Government Employee: ಸರ್ಕಾರಿ ನೌಕರರ ಜನವರಿ, ಫೆಬ್ರವರಿ ತಿಂಗಳ ವೇತನ ಕಡಿತ

ಬೆಂಗಳೂರು, ಜನವರಿ 04: ಕರ್ನಾಟಕದ ಸರ್ಕಾರಿ ನೌಕರರ ಜನವರಿ/ ಫೆಬ್ರವರಿ ತಿಂಗಳ ವೇತನದಲ್ಲಿ ಕಡಿತವಾಗಲಿದೆ. ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಎಲ್ಲಾ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಮತ್ತು ಯೋಜನಾ ಶಾಖೆಗಳ ಅಧ್ಯಕ್ಷರುಗಳಿಗೆ ಸುತ್ತೋಲೆಯ ಮೂಲಕ ಮಾಹಿತಿಯನ್ನು ನೀಡಿದೆ. ಎಷ್ಟು ವೇತನ ಕಡಿತವಾಗಲಿದೆ ಎಂದು ಸಹ ಸುತ್ತೋಲೆಯಲ್ಲಿ ಮಾಹಿತಿ ನೀಡಲಾಗಿದೆ.

ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. 2025ನೇ ಸಾಲಿನ ಸರ್ಕಾರಿ ನೌಕರರ ಸಂಘದ ಸದಸ್ಯತ್ವ ಶುಲ್ಕ ಸಂಗ್ರಹಣೆಯ ಬಗ್ಗೆ ಎಂಬ ವಿಷಯವನ್ನು ಸುತ್ತೋಲೆ ಒಳಗೊಂಡಿದೆ.

Karnataka Government Employee Salary Cut In January And February

ಸರ್ಕಾರದ ಆದೇಶ ದಿನಾಂಕ 04-11-2019ರನ್ವಯ ಸಂಘದ ವಾರ್ಷಿಕ ಸದಸ್ಯತ್ವ ಶುಲ್ಕ ಸಂಗ್ರಹಣೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿರುತ್ತದೆ. ಅದರಂತೆ ತಮ್ಮ ಶಾಖಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಂದ ಸರ್ಕಾರಿ ನೌಕರರ ಸಂಘದ 2025ನೇ ಸಾಲಿನ ವಾರ್ಷಿಕ ಸದಸ್ಯತ್ವ ಶುಲ್ಕ ರೂ. 200 ಗಳನ್ನು 2025ನೇ ಜನವರಿ ಅಥವಾ ಫೆಬ್ರವರಿ ಮಾಹೆಯ ವೇತನದಲ್ಲಿ ಕಟಾವುಗೊಳಿಸಿ ಕೇಂದ್ರ ಸಂಘದ ಉಳಿತಾಯ ಜಮಾಗೊಳಿಸಲು ಕ್ರಮಕೈಗೊಳ್ಳುವುದು ಎಂದು ತಿಳಿಸಲಾಗಿದೆ.

ಕೈಗೊಳ್ಳಬೇಕಾದ ಕ್ರಮಗಳು

* ಜಿಲ್ಲಾ/ ತಾಲ್ಲೂಕು/ ಯೋಜನಾ ಶಾಖೆ ಕಾರ್ಯಕಾರಿ ಸಮಿತಿ ಸಭೆಯನ್ನು ದಿನಾಂಕ 15-01-2025ರೊಳಗೆ ಏರ್ಪಡಿಸಿ ಸದಸ್ಯತ್ವ ಸಂಗ್ರಹಣೆ ವಿಷಯವನ್ನು ಮಂಡಿಸಿ ಎಲ್ಲಾ ಪದಾಧಿಕಾರಿಗಳು/ ನಿರ್ದೇಶಕರು ಆಯಾ ಇಲಾಖಾ ನೌಕರರ ಸದಸ್ಯತ್ವ ಶುಲ್ಕವನ್ನು ವೇತನದಲ್ಲಿ ಕಟಾವುಗೊಳಿಸಲು ಕ್ರಮವಹಿಸುವುದು.

* ತಮ್ಮ ಜಿಲ್ಲೆ/ ತಾಲ್ಲೂಕು ಶಾಖೆಯ ಲೆಟರ್‌ಹೆಡ್‌ನಲ್ಲಿ ಸುತ್ತೋಲೆಯೊಂದಿಗೆ ಲಗತ್ತಿಸಿರುವ ಕೇಂದ್ರ ಸಂಘದ ಬ್ಯಾಂಕ್ ಖಾತೆ ವಿವರದ ಮಾದರಿ ಪತ್ರ ಹಾಗೂ ಸರ್ಕಾರದ ಆದೇಶವನ್ನು ಖಜಾನಾಧಿಕಾರಿಗಳು ಹಾಗೂ ವೇತನ ಬಟವಾಡೆ ಅಧಿಕಾರಿಗಳಿಗೆ ನೀಡಿ, ಕೆ-2 ಮೂಲಕ ಸದಸ್ಯತ್ವ ಶುಲ್ಕವನ್ನು ಕಟಾಯಿಸಲು ಪತ್ರದ ಮೂಲಕ ಕೋರುವುದು.

