49 ಹೊಸ ತಾಲೂಕುಗಳು 2018 ಜನವರಿಯಲ್ಲಿ ಅಸ್ತಿತ್ವಕ್ಕೆ
ಬೆಂಗಳೂರು, ಸೆಪ್ಟೆಂಬರ್, 07 : ಈಗಾಗಲೇ ಘೋಷಿಸಲಾಗಿರುವ ಹೊಸ 49 ತಾಲೂಕುಗಳನ್ನು ರಚಿಸಿ ರಾಜ್ಯ ಸರ್ಕಾರ ಗುರುವಾರ (ಸೆ.07) ಅಧಿಕೃತ ಆದೇಶ ಹೊರಡಿಸಿದೆ.
ತಾಲೂಕುಗಳ ರಚನೆಗೆ ಸರ್ಕಾರ ಕಂದಾಯ ಇಲಾಖೆಗೆ ಆದೇಶಿಸಿದ್ದು, ಜನವರಿ 2018ರ ವೇಳೆ ಈ ಹೊಸ ತಾಲೂಕುಗಳು ಅಸ್ತಿತ್ವಕ್ಕೆ ಬರಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 2017-18ನೇ ಸಾಲಿನ ಬಜೆಟ್ ಭಾಷಣದ ವೇಳೆ 21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳು ರಚನೆಯಾಗಲಿದೆ ಎಂದು ಘೋಷಿಸಿದ್ದರು. ಹೊಸ ತಾಲೂಕುಗಳು ಈ ಕೆಳಗಿನಂತಿವೆ.

* ಬಾಗಲಕೋಟೆ - ಗುಳೇದ ಗುಡ್ಡ, ರಬಕವಿ, ಬನಹಟ್ಟಿ, ಇಳಕಲ್
* ಬೆಳಗಾವಿ - ನಿಪ್ಪಾಣಿ, ಕಾಗವಾಡ * ಚಾಮರಾಜನಗರ - ಹನೂರು * ದಾವಣಗೆರೆ - ನ್ಯಾಮತಿ
* ಬೀದರ್ - ಚಿಟಗುಪ್ಪ, ಹುಲಸೂರು, ಕಮಲಾನಗರ * ಬಳ್ಳಾರಿ - ಕುರುಗೋಡು, ಕೊಟ್ಟೂರು, ಕಂಪ್ಲಿ * ಧಾರವಾಡ - ಅಣ್ಣಿಗೇರಿ, ಅಳ್ನಾವರ, ಹುಬ್ಬಳ್ಳಿ ನಗರ * ಗದಗ - ಗಜೇಂದ್ರಗಡ, ಲಕ್ಷ್ಮೇಶ್ವರ
* ಕಲಬುರಗಿ - ಕಾಳಗಿ, ಕಮಲಾಪುರ, ಯಡ್ರಾಮಿ, ಶಹಾಭಾದ್ * ಯಾದಗಿರಿ - ಹುಣಸಗಿ, ವಡಗೇರಾ, ಗುರುಮಿಟ್ಕಲ್ * ಕೊಪ್ಪಳ - ಕುಕನೂರು, ಕನಕಗಿರಿ, ಕಾರಟಗಿ * ರಾಯಚೂರು - ಮಸ್ಕಿ, ಸಿರಾವರ
* ಉಡುಪಿ - ಬ್ರಹ್ಮಾವರ, ಕಾಪು, ಬೈಂದೂರು, ಹೆಬ್ರಿ * ದಕ್ಷಿಣ ಕನ್ನಡ - ಮೂಡಬಿದರೆ, ಕಡಬ * ಬೆಂಗಳೂರು ನಗರ - ಯಲಹಂಕ * ವಿಜಯಪುರ - ಬಬಲೇಶ್ವರ, ನಿಡಗುಂದಿ, ತಿಕೋಟ, ದೇವರಹಿಪ್ಪರಗಿ, ತಾಳಿಕೋಟೆ, ಚಡಚಣ, ಕೋಲ್ಹಾರ * ಹಾವೇರಿ - ರಟ್ಟಿಹಳ್ಳಿ
* ಮೈಸೂರು - ಸರಗೂರು * ಚಿಕ್ಕಮಗಳೂರು - ಅಜ್ಜಂಪುರ * ಉತ್ತರ ಕನ್ನಡ - ದಾಂಡೇಲಿ * ಕೋಲಾರ - ಕೆಜಿಎಫ್.
#Karnataka to have 49 new taluks from January 2018. #Yelahanka will be new taluk in #Bengaluru. @CMofKarnataka had assured in budget speech. pic.twitter.com/7Ne86sSiow
— NEWS9 (@NEWS9TWEETS) September 7, 2017












Click it and Unblock the Notifications