಾಲ್ಮೀಕಿ ಜಯಂತಿ |
| 18 | ಅಕ್ಟೋಬರ್29 | ಶನಿವಾರ | ನರಕ ಚತುರ್ದಶಿ |
| 19 | ಅಕ್ಟೋಬರ್31 | ಸೋಮವಾರ | ಬಲಿಪಾಡ್ಯಮಿ ದೀಪಾವಳಿ |
| 20 | ನವೆಂಬರ್ 01 | ಮಂಗಳವಾರ | ಕರ್ನಾಟಕ ರಾಜ್ಯೋತ್ಸವ |
| 21 | ನವೆಂಬರ್17 | ಗುರುವಾರ | ಕನಕದಾಸ ಜಯಂತಿ |
| 22 | ಡಿಸೆಂಬರ್ 12 | ಸೋಮವಾರ | ಈದ್ ಮಿಲಾದ್ |
* ಒಟ್ಟಾರೆ 52 ಭಾನುವಾರ, 12 ಎರಡನೇ ಶನಿವಾರ ಹಾಗೂ 22 ಸಾರ್ವತ್ರಿಕ ರಜಾದಿನಗಳಿವೆ.
ಸಾರ್ವತ್ರಿಕ ರಜಾದಿನಗಳ ಜತೆಗೆ ಎರಡು ದಿನಗಳಿಗೆ ಮೀರದಂತೆ ರಾಜ್ಯ ಸರ್ಕಾರಿ ನೌಕರರು ಪರಿಮಿತಿ ರಜೆಯನ್ನು ಪೂರ್ವಾನುಮತಿ ಪಡೆದು ಬಳಸಿಕೊಳ್ಳಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲು ನಿರ್ದೇಶಿಸಲಾಗಿದೆ.(ಒನ್ ಇಂಡಿಯಾಸುದ್ದಿ)












Click it and Unblock the Notifications