ಮದ್ಯ ಪ್ರಿಯರಿಗೆ ಭರ್ಜರಿ ಸುದ್ದಿ ಕೊಡಲಿದೆ ರಾಜ್ಯ ಸರ್ಕಾರ
Recommended Video

ಬೆಂಗಳೂರು, ಅಕ್ಟೋಬರ್ 20: ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಒಳ್ಳೆ ಸುದ್ದಿ ಕೊಡಲು ಮುಂದಾಗಿದೆ. ಇನ್ನು ಮುಂದೆ ಗುಂಡು ಪ್ರಿಯರೆ ಆನ್‌ಲೈನ್‌ನಲ್ಲಿ ಮದ್ಯ ಬುಕ್ ಮಾಡಿ ಮನೆಗೆ ತರಿಸಿಕೊಳ್ಳಬಹುದಾಗಿದೆ.
ಮಹಾರಾಷ್ಟ್ರ ಸರ್ಕಾರವು ಮದ್ಯವನ್ನು ಮನೆ-ಮನೆಗೆ ತಲುಪಿಸುವ ನಿರ್ಣಯ ಕೈಗೊಂಡಿದ್ದರ ಬಗ್ಗೆ ಇನ್ನೂ ಪರ-ವಿರೋಧ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಕರ್ನಾಟಕ ರಾಜ್ಯ ಸರ್ಕಾರ ಈ ರೀತಿಯಾದ ಯೋಜನೆಯೊಂದನ್ನು ರೂಪಿಸಿಕೊಂಡಿದೆ.
ಗ್ರಾಹಕರು ಇನ್ನು ಮುಂದೆ ಮದ್ಯವನ್ನು ಆನ್‌ಲೈನ್‌ನಲ್ಲೇ ಬುಕ್ ಮಾಡಿ ಖರೀದಿ ಮಾಡಬಹುದಾಗಿದೆ. ಮದ್ಯ ಮಾರಾಟದ ಬಗ್ಗೆ ಹಾಲಿ ಇರುವ ಕಾನೂನಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಆನ್‌ಲೈನ್‌ನಲ್ಲಿ ಮದ್ಯ ಮಾರಾಟಕ್ಕೆ ಕೆಲವು ಹೊಸ ನಿಯಮಾವಳಿಗಳನ್ನು ಅಳವಡಿಸಲು ಸರ್ಕಾರ ಚಿಂತಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆಯನ್ನು ಮಂಡಿಸಲು ಸರ್ಕಾರ ಯೋಜಿಸಿದೆ.
ಆನ್‌ಲೈನ್‌ನಲ್ಲಿ ಮದ್ಯ ಮಾರಾಟದ ಹಿಂದೆ ಲಾಭಗಳಿಕೆಯ ಉದ್ದೇಶವೇ ಮುಖ್ಯವಾಗಿದೆ. ರೈತರ ಸಾಲ ಮನ್ನಾದಿಂದಾಗಿ ಸಂಕಷ್ಟದಲ್ಲಿರುವ ರಾಜ್ಯ ಬೊಕ್ಕಸ ಬಡವಾಗಲು ಬಿಡದಂತೆ ತಡೆಯಲು ಸರ್ಕಾರ ಈ ಯೋಜನೆ ತರಲು ಮುಂದಾಗಿದೆ.












Click it and Unblock the Notifications