Government employee; ಸಾಂದರ್ಭಿಕ ರಜೆ ಮಿತಿಯ ಆದೇಶ

ಬೆಂಗಳೂರು, ಮೇ 17; ಕರ್ನಾಟಕ ಸರ್ಕಾರ ಸರ್ಕಾರಿ ನೌಕರರು ಒಂದು ಬಾರಿಗೆ ಪಡೆಯಬಹುದಾದ ಗರಿಷ್ಠ ಸಾಂದರ್ಭಿಕ ರಜೆಯ ಮಿತಿಯನ್ನು ನಿರ್ಬಂಧಿಸುವ ಬಗ್ಗೆ ಆದೇಶ ಹೊರಡಿಸಿದೆ. ಸಾಂದರ್ಭಿಕ ರಜೆಯ ಅರ್ಹತೆ ಮತ್ತು ಮಂಜೂರಾತಿ ಬಗ್ಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ಅನುಬಂಧ-ಬಿ ರಲ್ಲಿನ ಇತರೆ ಷರತ್ತುಗಳು ಮುಂದುವರೆಯುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ-2 ಜಿ. ಜಿ. ಹೇಮಣ್ಣ ಈ ಕುರಿತು ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ 15 ದಿವಸಗಳ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಆದೇಶಿಸಲಾಗಿತ್ತು. ನಂತರ, 15 ದಿವಸಗಳ ಸಾಂದರ್ಭಿಕ ರಜೆಯನ್ನು 10 ದಿವಸಗಳಿಗೆ ಇಳಿಸಿ ಆದೇಶಿಸಲಾಗಿದೆ ಎಂದು ಹೇಳಿದೆ.

Occasional Leave Restrictions

ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ಅನುಬಂಧ-ಬಿ ಯ ನಿಯಮ(1) ರನ್ವಯ 15 ದಿನಗಳ ಸಾಂದರ್ಭಿಕ ರಜೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಒಂದು ಬಾರಿಗೆ ಪಡೆಯಬಹುದಾದ ಗರಿಷ್ಠ ಸಾಂದರ್ಭಿಕ ರಜೆಯ ಮಿತಿಯನ್ನು 7 ದಿನಗಳಿಗೆ ಸೀಮಿತಗೊಳಿಸಿ, ಸಾರ್ವತ್ರಿಕ ರಜೆಯೊಂದಿಗೆ ಸಂಯೋಜಿಸಿದಾಗ ಈ ಅವಧಿಯನ್ನು 10 ದಿವಸಗಳಿಗೆ ನಿರ್ಭಂದಿಸಿ ಅವಕಾಶ ಕಲ್ಪಿಸಲಾಗಿತ್ತು.

ಸಾಂದರ್ಭಿಕ ರಜೆಯನ್ನು 10 ದಿವಸಗಳಿಗೆ ಇಳಿಸಿರುವ ಹಿನ್ನೆಲೆಯಲ್ಲಿ ಒಂದು ಬಾರಿಗೆ ಪಡೆಯಬಹುದಾದ ಗರಿಷ್ಠ ಸಾಂದರ್ಭಿಕ ರಜೆಯನ್ನು 5 ದಿನಗಳೆಂದು ನಿರ್ಬಂಧಿಸಲು ಹಾಗೂ ಸಾರ್ವತ್ರಿಕ ರಜೆಯೊಂದಿಗೆ ಸಂಯೋಜಿಸಿದಾಗ ಈ ಅವಧಿಯನ್ನು 8 ದಿವಸಗಳಿಗೆ ನಿರ್ಭಂದಿಸಿ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಆದ್ದರಿಂದ, ಈ ಆದೇಶವನ್ನು ಹೊರಡಿಸಿದೆ.

Occasional Leave Restrictions

ಆದೇಶದಲ್ಲಿ ಏನಿದೆ?; ಸರ್ಕಾರ ಅದೇಶ ಸಂಖ್ಯೆ ದಿನಾಂಕ 15/10/2020 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ಅನುಬಂಧ-ಬಿ ಯಲ್ಲಿನ ಸಾಂದರ್ಭಿಕ ರಜೆಯ ಮಂಜೂರಾತಿ ಬಗ್ಗೆ ಈ ಕೆಳಕಂಡಂತೆ ಓದಿಕೊಳ್ಳತಕ್ಕದ್ದು ಎಂದು ತಿಳಿಸಲಾಗಿದೆ.

