ಸ್ಟ್ರಾಂಗ್ ರೂಂನಲ್ಲೇ ಭದ್ರವಾಗುತ್ತೆ ಅಭ್ಯರ್ಥಿಗಳ ಭವಿಷ್ಯ ; ಸ್ಟ್ರಾಂಗ್ ರೂಂ ಎಂದರೇನು? ಅನುಸರಿಸುವ ಟಫ್ ರೂಲ್ಸ್ ಏನು?

ಬೆಂಗಳೂರು, ಮೇ 09: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್‌ ಡೌನ್‌ ಶುರುವಾಗಿದೆ. ರಾಜ್ಯದಲ್ಲಿ ಒಂದು ಹಂತದ ಚುನಾವಣೆಯನ್ನ ನಡೆಸಲು ಚುನಾವಣಾ ಆಯೋಗ ಸಿದ್ದತೆಯನ್ನ ಮಾಡಿಕೊಂಡಿದೆ.

ವಿಧಾನಸಭೆ ಚುನಾವಣೆಯ ಮತದಾನ ಮೇ 10ರ ಬುಧವಾರ ನಡೆಯಲಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ 5,30,85,566 ಜನರು ಈ ಬಾರಿ ಮತದಾನ ಮಾಡಲು ಅರ್ಹರಿದ್ದಾರೆ.

security

ಇನ್ನೂ ಇವಿಎಂ ಮೂಲಕ ಚಲಾವಣೆಯಾದ ಮತಗಳು ಇವಿಎಂ ಕಂಟ್ರೋಲ್ ಯೂನಿಟ್‌ನಲ್ಲಿ ಸಂಗ್ರಹವಾಗಿರುತ್ತದೆ. ಕೆಲವೊಂದು ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿರುವ ವೇಳೆಯೇ ಇವಿಎಂ ಕೆಟ್ಟುಹೋಗುತ್ತದೆ. ಇಂತಹ ಸಂದರ್ಭದಲ್ಲಿ, ಚಲಾವಣೆಯಾಗಿರುವ ಮತಗಳಿಗೆ ಹಾನಿಯಾಗಬಾರದೆಂಬ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ.

ಇವಿಎಂ ಕೆಟ್ಟುಹೋದರೂ ಪುನಃ ಆರಂಭದಿಂದ ಮತದಾನ ಮಾಡಬೇಕಾದ ಅಗತ್ಯ ಇರುವುದಿಲ್ಲ. ಮತದಾನದ ನಂತರ, ಕೇಂದ್ರ ಪಡೆಗಳ ಮೇಲ್ವಿಚಾರಣೆಯಲ್ಲಿ ಇವಿಎಂಗಳನ್ನು ಸುರಕ್ಷಿತ ಕೊಠಡಿಗಳಲ್ಲಿ ಇರಿಸಲಾಗುತ್ತದೆ. ಇವಿಎಂ ಮಿಷನ್‌ ಗಳನ್ನ ಇಡುವ ಕೊಠಡಿಯನ್ನ ನು ಸ್ಟ್ರಾಂಗ್ ರೂಮ್‌ಗೆ ತಂದು ಕ್ರಮಬದ್ಧವಾಗಿ ಜೋಡಿಸಲಾಗುತ್ತದೆ. ಸ್ಟ್ರಾಂಗ್‌ ರೂಮ್‌ಗೆ ತರುವಾಗ ಮತ್ತು ಅಲ್ಲಿಂದ ಮತಎಣಿಕೆ ಸ್ಥಳಕ್ಕೆ ಕೊಂಡೊಯ್ಯುವಾಗ ಸಂಪೂರ್ಣ ಭದ್ರತೆಯೊಂದಿಗೆ ಬ್ಯಾರಿಕೇಡ್ ಪ್ರದೇಶದ ಮೂಲಕ ತೆಗೆದುಕೊಂಡು ಹೋಗಲಾಗುತ್ತದೆ.‌

strong room

ಸ್ಟ್ರಾಂಗ್‌ ರೂಮ್‌ ಎಂದರೇನು?

ಮತ ಎಣಿಕೆಗೂ ಮುನ್ನ ಮತ ಎಣಿಕೆ ಕೇಂದ್ರದಲ್ಲಿ ಇವಿಎಂ ಯಂತ್ರಗಳನ್ನು ಸಂಗ್ರಹಿಸಿಟ್ಟಿರುವ ಸ್ಟ್ರಾಂಗ್ ರೂಂನಿಂದ ಬಿಗಿ ಭದ್ರತೆಯೊಂದಿಗೆ ಇವಿಎಂಗಳನ್ನು ಮತಗಟ್ಟೆಗೆ ತರಲಾಗುತ್ತದೆ. ಮತದಾನದ ನಂತರ ಇವಿಎಂಗಳನ್ನು ಸ್ಟ್ರಾಂಗ್ ರೂಮ್‌ಗೆ ತಂದು ಇಟ್ಟಿರಲಾಗುತ್ತದೆ. ಇನ್ನೂ ಮತದಾನ ಮುಗಿದ ನಂತರ ಸ್ಟ್ರಾಂಗ್‌ ರೂಮ್‌ ಗೆ ಇವಿಎಂ ಮಿಷನ್‌ ಇಟ್ಟರೆ ಆ ಮಿಷನ್‌ ಗಳನ್ನ ಮತ ಎಣಿಕೆಯ ಸಂದರ್ಭದಲ್ಲಿ ಮಾತ್ರ ತೆಗೆಯಲಾಗುತ್ತದೆ.

