Karnataka Opinion Poll: ಪಬ್ಲಿಕ್ ಟಿವಿ ಪ್ರಾಂತ್ಯಾವಾರು ಸಮೀಕ್ಷಾ ಫಲಿತಾಂಶ: ಯಾರಿಗೆ ಎಷ್ಟು ಸ್ಥಾನ ಇಲ್ಲಿದೆ ಮಾಹಿತಿ
ಬೆಂಗಳೂರು, ಮಾರ್ಚ್ 30: ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಅಬ್ಬರ ಪ್ರಚಾರದ ನಡುವೆ ರಾಜಕೀಯ ಪಕ್ಷಗಳು ಗೆಲುವಿನ ಲೆಕ್ಕಾಚಾರವನ್ನ ಹಾಕಿಕೊಂಡಿವೆ. ಇತ್ತ ಈ ಬಾರೀ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಹಲವು ತಂತ್ರಗಾರಿಕೆಯನ್ನ ನಡೆಸಿದೆ.
ಈ ಬಾರಿಯ 2023ರ ವಿಧಾನಸಭಾ ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಈಗಾಗಲೇ ಹಲವು ಸಮೀಕ್ಷೆಗಳನ್ನ ನಡೆಸಿರುವ ರಾಜಕೀಯ ಪಕ್ಷಗಳಿಗೆ ಸರ್ವೆಯಿಂದ ಆಘಾತವಾಗಿದ್ದು, ಇನ್ನೂ ಚುನಾವಣಾ ತಯಾರಿಯನ್ನು ಚುರುಕುಗೊಳಿಸಿವೆ. ಇದೀಗ ಪಬ್ಲಿಕ್ ಟಿವಿಯ ಪ್ರಾಂತ್ಯಾವಾರು ಸಮೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಸರ್ವೆಯ ಮಾಹಿತಿ ಇಲ್ಲಿದೆ.

ಹಳೆ ಮೈಸೂರು ಭಾಗದಲ್ಲಿ ಯಾರಿಗೆ ವಿಜಯ?
ಹಳೆ ಮೈಸೂರು ಭಾಗ ಅಂದ್ರೆ ಮೊದಲಿನಿಂದಲ್ಲೂ ಜೆಡಿಎಸ್ ಭದ್ರಕೋಟೆಯಾಗಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಈ ಬಾರಿಯೂ ಕಮಾಲ್ ಮಾಡುವ ಸಾಧ್ಯತೆಯಿದೆ. ಇನ್ನೂ 2023 ರ ವಿಧಾನಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ತಂತ್ರಗಾರಿಕೆಯನ್ನ ಬಿಜೆಪಿ ನಡೆಸಿರೂ ಕಳೆದ ಬಾರಿಯಷ್ಟೇ ಈ ಬಾರಿಯೂ ಸ್ಥಾನ ಪಡೆಯಬಹುದು ಎಂದು ಪಬ್ಲಿಕ್ ಟಿವಿ ಸಮೀಕ್ಷೆ ತಿಳಿಸಿದೆ. ಕಳೆದ ಬಾರಿಗೆ ಹೋಲಿಸಿದರೆ ಕಾಂಗ್ರೆಸ್ 2 ಸ್ಥಾನ ಹೆಚ್ಚುವರಿ ಗಳಿಸಿದರೆ ಜೆಡಿಎಸ್ 1 ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ.
ಹಳೆ ಮೈಸೂರು ಒಟ್ಟು 57 ಕ್ಷೇತ್ರಗಳ ಪೈಕಿ ಬಿಜೆಪಿ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ 17 ರಿಂದ 19 ಕ್ಷೇತ್ರಗಳಲ್ಲಿ ಗೆಲ್ಲಲಿದ್ದು, ಜೆಡಿಎಸ್ 26 ರಿಂದ 27 ಕ್ಷೇತ್ರಗಳಲ್ಲಿ ಹಾಗೂ ಸ್ವತಂತ್ರ ಅಭ್ಯರ್ಥಿಗಳು 1 ರಿಂದ 2 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದೆ ಎಂದು ಪಬ್ಲಿಕ್ ಟಿವಿ ಸರ್ವೆ ಅಂದಾಜಿಸಲಾಗಿದೆ.
ಚಾಮರಾಜನಗರ ಒಟ್ಟು ಕ್ಷೇತ್ರಗಳು 04
ಬಿಜೆಪಿ - 1
ಕಾಂಗ್ರೆಸ್ - 3
ಜೆಡಿಎಸ್ - 0
ಇತರೆ - 0
ಕೊಡಗು ಒಟ್ಟು ಕ್ಷೇತ್ರಗಳು 02
ಬಿಜೆಪಿ - 2
ಕಾಂಗ್ರೆಸ್ - 0
ಜೆಡಿಎಸ್ - 0

