ಬಿಜೆಪಿ ಅಭ್ಯರ್ಥಿಗಳ 4ನೇ ಪಟ್ಟಿ : 7 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ

Recommended Video

      Karnataka Elections 2018 : 7 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ 4ನೇ ಪಟ್ಟಿ ಘೋಷಣೆ | Oneindia Kannada

      ಬೆಂಗಳೂರು, ಏಪ್ರಿಲ್ 23 : ಕರ್ನಾಟಕ ಬಿಜೆಪಿ 2018ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನ ಯಶವಂತಪುರ ಕ್ಷೇತ್ರಕ್ಕೆ ನಟ ಜಗ್ಗೇಶ್ ಅಭ್ಯರ್ಥಿಯಾಗಿದ್ದಾರೆ.

      ಸೋಮವಾರ ಮಧ್ಯಾಹ್ನ ಬಿಜೆಪಿ 7 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಇನ್ನೂ 4 ಕ್ಷೇತ್ರಗಳಿಗೆ ಪಕ್ಷ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಾಗಿದೆ. ವರುಣಾ, ಶಿಢ್ಲಘಟ್ಟ, ಸಕಲೇಶಪುರ ಮತ್ತು ಬಾದಾಮಿ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.

      ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಅಭ್ಯರ್ಥಿಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ನಟ ಜಗ್ಗೇಶ್ ಅವರು ಅಭ್ಯರ್ಥಿಯಾಗಿದ್ದಾರೆ.

      4ನೇ ಪಟ್ಟಿಯಲ್ಲಿ ಕನಕಪುರ, ರಾಮನಗರ, ಹಾಸನ, ಭದ್ರಾವತಿ ಸೇರಿದಂತೆ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ರಾಮನಗರದಲ್ಲಿ ಎಚ್.ಡಿ.ಕುಮಾರಸ್ವಾಮಿ ಎದುರಾಳಿಯಾಗಿ ಎಚ್.ಲೀಲಾವತಿ ಅವರು ಸ್ಪರ್ಧಿಸಲಿದ್ದಾರೆ. ಕನಕಪುರದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಎದುರಾಳಿಯಾಗಿ ನಂದಿನಿ ಗೌಡ ಅಭ್ಯರ್ಥಿಯಾಗಿದ್ದಾರೆ.

      Karnataka elections : BJP releases 4th candidates list

      ಅಭ್ಯರ್ಥಿಗಳು

      * ಭದ್ರಾವತಿ : ಜಿ.ಆರ್.ಪ್ರವೀಣ್ ಪಾಟೀಲ್
      * ಯಶವಂತಪುರ : ಜಗ್ಗೇಶ್
      * ಬಿ.ಟಿ.ಎಂ.ಲೇಔಟ್ : ಲಲ್ಲೇಶ್ ರೆಡ್ಡಿ
      * ರಾಮನಗರ : ಎಚ್.ಲೀಲಾವತಿ
      * ಕನಕಪುರ : ನಂದಿನಿ ಗೌಡ
      * ಬೇಲೂರು : ಎಚ್.ಕೆ.ಸುರೇಶ್
      * ಹಾಸನ : ಜೆ. ಪ್ರೀತಮ್ ಗೌಡ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+