* ಜಿಲ್ಲಾ/ ತಾಲ್ಲೂಕು ಶಾಖೆ ಅಧ್ಯಕ್ಷರು ಖಜಾನಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಶೇ.100 ರಷ್ಟು ಸದಸ್ಯತ್ವ ಶುಲ್ಕ ಕಟಾವುಗೊಳಿಸುವ ಗುರಿ ಸಾಧಿಸುವುದು.

* ಖಜಾನೆ-2 ಮತ್ತು ಹೆಚ್.ಆರ್.ಎಂ.ಎಸ್. ತಂತ್ರಾಂಶ ಅವಳಡಿಸದಿರುವ ಕೆಲವು ಇಲಾಖೆಗಳ ನೌಕರರ ವೇತನದಿಂದ ಕಟಾಯಿಸಲಾದ ಸದಸ್ಯತ್ವ ಶುಲ್ಕದ ಮೊತ್ತವನ್ನು ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಇವರಿಗೆ ಪಾವತಿಯಾಗುವಂತೆ ಚೆಕ್/ ಡಿಡಿ ಮೂಲಕ ನೀಡುವುದು.

* ಚೆಕ್/ ಡಿಡಿ/ ನಗದು ರೂಪದಲ್ಲಿ ಸಂಗ್ರಹಿಸಲ್ಪಟ್ಟ ಸದಸ್ಯತ್ವ ಶುಲ್ಕವನ್ನು ವಿಳಂಬ ಮಾಡದೆ ಕೇಂದ್ರ ಸಂಘಕ್ಕೆ ಸಲ್ಲಿಸುವುದು ಎಂದು ತಿಳಿಸಲಾಗಿದೆ.

ಮಾದರಿ ಮನವಿ ಪತ್ರ

ಗೆ
ಖಜಾನಾಧಿಕಾರಿಗಳು/ ವೇತನ ಬಟವಾಡೆ ಅಧಿಕಾರಿ,
ಜಿಲ್ಲಾ ಖಜಾನೆ ಉಪ ಖಜಾನೆ

ಮಾನ್ಯರೇ,

ವಿಷಯ: ಸರ್ಕಾರದ ಆದೇಶದಂತೆ 2025ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯತ್ವ ಶುಲ್ಕವನ್ನು ಜನವರಿ ಅಥವಾ ಫೆಬ್ರವರಿ ಮಾಹೆಯ ವೇತನದಲ್ಲಿ ಕಟಾವುಗೊಳಿಸಿ ರಾಜ್ಯ ಸಂಘದ ಬ್ಯಾಂಕ್ ಖಾತೆಗೆ ಜಮಾಗೊಳಿಸುವ ಬಗ್ಗೆ.

ಉಲ್ಲೇಖ: ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 8 ಸೇಸವಿ 2019, ದಿ: 04-11-2019

ವಿಷಯಕ್ಕೆ ಸಂಬಂಧಿಸಿದಂತೆ, ಸರ್ಕಾರವು ಉಲ್ಲೇಖಿತ ಆದೇಶದನ್ವಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯತ್ವ ಶುಲ್ಕ ರೂ. 200/-ಗಳನ್ನು ಪ್ರತೀ ವರ್ಷದ ಜನವರಿ ಅಥವಾ ಫೆಬ್ರವರಿ ಮಾಹೆಯ ನೌಕರರ ವೇತನದಲ್ಲಿ ಕಟಾವುಗೊಳಿಸಿ ಕೇಂದ್ರ ಸಂಘದ ಬ್ಯಾಂಕ್ ಖಾತೆಗೆ ಜಮೆಗೊಳಿಸಲು ಸೂಚಿಸಿರುತ್ತದೆ.

ಅದರಂತೆ 2025ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯತ್ವ ಶುಲ್ಕವನ್ನು ನೌಕರರ ಜನವರಿ ಅಥವಾ ಫೆಬ್ರವರಿ ಮಾಹೆಯ ವೇತನದಲ್ಲಿ ಕಟಾವುಗೊಳಿಸಿ ಈ ಕೆಳಕಂಡ ಬ್ಯಾಂಕ್ ಖಾತೆಗೆ ಜಮೆಗೊಳಿಸಲು ತಮ್ಮಲ್ಲಿ ಕೋರಿದೆ.

ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,

ಜಿಲ್ಲಾಧ್ಯಕ್ಷರು/ತಾಲ್ಲೂಕು/ಯೋಜನಾ ಶಾಖೆ ಅಧ್ಯಕ್ಷರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+