ಮೈಸೂರು ಒಟ್ಟು ಕ್ಷೇತ್ರಗಳು 11
ಬಿಜೆಪಿ - 2
ಕಾಂಗ್ರೆಸ್ - 4
ಜೆಡಿಎಸ್ - 5
ಮಂಡ್ಯ ಒಟ್ಟು ಕ್ಷೇತ್ರಗಳು 07
ಬಿಜೆಪಿ - 0
ಕಾಂಗ್ರೆಸ್ - 2
ಜೆಡಿಎಸ್ - 5
ರಾಮನಗರ ಒಟ್ಟು ಕ್ಷೇತ್ರಗಳು 04
ಬಿಜೆಪಿ - 0
ಕಾಂಗ್ರೆಸ್ -1
ಜೆಡಿಎಸ್- 3
ಹಾಸನ ಒಟ್ಟು ಕ್ಷೇತ್ರಗಳು 7
ಬಿಜೆಪಿ -1
ಕಾಂಗ್ರೆಸ್ - 1
ಜೆಡಿಎಸ್ - 5
ತುಮಕೂರು ಒಟ್ಟು ಕ್ಷೇತ್ರಗಳು 11
ಬಿಜೆಪಿ - 4
ಕಾಂಗ್ರೆಸ್ -3
ಜೆಡಿಎಸ್ - 4
ಚಿಕ್ಕಬಳ್ಳಾಪುರ ಒಟ್ಟು ಕ್ಷೇತ್ರಗಳು 5
ಬಿಜೆಪಿ - 1
ಕಾಂಗ್ರೆಸ್ -2
ಜೆಡಿಎಸ್ -1
ಇತರೆ -1
ಕೋಲಾರ ಒಟ್ಟು ಕ್ಷೇತ್ರಗಳು 6
ಬಿಜೆಪಿ -0
ಕಾಂಗ್ರೆಸ್ -3
ಜೆಡಿಎಸ್- 3
ಇತರೆ -0
ಕರಾವಳಿಯಲ್ಲಿ ಈ ಬಾರಿ ಗೆಲುವು ಯಾರಿಗೆ?
ಕರಾವಳಿ ಕರ್ನಾಟಕ ಬಿಜೆಪಿಯ ಭದ್ರಕೋಟೆ. ಕಳೆದ ಬಾರಿಯಂತೆ ಈ ಬಾರಿಯೂ ರಾಜಕೀಯ ಪಕ್ಷಗಳ ನಡುವೆ ಬಾರೀ ಸ್ಪರ್ಧೆ ಏರ್ಪಡಲಿದ್ದು, ಈ ಚುನಾವಣೆಯಲ್ಲೂ ಹಿಂದೂತ್ವದ ಅಲೆ ಇರುವ ಕಾರಣ ಮೂರು ಜಿಲ್ಲೆಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ ಎರಡನೇ ಸ್ಥಾನ ಪಡೆದರೆ ಜೆಡಿಎಸ್ ಶೂನ್ಯ ಸಾಧನೆ ಮಾಡಲಿದೆ. ಕರಾವಳಿ ಕರ್ನಾಟಕ ಒಟ್ಟು 19 ಕ್ಷೇತ್ರಗಳಲ್ಲಿ ಬಿಜೆಪಿ 16 ಕ್ಷೇತ್ರಗಳನ್ನ ಹಾಗೂ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸರ್ವೆಯಿಂದ ತಿಳಿದು ಬಂದಿದೆ.

