LokPoll ಸಮೀಕ್ಷೆ; ಬಿಜೆಪಿಗೆ ಮುಖಭಂಗ, ಕಾಂಗ್ರೆಸ್‌ ಅತಿದೊಡ್ಡ ಪಕ್ಷ

ಬೆಂಗಳೂರು, ಮೇ 6; ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ಮೇ 10ರ ಬುಧವಾರ ನಡೆಯಲಿದೆ. ಮತದಾನಕ್ಕೆ 4 ದಿನಗಳ ಮೊದಲು LokPoll ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಮುಖಭಂಗವಾಗಲಿದೆ ಎಂದು ಸಮೀಕ್ಷೆಯ ವರದಿ ಹೇಳಿದೆ.

ಶನಿವಾರ LokPoll ಕರ್ನಾಟಕದ 2023ರ ಚುನಾವಣೆಯ ಕುರಿತು ಅಂತಿಮ ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶವನ್ನು ಪ್ರಕಟಿಸಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಅಗತ್ಯವಿರುವ ಮ್ಯಾಜಿಕ್‌ ನಂಬರ್ 113. ಚುನಾವಣೆಗೆ 4 ದಿನಗಳು ಇರುವಾಗ ಪ್ರಕಟಗೊಂಡ ಸಮೀಕ್ಷೆ ಫಲಿತಾಂಶ ಆಡಳಿತ ಪಕ್ಷಕ್ಕೆ ನಿರಾಸೆ ಉಂಟು ಮಾಡಿದೆ. ಪ್ರತಿಪಕ್ಷ ಕಾಂಗ್ರೆಸ್‌ನ ಚುನಾವಣಾ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

Karnataka Elections LokPoll Pre Poll Survey Results

ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿ 59-65 ಸೀಟುಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಕಾಂಗ್ರೆಸ್ 129 ರಿಂದ 134 ಸ್ಥಾನಗಳಲ್ಲಿ ಜಯಗಳಿಸಲಿದೆ. ಜೆಡಿಎಸ್ ಪಕ್ಷ 23 ರಿಂದ 28 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಇತರರು 2 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಸಮೀಕ್ಷೆಯ ಅಂತಿಮ ವರದಿ ಅಂದಾಜಿಸಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಸ್ಪಷ್ಟ ಬಹುಮತದ ಸರ್ಕಾರ ರಚನೆ ಮಾಡಲಿದೆ.

ಮತಗಳಿಕೆ ಪ್ರಮಾಣ ಎಷ್ಟು?; LokPoll ಸಮೀಕ್ಷೆಗಳ ಪ್ರಕಾರ ಬಿಜೆಪಿ ಶೇ 31 ರಿಂದ 32ರಷ್ಟು ಮತ ಪಡೆಯಲಿದೆ. ಕಾಂಗ್ರೆಸ್‌ 42 ರಿಂದ 45ರಷ್ಟು ಮತಗಳನ್ನು ಪಡೆಯಲಿದೆ. ಜೆಡಿಎಸ್ ಶೇ 14 ರಿಂದ 18ರಷ್ಟು ಮತ ಮತ್ತು ಇತರರು ಶೇ 5 ರಿಂದ 8ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಹೇಳಿದೆ.

dk-shivakumar

ಈ ಸಮೀಕ್ಷೆಯನ್ನು ಹೇಗೆ ನಡೆಸಲಾಗಿದೆ? ಎಂದು ಸಹ ಲೋಕ್‌ಪಾಲ್ ಹೇಳಿದೆ. 150 ವಿಧಾನಸಭಾ ಕ್ಷೇತ್ರಗಳಲ್ಲಿ 100 ಮಾದರಿಗಳನ್ನು ಸಂಗ್ರಹ ಮಾಡಲಾಗಿದೆ. 1500 ಕರೆಗಳನ್ನು ಮಾಡುವ ಮೂಲಕ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದೆ. ಕಳೆದ ಎರಡು ತಿಂಗಳಿನಲ್ಲಿ ತಳಮಟ್ಟದಲ್ಲಿ 65 ಸಾವಿರ ಮಾದರಿ ಸಂಗ್ರಹ ಮಾಡಲಾಗಿದೆ. ಒಟ್ಟು ಮೂರು ಬಾರಿ ಮಾಹಿತಿ ಸಂಗ್ರಹ ಮಾಡಿ ಅಂತಿಮ ವರದಿ ಪ್ರಕಟಿಸಲಾಗಿದೆ.

LokPoll ಫೆಬ್ರವರಿ ತಿಂಗಳ ಸಮೀಕ್ಷೆಯಲ್ಲಿ ಬಿಜೆಪಿ 77-83 ಸೀಟುಗಳು, ಮಾರ್ಚ್‌ ತಿಂಗಳ ಸಮೀಕ್ಷೆಯಲ್ಲಿ 66-69 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಅಂದಾಜಿಲಾಗಿತ್ತು. ಆದರೆ ಇಂದು ಪ್ರಕಟವಾಗಿರುವ ಸಮೀಕ್ಷೆ 59-65 ಸೀಟುಗಳಲ್ಲಿ ಪಕ್ಷ ಗೆಲ್ಲಲಿದೆ ಎಂದು ಹೇಳಿದೆ.

ಕಾಂಗ್ರೆಸ್ ಪಕ್ಷ ಫೆಬ್ರವರಿ ಸಮೀಕ್ಷೆಯಲ್ಲಿ 116-122 ಸೀಟು, ಮಾರ್ಚ್‌ನಲ್ಲಿ 128-131 ಸ್ಥಾನದಲ್ಲಿ ಜಯಗಳಿಸಲಿದೆ ಎಂದು ಫಲಿತಾಂಶ ಹೇಳಿತ್ತು. ಶನಿವಾರದ ಅಂತಿಮ ಫಲಿತಾಂಶದಲ್ಲಿ 129-134 ಸ್ಥಾನಗಳಲ್ಲಿ ಗೆಲುವು ಎಂದು ಅಂದಾಜಿಸಲಾಗಿದೆ.

ಜೆಡಿಎಸ್‌ ಫೆಬ್ರವರಿಯಲ್ಲಿ 21-27 ಸೀಟು, ಮಾರ್ಚ್‌ನಲ್ಲಿ 21-25 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ಹೇಳಿತ್ತು. ಮೇ 6ರ ಸಮೀಕ್ಷೆ ಪಕ್ಷಕ್ಕೆ 23-28 ಸೀಟು ನೀಡಿದೆ. ಇತರರು ಫೆಬ್ರವರಿಯಲ್ಲಿ 1-4, ಮಾರ್ಚ್‌ನಲ್ಲಿ 0-2 ಸ್ಥಾನದಲ್ಲಿ ಜಯಗಳಿಸಲಿದ್ದಾರೆ ಎಂಬ ವರದಿ ಬಂದಿತ್ತು. ಇಂದು 0-2 ಸ್ಥಾನಗಳಲ್ಲಿ ಗೆಲುವು ಎಂದು ಅಂದಾಜಿಸಿದೆ.

ಮೇ 10ರ ಬುಧವಾರ ರಾಜ್ಯದ 224 ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ರಾಜ್ಯದಲ್ಲಿ ಚುನಾವಣಾ ಪ್ರಚಾರದ ಕಾವು ಏರಿದ್ದು, ಮೇ 8ರಂದು ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಮೇ 13ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+