Karnataka Reservoirs: ರಾಜ್ಯದ ಡ್ಯಾಂಗಳಲ್ಲಿ ಒಳಹರಿವುಗಿಂತ ಹೊರಹರಿವು ಹೆಚ್ಚಳ, ವರದಿ
ಬೆಂಗಳೂರು, ಆಗಸ್ಟ್ 13: ಕರ್ನಾಟಕ ರಾಜ್ಯದಲ್ಲಿ ಜುಲೈ ತಿಂಗಳಿನಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನದಿಗಳು ಹಾಗೂ ಪ್ರಮುಖ ಜಲಾಶಯಗಳ ಒಳಹರಿವು ಏರಿಕೆ ಆಗಿದೆ. ಇದೀಗ ಬಹುತೇಕ ಎಲ್ಲ ಜಲಾಶಯಗಳು ಭರ್ತಿಯಾದ ಕಾರಣ ಹೊರ ಹರಿವಿನ ಪ್ರಮಾಣದಲ್ಲಿ ಭಾರೀ ಏರಿಕೆ ಆಗಿದೆ. ವಿವಿಧ ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತಿದೆ. ಹಾಗಾದರೆ ಯಾವ ಡ್ಯಾಂಗಳಿಂದ ಎಷ್ಟು ನೀರು ಹೊರ ಹೋಗುತ್ತಿದೆ. ಇಂದಿನ (ಆಗಸ್ಟ್ 13) ಮಟ್ಟ ಎಷ್ಟು? ಎಂಬ ಮಾಹಿತಿ ಇಲ್ಲಿದೆ.
ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಲಿಂಕ್ ಒಡೆದು ಹೋದ ಪರಿಣಾಮ ದುರಸ್ತಿ ಕಾರ್ಯ ನಡೆದಿದೆ. ಬದಲಿ ಗೇಟ್ ತಯಾರಿಸಿ ಅಳವಡಿಸಲಾಗುತ್ತಿದೆ. ಈ ಸಂಬಂಧ ಅಪಾರ ಪ್ರಮಾಣ ನೀರನ್ನು ಸೋಮವಾರ ಬೆಳಗ್ಗೆಯಿಂದಲೇ ಹೊರ ಬಿಡಲಾಗುತ್ತಿದೆ.

ಹೇಮಾವತಿ, ಕೆಆರ್‌ಎಸ್, ಕಬಿನಿ ಸೇರಿದಂತೆ ಇನ್ನಿತರ ಜಲಾಶಯಗಳಲ್ಲಿ ಸಹ ಹೊರ ಹರಿವು ಹೆಚ್ಚಳವಾಗಿದೆ. ಕೃಷ್ಣ ರಾಜ ಸಾಗರ (KRS) ಅಣೆಕಟ್ಟಿನಲ್ಲಿ ಒಳಹರಿವು 14,190 ಕ್ಯೂಸೆಕ್ ಇದ್ದು, ಹೊರಹರಿವು ಒಟ್ಟು 15,251 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕೆಆರ್‌ಎಸ್ ಒಟ್ಟು ಸಾಮರ್ಥ್ಯ 49.452 ಟಿಎಂಸಿ ಇದ್ದು, ಅದರಲ್ಲಿ ಈವರೆಗೆ 46.996 ರಷ್ಟು ನೀರು ಸಂಗ್ರಹವಾಗಿದೆ.
* ಹೇಮಾವತಿ ಜಲಾಶಯವು ಒಟ್ಟು 37.10 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಅದರಲ್ಲಿ ಇವತ್ತಿನವರೆಗೆ 35.943 ಟಿಎಂಸಿ ನೀರು ಸಂಗ್ರಹವಾಗಿದೆ. ಇಂದು ಮಂಗಳವಾರ ಒಳಹರಿವು 9977 ಕ್ಯೂಸೆಕ್ ರಷ್ಟಿದ್ದರೆ, ಹೊರ ಹರಿವು 9375 ಕ್ಯೂಸೆಕ್ ರಷ್ಟು ನೀರನ್ನು ನದಿ ಹಾಗೂ ಕಾಲುವೆಗೆ ಬಿಡಲಾಗುತ್ತಿದೆ.
* ಇನ್ನು ಕಬಿನಿ ಜಲಾಶಯವು ಒಟ್ಟು 19.52 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದರೆ, ಇಂದಿಗೆ 18.68 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಈ ಡ್ಯಾಂನಿಂದ ಮಂಗಳವಾರ ಒಟ್ಟು 6350 ಕ್ಯೂಸೆಕ್ ನೀರನ್ನು ಕಾಲುವೆ ಹಾಗೂ ನದಿಗೆ ಬಿಡಲಾಗಿದೆ. ಇದರ ಒಟ್ಟು ಒಳಹರಿವು 5526 ಕ್ಯೂಸೆಕ್ ನಷ್ಟಿದೆ. ಸದ್ಯ ಕಬಿನಿ ಜಲಾಶಯದ ಜಲಾಯನಯನ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ 5 ಮಿ.ಮೀ. ಮಳೆ ದಾಖಲಾಗಿದೆ.
* ಲಿಂಗನಮಕ್ಕಿ ಜಲಾಶಯವು ಒಟ್ಟು 151.64 ಟಿಎಂಸಿ ನೀರನ್ನು ಸಂಗ್ರಹಿಸುವ ಸಾಮಥ್ಯ್ ಹೊಂದಿದೆ. ಈಗಾಗಲೇ ಬಿದ್ದ ಮಳೆಯಿಂದಾಗಿ ಈವರೆಗೆ ಡ್ಯಾಂನಲ್ಲಿ 143.74 ಟಿಎಂಸಿ ನೀರು ಇದೆ. ಒಳಹರಿವು 7741 ಕ್ಯೂಸೆಕ್ ನಷ್ಟಿದ್ದರೆ, ಹೊರ ಹರಿವು 7619 ಕ್ಯೂಸೆಕ್ ರಷ್ಟಿದೆ.
* ಭದ್ರಾ ಜಲಾಶಯದ ಒಟ್ಟು 71.5 ಟಿಎಂಸಿ ಸಾಮರ್ಥ್ಯದಲ್ಲಿ ಇವತ್ತಿನವರೆಗೆ 64.32 ಟಿಎಂಸಿ ನೀರು ತುಂಬಿಕೊಂಡಿದೆ. ಭತಿಗೆ ಕೆಲವೇ ಟಿಎಂಟಿ ನೀರು ಅಗತ್ಯವಿದೆ. ಮುಂದಿನ ದಿನಗಳಲ್ಲಿ ಅತ್ಯಧಿಕ ಮಳೆ ನಿರೀಕ್ಷೆ ಇದ್ದು ಆಗ ಡ್ಯಾಂ ಸಂಪೂರ್ಣ ಭರ್ತಿಯಾಗಲಿದೆ. ಇನ್ನೂ ಈ ಡ್ಯಾಂ 6075 ಕ್ಯೂಸೆಕ್ ಇದ್ದರೆ, ಹೊ ಹರಿವು 7811 ಕ್ಯೂಸೆಕ್ ನಷ್ಟಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಮಾಹಿತಿ ನೀಡಿದೆ.












Click it and Unblock the Notifications