Karnataka Elections : 4 ಲಕ್ಷಕ್ಕೂ ಅಧಿಕ ಮತದಾರರು ಇರುವ 8 ಕ್ಷೇತ್ರಗಳ ಪಟ್ಟಿ
ಬೆಂಗಳೂರು, ಮೇ 5: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ ಹತ್ತರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಹೊರಬೀಳಲಿದೆ. ಕೇಂದ್ರ ಚುನಾವಣಾ ಆಯೋಗವು ಕ್ಷೇತ್ರಾವಾರು ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದೆ. ರಾಜ್ಯದ ಕೆಲವು ಕ್ಷೇತ್ರದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚಿನ ಮತದಾರರು ಇದ್ದಾರೆ.
ರಾಜ್ಯದ ಒಟ್ಟು 224ಕ್ಷೇತ್ರಗಳ ಪೈಕಿ 8 ಅಸೆಂಬ್ಲಿ ಕ್ಷೇತ್ರಗಳಲ್ಲಿ ಮತದಾರರ ಒಟ್ಟು ಸಂಖ್ಯೆ ನಾಲ್ಕು ಲಕ್ಷಕ್ಕೂ ಹೆಚ್ಚಿದೆ. ಈ ಎಲ್ಲಾ ಎಂಟು ಕ್ಷೇತ್ರಗಳು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಕ್ಷೇತ್ರಗಳಾಗಿವೆ. ಮತ್ತು, ಈ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರಿಗೆ ಹೋಲಿಸಿದರೆ ಪುರುಷ ಮತದಾರರ ಸಂಖ್ಯೆ ಹೆಚ್ಚು. ಒಂದು ಕ್ಷೇತ್ರವನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಕ್ಷೇತ್ರದಲ್ಲಿ ಇತರ ಮತದಾರರು ಇದ್ದಾರೆ.

ಇಡೀ ರಾಜ್ಯದಲ್ಲಿ ಅತಿ ಹೆಚ್ಚಿನ ಮತದಾರರು ಇರುವುದು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ. ಕಳೆದ ಮೂರು ಚುನಾವಣೆಯಿಂದ ಬಿಜೆಪಿಯ ಎಂ.ಕೃಷ್ಣಪ್ಪ ಇಲ್ಲಿಂದ ಗೆದ್ದು ಬರುತ್ತಿದ್ದಾರೆ. ಈ ಬಾರಿಯೂ ಕೃಷ್ಣಪ್ಪ ಕಣದಲ್ಲಿದ್ದಾರೆ, ಜೆಡಿಎಸ್ಸಿನಿಂದ ರಾಜಗೋಪಾಲ ರೆಡ್ಡಿ, ಕಾಂಗ್ರೆಸ್ಸಿನಿಂದ ಆರ್.ಕೆ.ರಮೇಶ್, ಆಪ್ ನಿಂದ ಅಶೋಕ್ ಮೃತ್ಯುಂಜಯ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ 5.8ಲಕ್ಷಕ್ಕೂ ಹೆಚ್ಚು ಮತದಾರು ಇದ್ದಾರೆ.
ರಾಜ್ಯ ಚುನಾವಣಾ ಆಯೋಗ ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರ ನಡುವೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಬಿಡುಗಡೆ ಮಾಡಿದೆ. ಮೂರು ಪಕ್ಷಗಳಲ್ಲೂ ಕ್ರಿಮಿನಲ್ ಹಿನ್ನಲೆಯುಳ್ಳ ಅಭ್ಯರ್ಥಿಗಳಿದ್ದಾರೆ. ಇದರಲ್ಲಿ ಕಾಂಗ್ರೆಸ್ಸಿನಲ್ಲಿ ಶೇ. 55, ಬಿಜೆಪಿಯಲ್ಲಿ ಶೇ. 31 ಮತ್ತು ಜೆಡಿಎಸ್ ನಲ್ಲಿ 25% ಅಭ್ಯರ್ಥಿಗಳು ಗಂಭೀರ ಅಪರಾಧ ಪ್ರಕರಣಗಳನ್ನು ಘೋಷಿಸಿದ್ದಾರೆ.
ನಾಲ್ಕು ಲಕ್ಷಕ್ಕೂ ಅಧಿಕ ಮತದಾರರನ್ನು ಹೊಂದಿರುವ ರಾಜ್ಯದ ಎಂಟು ಕ್ಷೇತ್ರಗಳ ಪಟ್ಟಿ ಈ ರೀತಿಯಿದೆ: (Source: ADR Press Release dated 3rd May, 2023)
| ಕ್ಷೇತ್ರದ ಸಂಖ್ಯೆ | ಕ್ಷೇತ್ರದ ಹೆಸರು | ಪುರುಷರು | ಮಹಿಳೆಯರು | ಇತರರು | ಒಟ್ಟು ಮತದಾರರು |
| 151 | ಕೆ.ಆರ್.ಪುರ | 2,30,059 | 2,07,983 | 114 | 4,38,156 |
| 152 | ಬ್ಯಾಟರಾಯನಪುರ | 2,19,869 | 1,99,746 | 79 | 4,19,694 |
| 153 | ಯಶವಂತಪುರ | 2,36,234 | 2,17,276 | 47 | 4,53,557 |
| 154 | ರಾಜರಾಜೇಶ್ವರಿನಗರ | 2,38,022 | 2,16,822 | 65 | 4,54,909 |
| 155 | ದಾಸರಹಳ್ಳಿ | 2,36,895 | 2,00,149 | 0 | 4,37,044 |
| 174 | ಮಹಾದೇವಪುರ (ST) | 2,56,286 | 2,14,483 | 149 | 4,70,918 |
| 175 | ಬೊಮ್ಮನಹಳ್ಳಿ | 2,19,337 | 1,85,633 | 69 | 4,05,039 |
| 176 | ಬೆಂಗಳೂರು ದಕ್ಷಿಣ | 3,11,437 | 2,69,882 | 103 | 5,81,422 |












Click it and Unblock the Notifications