ದಕ್ಷಿಣ ಕನ್ನಡ ಒಟ್ಟು ಕ್ಷೇತ್ರಗಳು 8
ಬಿಜೆಪಿ - 7
ಕಾಂಗ್ರೆಸ್ - 1
ಜೆಡಿಎಸ್ - 0
ಉಡುಪಿ ಒಟ್ಟು ಕ್ಷೇತ್ರಗಳು 5
ಬಿಜೆಪಿ - 5
ಕಾಂಗ್ರೆಸ್ - 0
ಜೆಡಿಎಸ್ - 0
ಉತ್ತರ ಕನ್ನಡ ಒಟ್ಟು ಕ್ಷೇತ್ರಗಳು 6
ಬಿಜೆಪಿ - 4
ಕಾಂಗ್ರೆಸ್ - 2
ಜೆಡಿಎಸ್ - 0
ಕಲ್ಯಾಣ ಕರ್ನಾಟಕದಲ್ಲಿ ಈ ಬಾರಿ ಜಯ ಯಾರಿಗೆ?
ಆಡಳಿತರೂಢ ಬಿಜೆಪಿಗೆ ಈ ಬಾರೀ ಕಲ್ಯಾಣ ಕರ್ನಾಟಕದಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ. ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆದರೆ ಜೆಡಿಎಸ್ 1 ಕ್ಷೇತ್ರವನ್ನು ಕಳೆದುಕೊಳ್ಳಲಿದೆ. ಮೂಡ್ ಆಫ್ ಕರ್ನಾಟಕದ ಪ್ರಕಾರ ಕಾಂಗ್ರೆಸ್ 25 ಕ್ಷೇತ್ರಗಳನ್ನು ಗೆದ್ದರೆ ಬಿಜೆಪಿ 12, ಜೆಡಿಎಸ್ 3, ಜನಾರ್ದನ ರೆಡ್ಡಿ ಈ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯಿದೆ.

ಬೀದರ್ ಒಟ್ಟು ಕ್ಷೇತ್ರಗಳು 6
ಬಿಜೆಪಿ - 3
ಕಾಂಗ್ರೆಸ್ - 2
ಜೆಡಿಎಸ್- 1
ಕಲಬುರಗಿ ಒಟ್ಟು ಕ್ಷೇತ್ರಗಳು 9
ಬಿಜೆಪಿ - 3
ಕಾಂಗ್ರೆಸ್ - 6
ಜೆಡಿಎಸ್- 0
ರಾಯಚೂರು ಒಟ್ಟು ಕ್ಷೇತ್ರಗಳು 7
ಬಿಜೆಪಿ - 0
ಕಾಂಗ್ರೆಸ್ - 5
ಜೆಡಿಎಸ್ - 2
ಯಾದಗಿರಿ ಒಟ್ಟು ಕ್ಷೇತ್ರಗಳು 4
ಬಿಜೆಪಿ - 1
ಕಾಂಗ್ರೆಸ್ - 3
ಜೆಡಿಎಸ್- 0
ಬಳ್ಳಾರಿ ಒಟ್ಟು ಕ್ಷೇತ್ರಗಳು 5
ಬಿಜೆಪಿ - 1
ಕಾಂಗ್ರೆಸ್ - 4
ಜೆಡಿಎಸ್ - 0
ವಿಜಯನಗರ ಒಟ್ಟು ಕ್ಷೇತ್ರಗಳು 5
ಬಿಜೆಪಿ - 3
ಕಾಂಗ್ರೆಸ್ - 2
ಜೆಡಿಎಸ್ -0
ಕೊಪ್ಪಳ ಒಟ್ಟು ಕ್ಷೇತ್ರಗಳು 5
ಬಿಜೆಪಿ - 1
ಕಾಂಗ್ರೆಸ್ - 3
ಜೆಡಿಎಸ್ - 0
ಇತರೆ - 1
Disclaimer: ಈ ಲೇಖನವನ್ನು ಪಬ್ಲಿಕ್ ಟಿವಿ ನಡೆಸಿದ ಸಮೀಕ್ಷೆ ಅಂಕಿಅಂಶ ಆಧಾರದಲ್ಲಿ ಬರೆಯಲಾಗಿದೆ.












Click it and Unblock the Notifications