ಇನ್ನೂ ಮತ ಎಣಿಕೆಯನ್ನು ಸುತ್ತುಗಳಲ್ಲಿ ಮಾಡಲಾಗುತ್ತದೆ. ಪ್ರತಿ ಸುತ್ತಿನಲ್ಲಿ 14 ಇವಿಎಂಗಳನ್ನು ತೆರೆಯಲಾಗುತ್ತದೆ. ಎಣಿಕೆಗೆ ಸುಭವಾಗುವಂತೆ ಕೆಲವೊಂದು ಲೆಕ್ಕಾಚಾರಗಳನ್ನು ಹಾಕಿ, ಚುನಾವಣಾ ಆಯೋಗವು ಪ್ರತಿ ಸುತ್ತಿನಲ್ಲಿ 14 ಇವಿಎಂಗಳ ಮತಗಳನ್ನು ಎಣಿಕೆ ಮಾಡುವ ನೀತಿ ರೂಪಿಸಿದೆ. ಒಂದು ಬೂತ್‌ಗೆ ಒಂದರಂತೆ ಇವಿಎಂ ಇರುತ್ತದೆ. ಮತದಾನದ ಬಳಿಕ ಮತ ಎಣಿಕೆಯವರೆಗೂ ಇವಿಎಂ ಗಳನ್ನ ಸ್ಟ್ರಾಂಗ್‌ ರೂಮ್‌ ನಲ್ಲಿ ಭದ್ರಗೊಳಿಸಲಾಗಿರುತ್ತದೆ.

ಸ್ಟ್ರಾಂಗ್ ರೂಂ ನಲ್ಲಿ ಅನುಸರಿಸುವ ಟಫ್ ರೂಲ್ಸ್ ಏನು ?

*ಅನವಶ್ಯಕವಾಗಿ ಸ್ಟ್ರಾಂಗ್ ರೂಮ್ ಒಳಗಡೆ ಯಾರನ್ನು ಬಿಡುವುದಿಲ್ಲ.

*ಅಧಿಕೃತ ಅಧಿಕಾರಿಗಳಿಗೆ ಮಾತ್ರ ಸ್ಟ್ರಾಂಗ್ ರೂಮ್‌ ಗೆ ಪ್ರವೇಶ

*ಸ್ಟ್ರಾಂಗ್ ರೂಮ್ ಒಳಗೆ ಭದ್ರತಾ ಸಿಬ್ಬಂದಿಗಳು ಓಪನ್ ಮಾಡಿದ ನಂತರ ರೂಮ್‌ ಒಳಗೆ ಹೋಗುವ ಅಧಿಕಾರಿಗಳು ಪೋನ್‌ ಬಳಸುವಂತಿಲ್ಲ

*ಸ್ಟ್ರಾಂಗ್ ರೂಮ್ ಒಳಗೆ ಹೋಗುವ ಅಧಿಕಾರಿಗಳು ತಮ್ಮ ತಮ್ಮ ಮೊಬೈಲ್ ಫೋನ್ ಗಳನ್ನು ಆಚೆಯೇ ಇಟ್ಟು ಹೋಗಬೇಕು

*ಸ್ಟ್ರಾಂಗ್ ರೂಮ್ ಒಳಗೆ ಹೋಗುವ ಅಧಿಕಾರಿಗಳು ತಮ್ಮ ಐಡಿ ಕಾರ್ಡನ್ನು ಧರಿಸಕೊಳ್ಳಬೇಕು

*ಪ್ರತಿಯೊಂದು ಇವಿಎಂ ಮಿಷನ್ಗಳನ್ನ ಪರಿಶೀಲಿಸಿ ತದನಂತರ ಸ್ಟ್ರಾಂಗ್ ರೂಮ್ ನಿಂದ ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗಲಾಗುವುದು

*ಮತದಾನ ಮುಗಿದ ಬಳಿಕ ಇವಿಎಂ ಗಳನ್ನ ಸ್ಟ್ರಾಂಗ್ ರೂಮ್ ಗೆ ತಂದು ಭದ್ರಗೊಳಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+