ಪ್ರಸ್ತುತ ಅನುಬಂಧ-ಬಿ ಯಲ್ಲಿರುವ ಅವಕಾಶ; ಅನುಬಂಧ-ಬಿ ಯ ನಿಯಮ (1)ರಲ್ಲಿ ಪ್ರತಿ ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ 10 ದಿನಗಳ ಕ್ಯಾಲೆಂಡರ್ ವರ್ಷದಲ್ಲಿ 15 ದಿನಗಳ ಸಾಂದರ್ಭಿಕ | ಸಾಂದರ್ಭಿಕ ರಜೆಯನ್ನು ಮಂಜೂರು ರಜೆಯನ್ನು ಮಂಜೂರು ಮಾಡಬಹುದು. ಆದರೆ ಮಾಡಬಹುದು. ಆದರೆ ಒಂದು ಬಾರಿಗೆ 5 ಒಂದು ಬಾರಿಗೆ 7 ದಿನಗಳಿಗಿಂತ ಹೆಚ್ಚಿಗೆ ರಜೆ ದಿನಗಳಿಗಿಂತ ಹೆಚ್ಚಿಗೆ ರಜೆ ಮಂಜೂರು ಮಂಜೂರು ಮಾಡತಕ್ಕದ್ದಲ್ಲ. ಮಾಡತಕ್ಕದ್ದಲ್ಲ ಎಂದು ಇದೆ.

ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ 10 ದಿನಗಳ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಬಹುದು. ಆದರೆ ಒಂದು ಬಾರಿಗೆ 5 ದಿನಗಳಿಗಿಂತ ಹೆಚ್ಚಿಗೆ ರಜೆ ಮಂಜೂರು ಮಾಡತಕ್ಕದ್ದಲ್ಲ.

ಅನುಬಂಧ-ಬಿ ಯ ನಿಯಮ (1)ರಲ್ಲಿನ ಟಿಪ್ಪಣಿಯಲ್ಲಿ ಬರುವ ಗೊತ್ತಿರುವ 15 ದಿನಗಳ ಪರಿಮಿತಿಗೆ ಒಳಪಟ್ಟು ಎಂದು ಇರುವುದನ್ನು, ಗೊತ್ತು ಪಡಿಸಿದ 10 ದಿನಗಳ ಪರಿಮಿತಿಗೆ ಒಳಪಟ್ಟು ಎಂದು ಓದಿಕೊಳ್ಳಬೇಕು.

ಅನುಬಂಧ-ಬಿ ಯ ನಿಯಮ (2) ರಲ್ಲಿನ ಭಾನುವಾರ ಮತ್ತು ರಜಾ ದಿನಗಳನ್ನು ಬಿಟ್ಟು ಭಾನುವಾರ ಮತ್ತು ರಜಾ ದಿನಗಳನ್ನು ಬಿಟ್ಟು, ಒಂದು ಗೈರು ಹಾಜರಿಯ ಅವಧಿಯಲ್ಲಿ ಐದು ಒಂದು ಗೈರು ಹಾಜರಿಯ ಅವಧಿಯಲ್ಲಿ ಏಳು (5) ದಿನಗಳಿಗಿಂತ ಹೆಚ್ಚು ದಿನದ ಸಾಂದರ್ಭಿಕ ದಿನಗಳಿಗಿಂತ ಹೆಚ್ಚು ದಿನದ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡತಕ್ಕದ್ದಲ್ಲ. ಅಷ್ಟೇ ಅಲ್ಲದೇ ಅಂಥ ಗೈರು ಹಾಜರಿಯ ಅವಧಿಯ ಯಾವ ಸಂದರ್ಭದಲ್ಲೂ ಹತ್ತು ದಿನಗಳಿಗೆ ಮೀರಬಾರದು.

ಭಾನುವಾರ ಮತ್ತು ರಜಾ ದಿನಗಳನ್ನು ಬಿಟ್ಟು ಒಂದು ಗೈರು ಹಾಜರಿಯ ಅವಧಿಯಲ್ಲಿ ಐದು ದಿನಗಳಿಗಿಂತ ಹೆಚ್ಚು ದಿನದ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡತಕ್ಕದ್ದಲ್ಲ. ಅಷ್ಟೇ ಅಲ್ಲದೇ ಅಂಥ ಗೈರು ಹಾಜರಿಯ ಅವಧಿಯು ಯಾವ ಸಂದರ್ಭದಲ್ಲೂ ಎಂಟು ದಿನಗಳಿಗೆ ಮೀರಿರಬಾರದು.

ಅನುಬಂಧ-ಬಿ ಯ ನಿಯಮ (4) ರಲ್ಲಿ ಬರುವ ಒಂದು ಬಾರಿಗೆ 7 ದಿನಗಳ ಪರಿಮಿತಿಯು. ಒಂದು ದಾರಿಗೆ 5 ದಿನಗಳ ಪರಿಮಿತಿಯು ಎಂದು ಓದಿಕೊಳ್ಳತಕ್ಕದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+